-->
Bookmark

Gajendragad : ಕಲಿಕೆಯೊಂದಿಗೆ ಜವಾಬ್ದಾರಿ ನಿರ್ವಹಿಸಿ - ವಿದ್ಯಾಥಿಗಳಿಗೆ ಮಹೇಂದ್ರಕುಮಾರ್ ಕಿವಿಮಾತು

Gajendragad : 

ಕಲಿಕೆಯೊಂದಿಗೆ ಜವಾಬ್ದಾರಿ ನಿರ್ವಹಿಸಿ - ವಿದ್ಯಾಥಿಗಳಿಗೆ ಮಹೇಂದ್ರಕುಮಾರ್ ಕಿವಿಮಾತು 

ಯುವ ಪೀಳಿಗೆಯಲ್ಲಿ ಆಧ್ಯಾತ್ಮಿಕತೆ ಕಡಿಮೆಯಾಗುತ್ತಿರುವ ಇಂದಿನ ಯುಗದಲ್ಲಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುವದರ ಜೊತೆಗೆ ದೇವಸ್ಥಾನವನ್ನ ಸ್ವಚ್ಛಗೊಳಿಸಿದ್ದಾರೆ. ಗಜೇಂದ್ರಗಡದ ಬಿಎಸ್‌ಎಸ್ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಕುಷ್ಟಗಿಯ ಚಂದಲಿAಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದೇವಸ್ಥಾನವಾದ್ದರಿಂದ ಪ್ರತಿ ನಿತ್ಯ ಪ್ರವಾಸಿಗರು ಬರುತ್ತಾರೆ. ಇಲ್ಲಿ ಪ್ಲಾಸ್ಟಿಕ್ ಬಳಕಯೆಯೂ ವ್ಯಾಪಕವಾಗಿ ನಡೆಯುತ್ತದೆ. ಇದನ್ನರಿತ ಸ್ಕೌಟ್ಸ್ & ಗೈಡ್ ತಂಡ ಭೇಟಿ ನೀಡಿ, ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೇ, ದೇವಸ್ಥಾನ ಆವರಣ ಸ್ವಚ್ಛಗೊಳಿಸುವ ಕಾರ್ಯ ಸಹ ಮಾಡಿದರು. 
ಪ್ಲಾಸ್ಟಿಕ್ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಮರು ಬಳಕೆಯಾಗುವಂತಹ ಪ್ಲಾಸ್ಟಿಕ್ ಬಳಕೆ ಮಾಡಬಹುದು. ಆದ್ರೂ, ಅದು ಅನಿವಾರ್ಯ ಸಮಯದಲ್ಲಿ ಮಾತ್ರ. ಈಗ, ಬೆಳಗ್ಗೆ ತರಕಾರಿ ತರಲು, ಗೃಹ ಬಳಕೆ ವಸ್ತುಗಳ ತರಲು ಸೇರಿದಂತೆ ಪ್ರತಿಯೊಂದು ವಸ್ತುಗಳನ್ನು ಪ್ಲಾಸ್ಟಿಕ್ ನಲ್ಲೆ ಕೊಡುತ್ತಾರೆ. ಇದು ಗಜೇಂದ್ರಗಡ ಮತ್ತು ಅಕ್ಕಪಕ್ಕದ ಗ್ರಾಮ ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನ ಅರಿತ ಗಜೇಂದ್ರಗಡದ ಬಿಎಸ್‌ಎಸ್ ಕಾಲೇಜಿನ ಸ್ಕೌಟ್ಸ್ & ಗೈಡ್ಸ್ ಘಟಕ, ಈ ಮಹತ್ತರ ಕಾರ್ಯವನ್ನ ಮಾಡಿದೆ.
 ಕಾಲೇಜಿನ ಆಡಳಿತ ಮಂಡಳಿಯೂ ಸಾರ್ವಜನಿಕ ವಲಯದಲ್ಲಿ ಅತ್ಯುತ್ತಮ ಕೆಲಸವನ್ನ ಮಾಡುತ್ತಿದೆ. 
ಚಂದಲಿAಗೇಶ್ವರಕ್ಕೆ ತೆರಳಿ ದೇವರ ದರ್ಶನದ ಜೊತೆಗೆ ಸ್ವಚ್ಛತಾ ಕಾರ್ಯ ಮತ್ತು ಪರಿಸರ ಜಾಗೃತಿ ಮೂಡಿಸುವುದನ್ನ ಸಾರ್ವಜನಿಕ ವಲಯದಲ್ಲಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಪರಿಸರ ನಾಶ ಮಾಡುತ್ತಿದ್ದೇವೆ. ಅದರಿಂದ ಜಾಗತಿಕ ತಾಪಮಾನ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾ ಬೀರುತ್ತಿದೆ. ಬೀಸಿಲ ಧಗೆ ಒಂದೆಡೆಯಾದ್ರೆ, ಮತ್ತೊಂದೆಡೆ ಅಕಾಲಿಕ ಮಳೆಯಾಗುತ್ತಿದೆ. ಇನ್ನೂ, ಕೆಲವೆಡೆ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿಯೂ ಇದೆ. ಇದೆಲ್ಲವನ್ನರಿತು ವಿದ್ಯಾರ್ಥಿಗಳ ತಂಡದೊಂದಿಗೆ ತೆರಳಿ ಶ್ರಮ ದಾನ ಮಾಡಿದ್ದಾರೆ. 
ಉತ್ತಮ ತಂಡ ಇದ್ರೆ ಸಾಲದು ಅದನ್ನ ಮುನ್ನಡೆಸುವ ಕ್ಯಾಪ್ಟನ್ ಚಾಣಾಕ್ಷನಾಗಿರಬೇಕು. ಎಲ್ಲರನ್ನ ಒಗ್ಗೂಡಿಸುವ ಕಲೆಯೂ ಇರಬೇಕು. ವಿದ್ಯಾರ್ಥಿಗಳನ್ನ ಕಲಿಕೆಗಷ್ಟೇ ಸೀಮಿತ ಮಾಡದೇ, ಎಲ್ಲ ರಂಗದಲ್ಲೂ ಪ್ರತಿಭೆ ಅನಾವರಣ ವಾಗುವಂತೆ ಮಾಡುವುದು ಸಹ ಕರಗತವಾಗಿರಬೇಕು. ಅಂತಹ ನಾಯಕ ಮಹೇಂದ್ರ ಕುಮಾರ್ ಅವರಾಗಿದ್ದು, ಕಾಲೇಜ್ ಅನ್ನ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ, ಮಕ್ಕಳಲ್ಲಿ ಪರಿಸರ ಕಾಳಜಿ ವಹಿಸುತ್ತಿರುವುದು ಸಹ ಶ್ಲಾಘನೀಯ.. 
ಈ ಕಾರ್ಯಕ್ಕೆ ಸಾತ್ ನೀಡಿದ್ದು, ಪ್ರಿನ್ಸಿಪಲ್ ಮಹೇಂದ್ರಕುಮಾರ್, ಸ್ಕೌಟ್ಸ್ & ಗೈಡ್ಸ್ ಮುಖ್ಯಸ್ಥ ಹಿತೇಶ್ ಬಿ, ಸರಸ್ವತಿ ಕೆ. ಮಹಾಂತೇಶ್, ಜೀವಿತಾ ಎಂ, ಸಿದ್ದೇಶ್ ಕೆ. ಮತ್ತು ವಿದ್ಯಾರ್ಥಿಗಳು..
Post a Comment

Post a Comment