-->
Bookmark

Gajendragad : “ರಾಹುಲ್” ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ – ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮವೋ ಸಂಭ್ರಮ...!

Gajendragad : 

“ರಾಹುಲ್” ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ – ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮವೋ ಸಂಭ್ರಮ...!

ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಗುಜರಾತ್ ಹೈಕೋರ್ಟ್ ನೀಡಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿರುವುದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಗೆಲುವಿನ ಸಂಭ್ರಮ ಮನೆ ಮಾಡಿದೆ. 
ದೇಶಾದ್ಯಂತ ಕಾಂಗ್ರೆಸ್ ಸಂಭ್ರಮ ಆಚರಿಸುತ್ತಿದ್ದರೇ, ಇತ್ತ ಗದಗ ಗಜೇಂದ್ರಗಡದಲ್ಲೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಕಾಂಗ್ರೆಸ್ ಮುಖಂಡ ರಾಜು ಸಾಂಗ್ಲೀಕರ್ ಅವರ ನೇತೃತ್ವದಲ್ಲಿ ಪಟ್ಟಣದ ಡಬಲ್ ರಸ್ತೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. 
ಈ ವೇಳೆ, ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜು ಸಾಂಗ್ಲೀಕರ್ ಇಂದು ಸಂವಿಧಾನದ ಗೆಲುವಾಗಿದೆ ಎಂದರು. ಒಂದಲ್ಲಾ ಒಂದು ದಿನ ಸತ್ಯಕ್ಕೆ ಗೆಲುವು ಸಿಕ್ಕೆ ಸಿಗುತ್ತದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಮಗೆ ಸಂತಸ ತಂದಿದೆ. ಇದು ಪ್ರಜಾಪ್ರಭುತ್ವದ ಗೆಲುವು, ಸತ್ಯ ಮೇವ ಜಯತೇ ಎಂದು ಬಣ್ಣಿಸಿದರು.
ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡಿ ಬಡವರನ್ನು ಭೇಟಿಯಾಗಿದ್ದರು. ಅವರು ಕೋಲಾರದಲ್ಲಿ ಭಾಷಣ ಮಾಡಿದ್ದರು. ಆದರೆ, ಗುಜರಾತ್ ನ್ಯಾಯಾಲಯದಿಂದ 2 ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು. ತೀರ್ಪು ನೀಡಿದ 24 ಗಂಟೆಯಲ್ಲೇ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆದರೆ, ಈಗ ಸುಪ್ರೀಂಕೋರ್ಟ್ ಸತ್ಯದ ಪರ ತೀರ್ಪು ನೀಡಿದ್ದು, ಇದು ವಯನಾಡು ಕ್ಷೇತ್ರದ ಎಲ್ಲಾ ಮತದಾರರ ಗೆಲುವು ಎಂದು ಸಾಂಗ್ಲೀಕರ್ ಹೇಳಿದರು.
ಈ ವೇಳೆ, ಅಲ್ಲಾಭಕ್ಷಿ ಆಲಿ, ಶರಣಪ್ಪ ಬಳಿಗೇರ್, ಆಫೀಸ್ ಸಾಂಗ್ಲೀಕರ್, ತಾಜು ನಿಶಾನದಾರ್, ಕೆಸಿ ಗೊಡೇಕಾರ್, ಅಲ್ಲಾಭಕ್ಷಿ ಮುಚ್ಚಲಿ, ಬಸವರಾಜ್ ಬೆನಕನವಾರಿ, ಮಾಬುಸಾಬ್ ಗೊಡೇಕಾರ್, ರಿಹಾನ್ ಪಾಷಾ ಸಾಂಗ್ಲೀಕರ್, ರಾಜಾಸಾಬ್ ಪಠಾಣ್, ಆಕಾಶ್ ರಾಠೋಡ್, ಖಾಜೀರಸಾಬ್ ಸುಂಕದ ಸೇರಿದಂತೆ ಅನೇಕರು ಭಾಗವಹಿಸಿದ್ದರು.
 

Post a Comment

Post a Comment