-->
Bookmark

Gajendragad : ವಿಠ್ಠಲ ಮಾಳೋತ್ತರ್ ನಿಸ್ವಾರ್ಥ ಸೇವೆಗೆ ರಾಷ್ಟ್ರೀಯ ಪ್ರಶಸ್ತಿ

Gajendragad : ವಿಠ್ಠಲ ಮಾಳೋತ್ತರ್ ನಿಸ್ವಾರ್ಥ ಸೇವೆಗೆ ರಾಷ್ಟ್ರೀಯ ಪ್ರಶಸ್ತಿ 

ಬಂಜಾರ ಸಮುದಾಯದವರು ಸಾಹಸಿಗರು. ಯಾವುದೇ ಸಂಧರ್ಭದಲ್ಲಾದರೂ ಸರಿ, ತಮಗೆ ವಹಿಸಿದ ಕೆಲಸವನ್ನ ನಿಸ್ವಾರ್ಥವಾಗಿ ನಿರ್ವಹಿಸುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ವಿಠಲ ಮಾಳೋತ್ತರ ಅವರು. ಅವರ ಸಾಹಸಕ್ಕೆ ಮೆಚ್ಚಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ೩೨ ವರ್ಷದ ವಿಠ್ಠಲ ಅವರು ನಿಸ್ವಾರ್ಥ ಸೇವೆಯ ಯನ್ನ ಮಾಡುತ್ತಾರೆ. ಹೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುವ ಇವರು. ಕಾಯಕವೇ ಕೈಲಾಸ ಎಂಬ ಧ್ಯೆಯದೊಂದಿಗೆ ಸೇವೆ ಸಲ್ಲಿಸುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಗಳು ಹೇಳಿದ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. 
ಇವರ ನಿಸ್ವಾರ್ಥ ಸೇವೆಗೆ "ಶ್ರೀನಿಧಿ ಫೌಂಡೇಶನ್ ಕರ್ನಾಟಕ" ಹಾಗೂ "ನಮ್ಮವರಿಗಾಗಿ ನಮ್ಮ ಧ್ವನಿ ಸಮಾಜಮುಖಿ ಸೇವಾ ಸಂಘ" ಸಹಯೋಗದಲ್ಲಿ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತದೆ. ಈ ಸಮಾರಂಭ ಆಗಸ್ಟ್ ೧೩ ರಂದು ಗೋವಾದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಗಣ್ಯರಿಗೆ ಸನ್ಮಾನ ಮಾಡಲಿದ್ದಾರೆ. ಇವರ ಸಾಲಿನಲ್ಲಿ ವಿಠ್ಠಲ ಮಾಳೋತ್ತರ ಇರಲಿದ್ದಾರೆ. 
ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗುತ್ತಿದ್ದಂತೆ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹೆಸ್ಕಾಂ ಅಧಿಕಾರಿಗಳು, ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಬಂಜಾರ ಸಮುದಾಯ ಬಾಂಧವರು ಗುರುಹಿರಿಯರು ವಿಠ್ಠಲ ಮಾಳೋತ್ತರ ಅವರಿಗೆ ಶುಭಾಶಯ ತಿಳಿಸಿದ್ದಾರೆ.
Post a Comment

Post a Comment