-->
Bookmark

Gadag : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಆಯ್ಕೆ - ಪ್ರಶಾಂತ್ ನಾಗರಳ್ಳಿ ನೇತೃತ್ವಲ್ಲಿ ಸನ್ಮಾನ

Gadag
 : 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಆಯ್ಕೆ - ಪ್ರಶಾಂತ್ ನಾಗರಳ್ಳಿ ನೇತೃತ್ವಲ್ಲಿ ಸನ್ಮಾನ

ಗದಗ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಯಾಗಿ ಆಯ್ಕೆಯಾದ ರವಿ.ಎಲ್ ಗುಂಜಿಕರ್, ಮತ್ತು ಹಿಂದುಳಿದ ವರ್ಗಗಳ ತಾಲೂಕಾಧಿಕಾರಿ ಡಾ. ಬಸವರಾಜ್ ವೆಂಕಪ್ಪ ಬಳ್ಳಾರಿ ಇವರನ್ನ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದವರು ಸನ್ಮಾನ ಮಾಡಿದರು. ಭೋವಿ ಸಮಾಜದಿಂದ ಉನ್ನತ ಹುದ್ದೆ ಅಲಂಕರಿಸಿದ ಈ ಇಬ್ಬರು ನಾಯಕರನ್ನ ಸನ್ಮಾನಿಸಿದರು. ಭೋವಿ ಸಮಾಜದ ಯುವಕರಿಗೆ ಮಾದರಿಯಾಗಲಿ, ಇವರಂತೆ ಭೋವಿ ಸಮಾಜದ ಯುವಕರು ಉನ್ನತ ಹುದ್ದೆ ಅಲಂಕರಿಸಲಿ. ಮತ್ತು ಇವರನ್ನ ಮಾದರಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ರವಿ ಗುಂಜಿಕರ್, ಮತ್ತು ಡಾ ಬಸವರಾಜ್ ಬಳ್ಳಾರಿ ಅವರ ಸಾಧನಯೆನ್ನ ಕೊಂಡಾಡಿದರು. 
ಇನ್ನೂ, ಯುವಕರನ್ನ ಓದಿನೆಡೆಗೆ ಹುರಿದುಂಬಿಸಲು ಇಂತಹ  ಕಾರ್ಯಕ್ರಮದ ಅಗತ್ಯತೆ ಹೆಚ್ಚಿದೆ. ಜೊತೆಗೆ ಉನ್ನತ ಹುದ್ದೆ ಅಲಂಕರಿಸುವುದು ಸುಲಭದ ಮಾತಲ್ಲ. ಅವರಂತೆ ಸಮಾಜದ ಎಲ್ಲ ಯುವಕರು ಆಗಬೇಕೆಂದು ಅವರ ಗಮನ ಓದಿನೆಡೆಗೆ ಹರಿಸಬೇಕೆಂಬುದು ಪ್ರಶಾಂತ್ ನಾಗರಳ್ಳಿ ಅವರ ಅಭಿಪ್ರಾಯವಾಗಿದೆ. 
ಬೋವಿ ಸಮಾಜದ ಅಧ್ಯಕ್ಷ ವೆಂಕಟೇಶ್ ಗೆಜ್ಜಿ, ಉಪಾಧ್ಯಕ್ಷ ಪ್ರಶಾಂತ್ ನಾಗರಳ್ಳಿ, ಯಂಕಪ್ಪ ಬಳ್ಳಾರಿ, ಮುದಕಪ್ಪ ಜಂಗನವಾರಿ, ಜೊತೆಗೆ ಮುಖಂಡರಾದ ಹುಸೇನಸಾಬ್ ಹುಲಿಕಟ್ಟಿ, ಜಂದಿಸಾಬ ಮುಂಡರಗಿ, ಸುಭಾಶ್ ಅಳ್ಳಿಗುಡಿ, ಶರಣಪ್ಪ ಹಳ್ಳಿ ತಳವಾರ್, ಸಿದ್ದಪ್ಪ ಜಂಗನವಾರಿ, ಚಂದ್ರಪ್ಪ ಗಡಾದ್, ಬಸವರಾಜ್ ಗದುಗಿನ, ತಿರುಪತಿ ಕರೆಕಲ್ಲ ಸೇರಿದಂತೆ ಹಿರೇವಡ್ಡಟ್ಟಿ ಗ್ರಾಮದ ಗುರುಹಿರಿಯರು ಹಾಜರಿದ್ದರು.

Post a Comment

Post a Comment