Kanavi :
ಭಾವಪೂರ್ಣ ಶ್ರದ್ಧಾಂಜಲಿ
ನಾರಾಯಣಪ್ಪ ರಾಮಚಂದ್ರಪ್ಪ ರಾಠೋಡ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೬೫ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಜೊತೆಗೆ ಅಪಾರ ಬಂಧುಗಳನ್ನ ಅಗಲಿದ್ದಾರೆ. ನಾರಾಯಣಪ್ಪ ರಾಠೋಡ ಅವರ ಅಂತ್ಯಕ್ರಿಯೆ ಮಂಗಳವಾರ(1-8-2023) ಬೆಳಗ್ಗೆ 11 ಘಂಟೆಗೆ ಗಜೇಂದ್ರಗಡ ತಾಲ್ಲೂಕಿನ ಕಣವಿ(ಜಿಗೇರಿ) ಯ ಸ್ವಗ್ರಹದ ಬಯಲು ಜಾಗೆಯಲ್ಲಿ ನಡೆಯಲಿದ್ದು, ಕುಟುಂಬದಲ್ಲಿ ನಿರವಮೌನ ಆವರಿಸಿದೆ.
ಶಾಸಕ ಜಿ.ಎಸ್.ಪಾಟೀಲ, ಗ್ರಾ.ಪಂ ಮಾಜಿ ಅಧ್ಯಕ್ಷೆ ಗಂಗವ್ವ ಕೃಷ್ಣಪ್ಪ ರಾಠೋಡ, ಮಾಜಿ ಉಪಾಧ್ಯಕ್ಷ ಸೋಮಪ್ಪ ರಾಠೋಡ, ಪ್ರಥಮ ದರ್ಜೆ ಗುತ್ತಿಗೆದಾರ ಕುಮಾರ ರಾಠೋಡ, ಅರ್ಜುನ ರಾಠೋಡ ಸೇರಿದಂತೆ ಸಂತಾಪ ಸೂಚಿಸಿದ್ದಾರೆ. ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ
ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
Post a Comment