-->
Bookmark

Gadag : ಜಿಲ್ಲಾ ಮಟ್ಟದ ಸಂಸ್ಕೃತ ಸ್ಪರ್ಧೆ _ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಸ್ಕ್ರತ ಪಾಂಡಿತ್ಯ

Gadag : ಜಿಲ್ಲಾ ಮಟ್ಟದ ಸಂಸ್ಕೃತ ಸ್ಪರ್ಧೆ _ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಸ್ಕ್ರತ ಪಾಂಡಿತ್ಯ 

ಗದಗ : ( Sept 29_09_2023 )
“ಸಂಸ್ಕೃತ ಶ್ರಾವಣೀ” ಸಮಾರೋಪ ಸಮಾರಂಭ ಅಂಗವಾಗಿ ಜಿಲ್ಲಾ ಮಟ್ಟದ ಸುಭಾಷಿತ, ಭಗವದ್ಗೀತಾ ಹಾಗೂ ಪ್ರಬಂಧ ಸ್ಪರ್ಧೆಗಳು ದಿ.೨೭.೦೯.೨೦೨೩ ರಂದು ಗದಗದ ಶ್ರೀ ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಜರುಗಿತು. ಸೂಡಿಯ ಶ್ರೀ ಗಜಾನನ ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳಾದ ಕುಮಾರಿ ನಿರ್ಮಲಾ ಗೌಡ್ರ ಭಗವದ್ಗೀತಾ ಕಂಠಪಾಠದಲ್ಲಿ ಪ್ರಥಮ ಹಾಗೂ ಪ್ರಬಂಧ ಸ್ಪರ್ಧೇಯಲ್ಲಿ ಕುಮಾರಿ ವೀಣಾ ಪತ್ತಾರ ಪ್ರಥಮ ಸ್ಥಾನ ಗಳಿಸಿದರು. ೨೦೨೨-೨೩ ನೆಯ ಸಾಲಿನ ಸಂಸ್ಕೃತ ಪ್ರಸಿದ್ಧ ಪರೀಕ್ಷೆಗಳಲ್ಲಿ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಲಾಯಿತು. ಸೂಡಿಯ ಶ್ರೀ ಗಜಾನನ ಸಂಸ್ಕೃತ ಪಾಠಶಾಲೆಯ ಕುಮಾರಿ ರಾಜೇಶ್ವರಿ ದೊಡ್ಡಮನಿ ಕಾವ್ಯ ವಿಭಾಗದಲ್ಲಿ ತೃತೀಯ, ಹಾಗೂ ಸಾಹಿತ್ಯ ವಿಭಾಗದಲ್ಲಿ ಕುಮಾರಿ ಸಂಗೀತಾ ಕುಟಕನಕೇರಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಾಲೆಯ ಸಹ ಶಿಕ್ಷಕರು , ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
Post a Comment

Post a Comment