-->
Bookmark

Gajendragad : ಅಲ್ಪ ಸಂಖ್ಯಾತರಿಗೆ ನಿಗಮ ಮಂಡಳಿ ಸ್ಥಾನ ನೀಡಲು ಶಾಸಕರಿಗೆ ಮನವಿ

Gajendragad : 
ಅಲ್ಪ ಸಂಖ್ಯಾತರಿಗೆ ನಿಗಮ ಮಂಡಳಿ ಸ್ಥಾನ ನೀಡಲು ಶಾಸಕರಿಗೆ ಮನವಿ

ಗಜೇಂದ್ರಗಡ: ( Sept 28_09_2023)
ಮುಸ್ಲಿಂ ಸಮುದಾಯವು ಆರ್ಥಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾಗಿದ್ದು ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಸಮುದಾಯದ ಮುಖಂಡರಿಗೆ ಈ ಬಾರಿ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸುವಂತೆ ಶಾಸಕ ಜಿ ಎಸ್ ಪಾಟೀಲ ಅವರಿಗೆ ಮುಸ್ಲಿಂ ಸಮಾಜದಿಂದ ಪ್ರಾಸ್ತವನೆ ಸಲ್ಲಿಸಲಾಯಿತು.

ಹಜರತ ಮಹಮ್ಮದ್ ಪೈಗಂಬರ್ ಜನ್ಮದಿನೋತ್ಸವದ ಅಂಗವಾಗಿ ನೂತನ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ ಎಸ್ ಪಾಟೀಲ್ ಈ ಚುನಾವಣೆಯಲ್ಲಿ ಮುಸ್ಲಿಂ ಸಮಾಜದ ಕೊಡುಗೆ ಅಪಾರವಾಗಿದ್ದು ಸದಾ ಚೀರೃಣಿ ಎಂದರು.

ಸಮಾಜದ ಅಭಿವೃದ್ಧಿಗೆ ನಾನು ಸದಾ ಬೆಂಬಲವಾಗಿ ನಿಲ್ಲುವೆ. ನಿಗಮ ಮಂಡಳಿ, ಸಮುದಾಯದ ಜನರಿಗೆ ಆಶ್ರಯ ಮನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಭರವಸೆ ನೀಡಿದರು.
ಈ ವೇಳೆ ಸಂಸ್ಥೆಯ ನಿರ್ದೇಶಕ ದಾವಲಸಾಬ ತಾಳಿಕೋಟಿ ಸಂವಿಧಾನ ಪಿಠೀಕೆ ಓದಿಸಿ ಸಮುದಾಯದ ಜನರಿಗೆ ಆಶ್ರಯ ಮನೆ, ನಿಗಮ ಮಂಡಳಿ, ಶೈಕ್ಷಣಿಕ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಪ್ರಾಸ್ತವನೆಯನ್ನು ಸಲ್ಲಿಸಿದರು..

ಅಧ್ಯಕ್ಷ ಹಸನಸಾಬ ತಟಗಾರ ಮಾತನಾಡಿ ಜಿ.ಎಸ್.ಪಾಟೀಲ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದು ಶಾದಿಮಹಲ್, ಜಾಮೀಯ ಮಸೀದಿ ನವೀಕರಣಕ್ಕೆ ಹಾಗೂ ಶವಯಾತ್ರೆಗೆ ವಾಹನದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು. ಡಾ. ಕಾಲಜ್ಞಾನ  ಡಾ ಶರಣ ಬಸವ ಶ್ರೀ, ನಿಜಾಮುದ್ದಿನಷಾ ಮಕಾನದಾರ ದಿವ್ಯ ಸಾನಿಧ್ಯ ವಹಿಸಿದ್ದರು

ಕಾರ್ಯಕ್ರಮದಲ್ಲಿ ಅನಿಷ ಕೌಸರಿ, ಮುಸ್ಕಾನ ಸೈಯದ್, ಅಮೀರ ಬನ್ನೂರಿ, ಎ ಡಿ ಕೋಲಕಾರ, ಎಂ ಎಚ್ ಕೋಲಕಾರ, ನಾಸೀರ ಸುರಪುರ, ಸುಭಾನ ಆರಗಿದ್ದಿ, ಶಾಮೀದ ಮಾಲ್ದಾರ, ಇಮ್ರಾನ ಅತ್ತಾರ, ಭಾಷಾ ಮುದಗಲ್ಲ, ಎ ಕೆ ಕಾತರಕಿ, ಮುಸ್ತಾಕ ಅಹ್ಮದ ಅಕ್ಕಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಕಾರ್ಯದರ್ಶಿ ಫಯಾಜ್ ತೋಟದ ನಿರೂಪಿಸಿದರು..
Post a Comment

Post a Comment