-->
Bookmark

Gajendragad : ಪುರಾಣ ಮಾಹಾ ಮಂಗಲೋತ್ಸವ : ನಾಳೆ ಗಜೇಂದ್ರಗಡದಲ್ಲಿ ಭಾವಚಿತ್ರ ಮೆರವಣಿಗೆ

Gajendragad : ಪುರಾಣ ಮಾಹಾ ಮಂಗಲೋತ್ಸವ : ನಾಳೆ ಗಜೇಂದ್ರಗಡದಲ್ಲಿ ಭಾವಚಿತ್ರ ಮೆರವಣಿಗೆ 

ಗಜೇಂದ್ರಗಡ : ( sept 15 2023 )

 ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ ಉಣಚಗೇರಿ ವತಿಯಿಂದ ಶ್ರೀ ಮಹಾದಾಸೋಹ ಮೂರ್ತೀ ಬರಗಾಲದಬಂಟ ಕಲಬುರ್ಗಿ ಶ್ರೀ ಶರನಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ಅಂಗವಾಗಿ ಶುಕ್ರವಾರ ಮೈಸೂರ ಮಠದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಸೆ.೧೬ ಶನಿವಾರದಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಕಲಬುರ್ಗಿ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ಮೈಸೂರು ಮಠದಿಂದ ಪ್ರಾರಂಭವಾಗಿ ವಿವಿಧ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆಯು ಬಸವೇಶ್ವರ ಸರ್ಕಲ್, ಕಮ್ಮಾರ ಸಾಲ, ಕೊಳ್ಳಿಯವರ ಕ್ರಾಸ್, ಕಟ್ಟಿಬಸವೇಶ್ವರ ರಂಗಮಂದಿರ, ಹಿರೇಬಜಾರ ಅಗಸಿಬಾಗಿಲಿನಿಂದ ಮರಳಿ ಮೈಸೂರ ಮಠಕ್ಕೆ ಆಗಮಿಸುವುದು. 

ಮದ್ಯಾಹ್ನ ೧.೩೦ ಗಂಟೆಗೆ ಮೈಸೂರು ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ, ಪ್ರಸಾದ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು.
ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿ ಎ.ಪಿ.ಗಾಣಿಗೇರ ಮಾತನಾಡಿ, ಪುರಾಣ ಮಹಾಮಂಗಲೋತ್ಸವದ ದಿವ್ಯ ಸಾನಿದ್ಯವನ್ನು ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮೀಜಿ ವಹಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ವಹಿಸುವವರು, ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ವಹಿಸುವರು, ಪುರಾಣ ಸಮಿತಿ ಅಧ್ಯಕ್ಷ ಶಿವಕುಮಾರ ಕೋರಧಾನ್ಯಮಠ, ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಪುರಾಣ ಪ್ರವಚನಕಾರರಾದ ಕುಮಾರ ಶಾಸ್ತ್ರೀಗಳು ಹಿರೇಮಠ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಎಂದರು.
ಪೂರ್ವಭಾವಿ ಸಭೆಯಲ್ಲಿ ಗಜೇಂದ್ರಗಡ ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷ ಪ್ರಭು ಚವಡಿ, ಎಸ್.ಎಸ್.ವಾಲಿ, ಶರನಪ್ಪ ರೇವಡಿ, ಬಸವರಾಜ ಕೊಟಗಿ, ಪ್ರಭು ಹಿರೇಮಠ, ನಾಗಯ್ಯ ಗೊಂಗಡಶೆಟ್ಟಿಮಠ, ಬಸವರಾಜ ಚನ್ನಿ, ಶಿವಕುಮಾರ ಶಶಿಮಠ, ಶಿವಯ್ಯ ಚಕ್ಕಡಿಮಠ, ಪ್ರಕಾಶ ಕಾರಡಗಿಮಠ, ವೀರಯ್ಯ ಕಲ್ಮಂಗಿಮಠ, ಮಲ್ಲು ಶಾಸ್ತ್ರೀ, ಮಹಾದೇವಪ್ಪ ಪವಾರ ಶ್ರೀಕಾಂತ ತಾಳಿಕೋಟಿ ಸೇರಿದಂತೆ ಇತರರು ಇದ್ದರು.
Post a Comment

Post a Comment