Gajendragad : ದಿ. ಅಂದಾನಪ್ಪ ದೊಡ್ಡಮೇಟಿ ಸ್ಮಾರಕಕ್ಕೆ ಸರ್ಕಾರ ಹಸಿರು ನಿಶಾನೆ _ ಹೋರಾಟಗಾರರಿಗೆ, ಸರ್ಕಾರಕ್ಕೆ ಧನ್ಯವಾದ ತಿಳಿಸಿದ ರೇಣುಕಾ ಏವೂರ್
ದಿ. ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಕರ್ನಾಟಕ ಅಭಿವೃದ್ಧಿ ವೇದಿಕೆ ಹೋರಾಟದ ಭಾಗವಾಗಿದ್ದಕ್ಕೆ ರಾಜ್ಯಾಧ್ಯಕ್ಷರಾದ ವಿನಾಯಕ ಜರತಾರಿ ಅವರಿಗೆ, ಶಾಸಕರಿಗೆ ಮತ್ತು ಸರ್ಕಾರಕ್ಕೆ ಅಬಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ರೇಣುಕಾ ಶಂಕರ್ ಏವೂರ್ ಹೇಳಿದ್ದಾರೆ. ಗಜೇಂದ್ರಗಡದಲ್ಲಿ ಕಿರಾ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣಕ್ಕೆ ನಡೆದ ಪಾದಯಾತ್ರೆಯಲ್ಲಿ ಮೊದಲ ಮಹಿಳೆಯಾಗಿ ಭಾಗವಹಿಸಿದ್ದು ಹೆಮ್ಮೆ ಅನಿಸುತ್ತಿದೆ. ಈ ಹೋರಾಟದಲ್ಲಿ ಭಾಗವಹಿಸಿದ ಕರ್ನಾಟಕ ಅಭಿವೃದ್ಧಿ ವೇದಿಕೆ, ಸೇರಿದಂತೆ ಎಲ್ಲರಿಗೂ ಧನ್ಯವಾದ ಎಂದರು. ನಮ್ಮ ಹೋರಾಟಕ್ಕೆ ಮಣಿದು ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದು ನಮ್ಮ ಭಾಗದ ಏಕೀಕರಣ ರೂವಾರಿಗೆ ಸಿಕ್ಕ ಗೌರವ. ಹೋರಾಟಗಾರರು, ಕನ್ನಡ ಪರ ಸಂಘಟನೆಗಳು, ಸಾರ್ವಜನಿಕರು ಸೇರಿದಂತೆ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಿಸುವ ಸಮಯ ವಿದು ಎಂದು ರೇಣುಕಾ ಏವೂರ್ ತಮ್ಮ ಮನದಾಳ ಹಂಚಿಕೊಂಡರು.
ಅಷ್ಟೇ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ಕೆ. ಪಾಟೀಲ್, ಶಾಸಕರಾದ ಜಿ.ಎಸ್. ಪಾಟೀಲ್,
ಸೇರಿದಂತೆ ದಿ.ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣದ ನಿರ್ಣಯ ಕೈಗೊಂಡ ಎಲ್ಲರಿಗೂ ಧನ್ಯವಾದ ಎಂದು ಶ್ರೀಮತಿ ರೇಣುಕಾ ಏವೂರ್ ಹೇಳಿದ್ದಾರೆ.
Post a Comment