-->
Bookmark

Gadag : ಜಿಲ್ಲಾ ಮಟ್ಟದ ಸಂಸ್ಕೃತ ಶ್ರಾವಣೀ ಕಾರ್ಯಕ್ರಮ ಸಮಾರೋಪ ಸಮಾರಂಭ

Gadag : ಜಿಲ್ಲಾ ಮಟ್ಟದ ಸಂಸ್ಕೃತ ಶ್ರಾವಣೀ ಕಾರ್ಯಕ್ರಮ ಸಮಾರೋಪ ಸಮಾರಂಭ 

ಗದಗ : (Oct_07_2023)
ಗದಗ ಜಿಲ್ಲಾ “ಸಂಸ್ಕೃತ ಶ್ರಾವಣೀ” ಸಮಾರೋಪ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.
“ಸಂಸ್ಕೃತ ಶ್ರಾವಣೀ” ನಿಮಿತ್ತ ಗದಗ ಜಿಲ್ಲಾ ಸಂಸ್ಕೃತ ವಿದ್ಯಾರ್ಥಿಗಳಿಗೆ ಸುಭಾಷಿತ, ಭಗವದ್ಗೀತಾ ಹಾಗೂ ಪ್ರಬಂಧ ಸ್ಪರ್ಧಾ ಹಾಗೂ ೨೦೨೨-೨೩ ನೆಯ ಸಾಲಿನ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ದಿನಾಂಕ ೨೭.೦೯.೨೦೨೩ ಬುಧವಾರ ದಂದು ಶ್ರೀ ಜಗದ್ಗುರು ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲಾ, ಗದಗದಲ್ಲಿ ನೆರವೇರಿತು.
ಧಾರವಾಡ ವಲಯ ವಿಷಯ ಪರಿವೀಕ್ಷಕರಾಗಿರುವ ವಿದ್ವಾನ್ ಜಿ ಎಸ್.ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿ “ಸಂಸ್ಕೃತ ಶ್ರಾವಣೀ”  ಎಂಬುದನ್ನು ಪರಿಚಯಿಸಿದ್ದೇ ಗದಗ ಜಿಲ್ಲಾ ಶಿಕ್ಷಕರ ಸಂಘ. ಶ್ರಾವಣ ಶುಕ್ಲ ಪೂರ್ಣಿಮೆಯಿಂದ ಭಾದ್ರಪದ ಶುಕ್ಲ ಪೂರ್ಣಿಮೆಯವರೆಗೆ ಒಂದು ತಿಂಗಳ ಕಾಲ ಸಂಸ್ಕೃತ ಭಾಷಾ ಬೆಳವಣಿಗೆ ಹಾಗೂ ಪ್ರಚಾರ ಮಾಡಲಾಗುವುದು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಬ್ರಹ್ಮನ್ಮಠ, ಅಡ್ನೂರು, ಗದಗ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ ಸನಾತನ ಕಾಲದಿಂದಲೂ ಸಂಸ್ಕೃತ ಭಾಷೆಯು ತನ್ನ ಹಿರಿಮೆಯನ್ನು ಉಳಿಸಿಕೊಂಡಿದೆ, ಪ್ರತಿಯೊಬ್ಬ ಸಾಮಾನ್ಯ ಪ್ರಜೆಯು ಸುಲಭ ರೀತಿಯಲ್ಲಿ ಕಲಿಯಬಹುದಾತಂತಹ ಭಾಷೆ ಎಂದರೆ ಅದು ಕೇವಲ ಸಂಸ್ಕೃತ ಮಾತ್ರ. ಉಳಿದ ಭಾಷೆಗಳು ಪ್ರಾಂತ್ಯದಿಂದ ಪ್ರಾಂತ್ಯಗಳಿಗೆ ತಮ್ಮ ಶೈಲಿಯನ್ನು ಬದಲಿಸುತ್ತವೆ ಆದರೆ ಸಂಸ್ಕೃತ ಮಾತ್ರ ಜಗತ್ತಿನಾದ್ಯಂತ ಏಕರೂಪದಲ್ಲಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸಿದ್ಧಲಿಂಗಪ್ಪ ಚ. ಚಳಗೇರಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಸಂಸ್ಕೃತ ಭಾಷೆಯ ಬೆಳವಣಿಗೆ ಅವಶ್ಯಕವಾಗಿದೆ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಲಿ ಎಂದರು.
ಕರ್ನಾಟಕ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶ್ರೀ ವಿದ್ವಾನ್ ಆರ್ ಟಿ.ಭಟ್ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಸಂಸ್ಕೃತ ಅಧ್ಯಯನಕ್ಕೆ ಸಾಕಷ್ಟು ಮಹತ್ವವಿದೆ, ಮುಂದಿನ ತಲೆಮಾರಿಗೆ ಅವಶ್ಯವಾಗಿ ಸಂಸ್ಕೃತ, ಜ್ಯೋತಿಷ್ಯಗಳ ಅಧ್ಯಯನ ಅವಶ್ಯಕರವಾಗಿರುವುದು ಈ ವಾಸ್ತವ ವಿಷಯವಾಗಿದೆ ಎಂದರು.
ಧಾರವಾಡ ವಲಯ ಸಂಯೋಜಕರಾದ ವಿದ್ವಾನ್ ಬಿ ಬಿ.ಆರೇರ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿ ಮಕ್ಕಳಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದು ಶಿಕ್ಷಕರ ಕರ್ತವ್ಯವಾಗಿದೆ. ಈ ಹಿಂದೆಯು ಸಹ ಗದಗ ಜಿಲ್ಲೆ ಸಂಸ್ಕೃತ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.
ಗದಗ ಜಿಲ್ಲಾ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಎಚ್ ಎನ್ ಭಜಂತ್ರಿ ಮಾತನಾಡಿ ಭವಿಷ್ಯದಲ್ಲಿ ಇನ್ನಷು ಹೆಚ್ಚಿನ ಸಂಸ್ಕೃತ ಕಾರ್ಯಕ್ರಮಗಳನ್ನು ನಮ್ಮ ವೇದಿಕೆಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಸ್ಪರ್ಧಾ ವಿಜೇತರು
ಸುಭಾಷಿತ ಕಂಠಪಾಠ ಸ್ಪಧೇಯಲ್ಲಿ ಕುಮಾರಿ ಮಂಜುಳಾ ಮಾಳೇಕೊಪ್ಪ ಪ್ರಥಮ, ಕುಮಾರ ಪುಟ್ಟರಾಜ ಮಠ ದ್ವಿತೀಯ, ಶ್ರೀಕಾಂತ ಪುರಾಣಿಕಮಠ ತೃತೀಯ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಕುಮಾರಿ ನಿರ್ಮಲಾ ಗೌಡ್ರ ಪ್ರಥಮ, ಕುಮಾರಿ  ಪಾವನಿ ಮುನವಳ್ಳಿ ದ್ವಿತೀಯ, ಕುಮರಿ ಉಮಾ ಹಿರೇಮಠ ತೃತೀಯ ಚಂದ್ರಯಾನ-೩ ಸಂಸ್ಕೃತದಲ್ಲಿ ಪ್ರಬಂಧ ಸ್ಪಧೇಯಲ್ಲಿ ಕುಮಾರಿ ವೀಣಾ ಪತ್ತಾರ ಪ್ರಥಮ, ಕುಮಾರಿ ಸಂಗೀತಾ ಕಾರಭಾರಿ ದ್ವಿತೀಯ ಹಾಗೂ ಕುಮಾರ ಪುಟ್ಟರಾಜ ಚಂದ್ರಶೇಖರಮಠ ಸ್ಥಾನ ಗಳಿಸಿದ್ದಾರೆ ಎಂದು ಶಿಕ್ಷಕರಾದ ಶ್ರೀ ಪಂಚಯ್ಯ ಹಿರೇಮಠ ಘೋಷಿಸಿದರು.
೨೦೨೨-೨೩ ನೆಯ ಸಾಲಿನ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಪ್ರಥಮಾ ವರ್ಗದಲ್ಲಿ ಕುಮಾರಿ ವಿಜಯಲಕ್ಷ್ಮಿ ಕೋಳಿವಾಡ ಪ್ರಥಮ, ಕುಮಾರಿ ಲಕ್ಷ್ಮೀ ಪ್ರಕಾಶ ಹಡಪದ ದ್ವಿತೀಯ, ಕುಮಾರ ಬಸಯ್ಯ ಶಿವಯ್ಯ ತೃತೀಯ ಹಾಗೂ ಕಾವ್ಯ ವಿಭಾಗದಲ್ಲಿ ಕುಮಾರಿ ಬಾವನಾ ಜೀ ಕುಲಕರ್ಣಿ ಪ್ರಥಮ, ಕುಮಾರ ವಿಶ್ವಾಸ ಪಟ್ಟಣಶೆಟ್ಟಿ ದ್ವಿತೀಯ, ಕುಮಾರಿ ರಾಜೇಶ್ವರಿ ದೊಡ್ಡಮನಿ ತೃತೀಯ  ಸಾಹಿತ್ಯ ವಿಭಾಗದಲ್ಲಿ ಕುಮಾರಿ ಪವಿತ್ರಾ ಕಣವಿ ಪ್ರಥಮ, ಕುಮಾರಿ ಸಿಂಚನಾ ಶೇಠ್‌ಲಾಜಿ ದ್ವಿತೀಯ ಹಾಗೂ ಕುಮಾರಿ ಸಂಗೀತಾ ಕುಟಕನಕೇರಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಶಿಕ್ಷಕರಾದ ಶ್ರೀ ಎಸ್ ಎನ್.ಸಿಂಪಗೇರ ಘೋಷಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗಜಾನನ ಸಂಸ್ಕೃತ ಪಾಠಶಾಲಾ ಸಹಶಿಕ್ಷಕ ವಿದ್ವಾನ್ ಕಿರಣ ಜೋಶಿ, ಶ್ರೀ ಜಗದ್ಗುರು ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲಾ, ಗದಗ ಮುಖ್ಯ ಶಿಕ್ಷಕ ವಿದ್ವಾನ್ ಗುರುಸಿದ್ಧಯ್ಯ ಹಿರೇಮಠ ಸ್ವಾಗತಿಸಿದರು  ಶ್ರೀಮಾನ್ ಜಿ ಎಮ್.ಪಲ್ಲೇದ ಸಹಶಿಕ್ಷಕರು ಡಿ.ಜಿ.ಎಮ್ ಸಂಸ್ಕೃತ ಪಾಠಶಾಲಾ ಇವರು ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಹಾಗೂ ಸಹಾಯ ಸಹಕಾರ ನೀಡಿದ ಗದಗ ಜಿಲ್ಲೆಯ ಸಂಸ್ಕೃತ ಪಾಠಶಾಲಾ ಸಹಶಿಕ್ಷಕರಿಗೂ, ಮುಖ್ಯೋಪಾಧ್ಯಾರಿಗೂ, ಮುದ್ದು ವಿದ್ಯಾರ್ಥಿಗಳಿಗೂ ಹಾಗೂ ವೇದಿಕೆಯಲ್ಲಿ ಆಸೀನರಾಗಿದ್ದ ಎಲ್ಲ ಗಣ್ಯಮಾನ್ಯರಿಗೆ ವಂದನಾರ್ಪಣೆ ಸಲ್ಲಿಸಿದರು. ಗದಗ ಜಿಲ್ಲೆಯಲ್ಲಿರುವ ಎಲ್ಲ ಸಂಸ್ಕೃತ ಪಾಠಶಾಲಾಸಹ ಶಿಕ್ಷಕರು ಮುಖ್ಯೋಪಾಧ್ಯಾರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Post a Comment

Post a Comment