-->
Bookmark

Sudi : ಚಿದಂಬರೇಶ್ವರ ಜಯಂತ್ಯೋತ್ಸವ : ಮುಂದಿನ ತಿಂಗಳು 28 ರಿಂದ ಕಾರ್ಯಕ್ರಮ ಪ್ರಾರಂಭ

Sudi : ಚಿದಂಬರೇಶ್ವರ ಜಯಂತ್ಯೋತ್ಸವ : ಮುಂದಿನ ತಿಂಗಳು 28 ರಿಂದ ಕಾರ್ಯಕ್ರಮ ಪ್ರಾರಂಭ 

ಸೂಡಿ : (Oct_07_2023)
"ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ" ಎಂಬಂತೆ ಧರ್ಮವೇ ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿರುವುದರಿಂದ ನಮ್ಮ ಸನಾತನ ಪರಂಪರೆಯಲ್ಲಿ ಧರ್ಮ ರಕ್ಷಣೆಗೆ ಮಹತ್ವವನ್ನು ನೀಡಿದ್ದಾರೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮ ರಕ್ಷಣೆ ಎಂದರೆ ಧರ್ಮಾಚರಣೆ ಮಾಡುವುದು ಎಂದರ್ಥ, ಲೋಕಕಲ್ಯಾಣಾರ್ಥವಾಗಿ ಭಗವಂತನ ಆರಾಧನೆ ಮಾಡುವುದರಿಂದ ಲೋಕಕ್ಕೆ ಒಳಿತಾಗುತ್ತದೆ. ಆ ಉದ್ದೇಶದಿಂದ ಕ್ಷೇತ್ರಗಳಲ್ಲಿ ಲೋಕಕಲ್ಯಾಣಾರ್ಥವಾಗಿ ಭಗವಂತನ ಪ್ರೀತ್ಯರ್ಥವಾಗಿ ಧರ್ಮ ಕಾರ್ಯಗಳು ಜರುಗುತ್ತವೆ. ಭಗವಂತನ ಆರಾಧನೆಯಲ್ಲಿ ರುದ್ರಾರಾಧನೆಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ. ಏಕೆಂದರೆ “ರುಜಂ ದ್ರಾವಯತೀತಿ ರುದ” ಎಂಬಂತೆ ಮನುಷ್ಯನ ಕಷ್ಟ ಕಾರ್ಪಣ್ಯಗಳನ್ನು ಹಾಗೂ ಮನುಷ್ಯನ ದೇಹದಲ್ಲಿರುವ ರೋಗವು ರುದ್ರಾರಾಧನೆಯಿಂದ ಶಮನವಾಗುತ್ತದೆ.
"ಅಭಿಷೇಕಪ್ರಿಯೋ ಶಿವ:” ಎನ್ನುವಂತೆ ಈಶ್ವರನು ಅಭಿಷೇಕ ಪ್ರಿಯನು, ರುದ್ರನಿಗೆ ಅಭಿಷೇಕ ಮಾಡುವುದರಿಂದ ಈಶ್ವರನು ಸಂತುಷ್ಟನಾಗಿ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನ ಪೂರೈಸುವಲ್ಲಿ ಸಂಶಯವೇ ಇಲ್ಲ. ವೇದೋಕ್ತವಾದ ನಮಕ (ರುವುದಿಂದ ಅಭಿಷೇಕ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು, ಭಕ್ತಿ ಶ್ರದ್ಧೆಯಿಂದ ಒಂದು ಬಾರಿ ರುದಾಭಿಷೇಕ ಮಾಡಿದರೆ ಸಕೃತಾವರ್ತನ ರುದ್ರಾಭಿಷೇಕ, || ಬಾರಿ ಮಾಡಿದರೆ ಏಕಾದಶಾವರ್ತನ ರುದ್ರಾಭಿಷೇಕ, 121 ಬಾರಿ ಮಾಡಿದರೆ ಲಘು(ಶತ)ರುದ್ರಾಭಿಷೇಕ, 1331 ಬಾರಿ ಮಾಡಿದರೆ ಮಹಾರುದ್ರಾಭಿಷೇಕ ಮತ್ತು 14641 ಬಾರಿ ಮಾಡಿದರೆ "ಅತಿರುದಾಭಿಷೇಕ"ವಾಗುವುದು. ಹೀಗೆ ಏಕೋತ್ತರ ವೃದ್ಧಿಯಲ್ಲಿ ಅಭಿಷೇಕ ಮಾಡಿದರೆ ಅಥವಾ ಮಾಡಿಸಿದರೆ ರುದ್ರನು ಪೀತನಾಗಿ ಸಮಸ್ತ ಲೋಕಕ್ಕೆ ಕಲ್ಯಾಣವನ್ನುಂಟುಮಾಡುತ್ತಾನೆ.

ಆ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಶ್ರೀಕ್ಷೇತ್ರ ಸೂಡಿಯಲ್ಲಿ ಶ್ರೀಚಿದಂಬರೇಶ್ವರರ ಜಯಂತ್ಯೋತ್ಸವದ ನಿಮಿತ್ತ ದಿನಾಂಕ : 28/11/2023 ಮಂಗಳವಾರದಿಂದ ದಿನಾಂಕ: 03/12/2023 ರವಿವಾರದವರೆಗೆ ಸಮಸ್ಯೆ ಪೂಜ್ಯರ, ಗುರುಗಳ ಹಾಗೂ ಹಿರಿಯರ ಸಮ್ಮುಖದಲ್ಲಿ "ಅತಿರುದ್ರ ಮಹಾಯಾಗವನ್ನು ಹಮ್ಮಿಕೊಂಡಿದ್ದೇವೆ. ಅತಿರುದ್ರ ಮಹಾಯಾಗಕ್ಕೆ ಸುಮಾರು 150 ಜನ ವೈದಿಕರು ಬೇಕಾಗುತ್ತದೆ. ಇದಕ್ಕೆ ಅಂದಾಜು 8ರಿಂದ 10ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಇಂತಹ ಮಹತ್ತರವಾದ ವಿಶೇಷವಾದ ಕಾರ್ಯಕ್ರಮಕ್ಕೆ ಭಗವದ್ಭಕ್ತರ ಸಹಕಾರ ಅತ್ಯಾವಶ್ಯಕವಾಗಿರುವುದು, ವೈಭವೋಪೇತವಾದ ಈ “ಅತಿರುದ್ರ ಮಹಾಯಾಗಕ್ಕೆ ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವು ಯಶಸ್ವಿಯಾಗಲು ತಾವೆಲ್ಲರೂ ಕಾರಣರಾಗಬೇಕೆಂದು ಕೇಳಿಕೊಳ್ಳುತ್ತಾ, ಅಲ್ಲದೇ ''ಶ್ರುತಂ ಹರತಿ ಪಾಪಾನಿ" ಎನ್ನುವ ಹಾಗೆ ರುದ್ರವನ್ನು ಶ್ರವಣ ಮಾಡುವುದರಿಂದ ನಮ್ಮ ಪಾಪಗಳನ್ನು ದೂರ ಮಾಡುತ್ತವೆ ಹಾಗಾಗಿ ಮಹಾಯಾಗಕ್ಕೆ ಎಲ್ಲಾ ಭಗವದಕ್ತರು ಆಗಮಿಸಿ ಮಹಾಸ್ವಾಮಿಯ ಕೃಪಾನುಗ್ರಹಕ್ಕೆ ಪಾತ್ರರಾಗಬೇಕೆಂದು ಭುಜಂಗಭಟ್ಟ ಜೋಶಿ ಇವರು ಮನವಿ ಮಾಡಿದ್ದಾರೆ. 

ಹಾವೇರಿಯ ರಾಮ ಮಂದಿರದಲ್ಲಿ ಅಗಡಿ ಆನಂದವನದ ಪರಮ ಪೂಜ್ಯ ಶ್ರೀ ವಿಶ್ವನಾಥ ಚಕ್ರವರ್ತಿಗಳು ಹಾಗೂ ವೇದ ಬ್ರಹ್ಮ ಶ್ರೀ ವಿದ್ವಾನ್ ಶಂಕರಭಟ್ಟ ಜೋಶಿ  ಇವರ ಅಮೃತ ಹಸ್ತದಿಂದ  ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಿದಂಬರ ಭಟ್ಟ ಜೋಶಿ, ಗಣಪತಿಭಟ್ಟ ಕತಕಾಲ, ವಸಂತಮಾಧವ ರಾಜಪುರೋಹಿತ, ದತ್ತಾತ್ರೇಯ ಕಳ್ಳಿಹಾಳ, ಭಾಸ್ಕರ ಜೋಶಿ, ನಟರಾಜ ಜೋಶಿ ಸೇರಿದಂತೆ ಅನೇಕು ಜೊತೆಗಿದ್ದರು.
Post a Comment

Post a Comment