-->
Bookmark

Gajendragad : ಪ್ರಿನ್ಸಿಪಾಲರು ಮತ್ತು ಸಹ ಶಿಕ್ಷಕರು, ಶಾಲಾ ಸಿಬ್ಬಂದಿಯವರು ಪ್ರವೃತ್ತಿಯಲ್ಲಿ ಪ್ರಗತಿಪರ ಕೃಷಿಕರು

Gajendragad : ಪ್ರಿನ್ಸಿಪಾಲರು ಮತ್ತು ಸಹ ಶಿಕ್ಷಕರು, ಶಾಲಾ ಸಿಬ್ಬಂದಿಯವರು ಪ್ರವೃತ್ತಿಯಲ್ಲಿ ಪ್ರಗತಿಪರ ಕೃಷಿಕರು

ಗಜೇಂದ್ರಗಡ : (Nov_30_2023)
ಗದಗ ಜಿಲ್ಲೆ ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುವುದರ ಜೊತೆಗೆ ಅನಾರೋಗ್ಯವು ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದಾಗಿ
 ಶಾಲೆಯಲ್ಲಿ ಇರುವ ಗಿಡಮರಗಳ ಎಲೆಗಳನ್ನು ತಂದು ಒಂದು ಕಡೆ ಶೇಖರಿಸಿ  ಮಣ್ಣಿನ ಫಲವತ್ತತೆಯ ವೃದ್ಧಿಗೆ ಗೊಬ್ಬರ ಕಲೆ ಹಾಕಿಜ ರಾಸಾಯನಿಕ ಮುಕ್ತ ಬದುಕು ಕಟ್ಟುವ ನಿಟ್ಟಿನೊಳಗೆ ಮಕ್ಕಳಿಗೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಹತ್ತಾರು ವಿಧಾನಗಳನ್ನು ಕೃಷಿ ಆಧಾರಿತ ವಿಷಯಗಳನ್ನು ಚಟುವಟಿಕೆ ಮುಖಾಂತರ ಹೇಳಲಾಗುತ್ತದೆ. ಶಾಲೆಯ ಮುಖ್ಯೋಪಾಧ್ಯಾಯರು ಮತ್ತು  ಸಹ ಶಿಕ್ಷಕರು ಶಾಲಾ ಸಿಬ್ಬಂದಿ ಪಾತ್ರ ಪ್ರಮುಖ ವಾಗುತ್ತದೆ. ಸುಸ್ಥಿರ ಕೃಷಿ ಚಟವಟಿಕೆಗಳಿಗೂ ಇಲ್ಲಿ ಜಾಗವಿದೆ.
ಎಲ್ಲ ಬಗೆಯ ಸೊಪ್ಪುಗಳು ಮೆಂತೆ, ಕೊತಂಬರಿ ಪಾಲಕ್ ಸಬ್ಬಸಿಗೆ ಇತ್ಯಾದಿ. ತರಕಾರಿಗಳನ್ನು ಬೆಳೆದಿದ್ದು, ಖಾಲಿ ಇರುವ ಶಾಲೆಯ ಮೈದಾನದಲ್ಲಿ ಹಚ್ಚಹಸಿರಿನ ತರಕಾರಿ ಬೆಳೆದು ಮತ್ತು ಶಾಲೆಯ ಒಳಾಂಗಣದಲ್ಲಿ ಹಚ್ಚಹಸಿರಿನ ಸಾವಿರಾರು ಗಿಡಗಳನ್ನು ಬೆಳೆಸಿ ಪರಿಶುದ್ಧವಾದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಪ್ರಿಜ್ ಬಳಕೆ ತಪ್ಪಿಸುವ ಮತ್ತು ಪೋಷಕಾಂಶ ಹೆಚ್ಚಿಸುವ, ಮಕ್ಕಳ ಊಟದಲ್ಲಿ ವೈವಿಧ್ಯತೆ ತರುವ ಸಣ್ಣ ಪ್ರಯತ್ನ ಎಂದು ಮುಖ್ಯೋಪಾಧ್ಯಾಯರು ಶರಣಪ್ಪ ಕರ್ಜಗಿ ಅಭಿಪ್ರಾಯ ಪಟ್ಟರು. ಶಾಲಾ ಆವರಣದಲ್ಲಿ ಬೆಳೆದಿದ್ದ ತರಕಾರಿಗಳ ಬಗ್ಗೆ ಕೇಳಿದಾಗ, ಮಕ್ಕಳಿಗೆ ಪೋಷಕಾಂಶ ವಿರುವ ತರಕಾರಿಗಳ ಬಗ್ಗೆ ತಿಳಿ ಹೇಳುತ್ತೇವೆ. ಜೊತೆಗೆ ಆರೋಗ್ಯದ ಕಾಳಜಿ ಸಹ ವಹಿಸುತ್ತೇವೆ ಎಂದರು. ಇದು ಕೇಲವ ಒಬ್ಬರ ಜವಾಬ್ದಾರಿಯಲ್ಲ. ಬದಲಾಗಿ, ಸ್ಟಾಫ್ ಸಹಕಾರ ಬಹಳ ಮುಖ್ಯ ಎಂದರು. ಕಾಲ ಕಳೆದಂತೆ ನಮ್ಮ ದಿನಚರಿ ಬದಲಾಗಿದೆ.
ದಿನಚರಿಯೊಂದಿಗೆ ಆಹಾರ ಪದ್ಧತಿಯೂ ಬದಲಾಗಿದೆ. ಹೀಗಾಗಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂಬುದನ್ನ ಕಾಲಕಾಲೇಶ್ವರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ತಿಳಿಸಿ, ಇತರೇ ವಸತಿ ಶಾಲೆಗಳಿಗೂ ಮಾದರಿಯಾಗಿದ್ದಾರೆ.
Post a Comment

Post a Comment