-->
Bookmark

Naregal : ಗದಗ ಜಿಲ್ಲಾಮಟ್ಟದ ಪ್ರೋ ಕಬಡ್ಡಿಗೆ ದ್ದೂರಿ ಚಾಲನೆ

Naregal : ಗದಗ ಜಿಲ್ಲಾಮಟ್ಟದ ಪ್ರೋ ಕಬಡ್ಡಿಗೆ ದ್ದೂರಿ ಚಾಲನೆ
ಸೌಹಾರ್ದತೆ-ಏಕತೆ ಬೆಳೆಯಲು ಕ್ರೀಡೆ ಸಹಕಾರಿ
ನರೇಗಲ್ : (Feb_25_2024)
ಪ್ರಸ್ತುತ ಯುವ ಸಮುದಾಯ ಮೊಬೈಲ್‌ ಗೇಮ್‌ಗಳ ಮಧ್ಯೆ ಕಾಲ ಕಳೆಯುತ್ತಿದೆ. ಗ್ರಾಮೀಣ ಕ್ರೀಡೆಗಳು ಕ್ರಮೇಣ ಮರೆಮಾಚುತ್ತಿವೆ. ಇವುಗಳನ್ನು ಪೋಷಿಸುವ ಕೆಲಸವಾಗಬೇಕಿದ್ದು, ಈ ನಿಟ್ಟಿನಲ್ಲಿ ಯುವಕರ ಉತ್ಸಾಹ ಬಹುಮುಖ್ಯವಾಗಿದೆ ಅದರಲ್ಲೂ ನರೇಗಲ್‌ ನಲ್ಲಿ ಜಿಲ್ಲಾಮಟ್ಟದ ಪ್ರೋ ಕಬಡ್ಡಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು‌ ಕಾಂಗ್ರೆಸ್‌ ಪಕ್ಷದ ಮುಖಂಡ ಮಿಥುನ್‌ ಜಿ. ಪಾಟೀಲ ಹೇಳಿದರು.

ಸ್ಥಳೀಯ ಕೋಡಿಕೊಪ್ಪದ ಹಠಯೋಗಿ ಹುಚ್ಚೀರೇಶ್ವರ ಮಠದ ಜಾತ್ರಾಮಹೋತ್ಸವದ ರಾಜ್ಯ ಅಮೆಚೂರ್‌ ಕಬಡ್ಡಿ, ಗದಗ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಷಿಯೇಷನ್‌, ಮಿಥುನ್‌ ಜಿ. ಪಾಟೀಲ ಅಭಿಮಾನಿಗಳ ಬಳಗ ಹಾಗೂ ರೇಣುಕಾದೇವಿ ಸ್ಪೋರ್ಟ್ಸ್‌ ಕ್ಲಬ್‌ ಇವರ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಸಂಜೆ ಆರಂಭವಾದ ಗದಗ ಜಿಲ್ಲಾ ಮಟ್ಟದ ಪ್ರೋ ಕಬಡ್ಡಿ ಸೀಸನ್-1 ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ದೇಸಿಕ್ರೀಡೆ ಕಬಡ್ಡಿ ಎಲ್ಲರ ಗಮನ ಹರಿಯುವಂತೆ ಮಾಡಿದೆ. ಇಲ್ಲಿ ಆಡುತ್ತಿರುವ ಯುವಕರು ಸತತ ಪ್ರಯತ್ನದಿಂದ ಮುಂದೊಂದು ದಿನ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಲಿ. ಅದಕ್ಕೆ ಅಗತ್ಯವಾದ ಪ್ರೋತ್ಸಾಹ ನೀಡಲು ಜನಪ್ರಿ ಶಾಸಕರಾದ ಜಿ. ಎಸ್.‌ ಪಾಟೀಲ ಸಾಹೇಬರು ಹಾಗೂ ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.

ಕ್ರೀಡಾ ಚಟುವಟಿಕೆಗಳಿಂದ ಸೌಹಾರ್ದತೆ ಮತ್ತು ಏಕತೆ ಬೆಳೆಯುತ್ತದೆ. ಕ್ರೀಡೆಗಳು ಸಹ ಮನುಷ್ಯನಿಗೆ ಒಳ್ಳೆಯ ಗುಣಗಳನ್ನು ಬೆಳೆಸುತ್ತವೆ ಎಂದರು.

ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕಾರ್ತಿಕ ಕಾಟೆ ಮಾತನಾಡಿ,ಯಾವುದೇ ಆಟದಲ್ಲಿ ಶ್ರಮಿಶಿಸಿದ ಮೈಯಿಗೆ ಮಣ್ಣಿನ ಗುಣ ಅಂಟಿಕೊಂಡರೆ, ಆರೋಗ್ಯದಿಂದ ಇರಬಹುದು. ದೇಸಿಯಾಟಗಳು ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿವೆ  ಅವುಗಳನ್ನು ಸಾಧನೆ ಮಾಡುವ ಕನಸುಗಳನ್ನು ಹೊತ್ತು ಆಡಲು ಮುಂದಾಗಬೇಕು. ಆಟಗಾರನ ಪ್ರತಿಭೆ ನೋಡಲು ಸುತ್ತಮುತ್ತಲಿನ ಹಳ್ಳಿಗಳ ಜನರು ಜಾತ್ರೆಯಂತೆ ಬಂದು ಸೇರಬೇಕು ಎಂದರು. ಕ್ರೀಡೆಯಲ್ಲಿ ಲಿಂಗ ತಾರತಮ್ಯ ಮಾಡಬಾರದು. ಹೆಣ್ಣು-ಗಂಡು ಇಬ್ಬರಿಗೂ ಸಮಾನವಾದ ಅವಕಾಶಗಳನ್ನು ಒದಗಿಸಿ ಪ್ರೋತ್ಸಾಹಿಸಬೇಕು ಎಂದರು.  ಉತ್ತರ ಕರ್ನಾಟಕ ಭಾಗದ ಆಟಗಾರರು ಕ್ರೀಡೆಯಲ್ಲಿ ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯವನ್ನು ಕಾಯ್ದುಕೊಳ್ಳಬೇಕು. ಆಗ ನಮ್ಮ ಭಾಗದ ಪ್ರತಿಭಾವಂತ ಆಟಗಾರರಿಗೆ ಅವಕಾಶಗಳು ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಕ್ರೀಡೆಯಲ್ಲಿ ಶೇ. 2 ರಷ್ಟು ಮೀಸಲಾತಿ ಇರವ ಕಾರಣ ಜೀವನ ರೂಪಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು. 
ಈ ವೇಳೆ ನಟ ದರ್ಶನ ಅಭಿನಯದ ಕಾಟೇರ ಚಲನಚಿತ್ರದ ಟೈಟಲ್‌ ಅನ್ನು ಕಾರ್ತಿಕ ಕಾಟೆಯವರ ಸಾಧನೆಯನ್ನು ಗುರುತಿಸಿ ದರ್ಶನ ಇಟ್ಟಿದ್ದಾರೆ ಎಂದು ತಿಳಿದಾಗ ಸಭಿಕರು ಎದ್ದುನಿಂತು ಚಪ್ಪಾಳೆ ತಟ್ಟಿದರು. ನಂತರ 
ಕಾಂಗ್ರೆಸ್‌ ಪಕ್ಷದ ನರೇಗಲ್ ಶಹರ ಘಕಟದ ಅಧ್ಯಕ್ಷ ‌ ಶಿವನಗೌಡ ಪಾಟೀಲ ಮಾತನಾಡಿ, ಯುವಕರಲ್ಲಿ ಉತ್ಸಾಹ ಮತ್ತು ಕ್ರೀಯಾಶೀಲತೆ ಬೆಳೆಯಲು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ದೈಹಿಕ ಬಲ, ಮಾನಸಿಕ ಆತ್ಮವಿಶ್ವಾಸ ವೃದ್ಧಿಸುವ ಕ್ರೀಡೆ ಮಾನವನಿಗೆ ಅತ್ಯುತ್ತಮ ವ್ಯಾಯಾಮವಾಗಿದೆ. ನಮ್ಮ ಹಿರಿಯರು ದೈಹಿಕ ಪರಿಶ್ರಮದಿಂದಲೇ ಗಟ್ಟಿ, ಜಟ್ಟಿಗಳಾಗಿದ್ದರು ಎಂದರು.
ರೇಣುಕಾದೇವಿ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಕಬಡ್ಡಿಯಾಡಿ ಸೈನ್ಯ ಸೇರಿದ ಯುವಕರ ತಂದೆತಾಯಿಗಳನ್ನು, ಕಾರ್ತಿಕ ಕಾಟೆ ದಂತಿಯನ್ನು ಹಾಗೂ ರಾಷ್ಟ್ರಮಟ್ಟದ ಕುಸ್ತಿಪಟು ರಾಧಿಕ ತೊಂಡಿಹಾಳ ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಡಾ. ಕೆ. ಬಿ. ಧನ್ನೂರು, ಮಂಜುಳಾ ಈಶ್ವರಪ್ಪ ರೇವಡಿ, ನಿಂಗನಗೌಡ ಲಕ್ಕನಗೌಡ್ರ, ಎಸ್.‌ ಬಿ. ಗೌಡರ, ಅಲ್ಲಾಬಕ್ಷಿ ನದಾಫ್‌, ವಿನಾಯಕ ಜರತಾರಿ, ಸಂತೋಷ ಹನಮಸಾಗರ, ಯಲ್ಲಪ್ಪ ಅಬ್ಬಿಗೇರಿ, ಮುತ್ತಪ್ಪ ನೂಲ್ಕಿ, ಶೇಖಪ್ಪ ಕೆಂಗಾರ, ಗುಡದಪ್ಪ ಗೋಡಿ, ಶೇಖಪ್ಪ ಜುಟ್ಲ, ಹನಮಂತಪ್ಪ ನವಲಗುಂದಿ, ಈರಪ್ಪ ಕಟ್ಟಿಮನಿ, ಕಳಕನಗೌಡ ಪೊಲೀಸ್‌ ಪಾಟೀಲ, ಮಹಾದೇವ ಮಣೊಡ್ಡರ, ಸದ್ದಾಂ ನಶೇಖಾನ್ ಇದ್ದರು.
Post a Comment

Post a Comment