-->
Bookmark

Gajendragad : ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ನಿಂದ ಮೂಗಿಗೆ ತುಪ್ಪ ಸವರುವ ಕಾರ್ಯ : ಮಕ್ತುಮಸಾಬ್ ಮುಧೋಳ್

Gajendragad : ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ನಿಂದ ಮೂಗಿಗೆ ತುಪ್ಪ ಸವರುವ ಕಾರ್ಯ : ಮಕ್ತುಮಸಾಬ್ ಮುಧೋಳ್
ಗ್ಯಾರಂಟಿ ಯೋಜನೆ ಬಿಟ್ಟರೇ, ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ : ಜೆಡಿಸ್ ಗದಗ ಜಿಲ್ಲಾಧ್ಯಕ್ಷ ಆರೋಪ 
ಗಜೇಂದ್ರಗಡ : ( Feb_24_2024)
ಅಲ್ಪ ಸಂಖ್ಯಾತರು ಹಾವೇರಿ_ಗದಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲಿಸಲಿದ್ದಾರೆ ಎಂದು ಹಾವೇರಿ_ಗದಗ ಮತ್ತು ಬಾಗಲಕೋಟ ಲೋಕಸಭಾ ಕ್ಷೇತ್ರದ ಉಸ್ತುವಾರಿ ಮಕ್ತುಮಸಾಬ್ ಮುಧೋಳ್ ಹೇಳಿದ್ದಾರೆ. ಕಿರಾ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರದ ಮತದಾರ ಈ ಬಾರಿ ಜೆಡಿಎಸ್ ಗೆ ಬೆಂಬಲಿಸುವ ಮುನ್ಸೂಚನೆ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಿಟ್ಟರೇ, ಬೇರೆಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ...
ಕಾಂಗ್ರೆಸ್ ಅಭಿವೃದ್ಧಿ ಮಾಡದೇ, ಗ್ಯಾರಂಟಿ ಜೋಜನೆಯಿಂದಲೇ ಲೋಕಸಭೆ ಗೆಲ್ಲುತ್ತೇವೆ ಎಂಬುದು ಸುಳ್ಳು. 
ಪಕ್ಷದಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಕ್ಕೆ, ನನ್ನ ಕೆಲಸ‌ಕಾರ್ಯಗಳನ್ನ ಗುರುತಿಸಿ, ಹಾವೇರಿ_ಗದಗ ಮತ್ತು ಬಾಗಲಕೋಟ ಉಸ್ತುವಾರಿ ನೀಡಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ವರಿಷ್ಠರು ನೀಡಿದ ಜವಾಬ್ದಾರಿಯನ್ನ ನಿರ್ವಹಿಸಿದ್ದೇನೆ. ಅದೇ ಕಾಯಕ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಮುಧೋಳ್ ಹೇಳಿದ್ದಾರೆ. 
ಅಲ್ಪ ಸಂಖ್ಯಾತರ ಮೂಗಿಗೆ ತುಪ್ಪ ಸವರುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರ ಉತ್ತರ ಕೊಡಲಿದ್ದಾನೆ ಎಂದು ಸ್ಪಷ್ಟಪಡಿಸಿದರು. 
ನಾನು ಕೇವಲ ಅಲ್ಪ ಸಂಖ್ಯಾತರಿಗೆ ಸೀಮಿತನಾಗಿಲ್ಲ. ಎಲ್ಲ ಸಮುದಾಯದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಲಿಂಗಾಯತ ಮುಖಂಡರು, ಹಿಂದುಳಿದ ಸಮಾಜದ ಮುಖಂಡರು, ಅಲ್ಪಸಂಖ್ಯಾತ ನಾಯಕರೇಲ್ಲರೂ ಜೆಡಿಎಸ್ ಗೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದರು. 
ಜೆಡಿಎಸ್, ಬಿಜೆಪಿ ಮೈತ್ರಿಯೂ ರಾಜ್ಯದಲ್ಲಿ ಕಮಾಲ್ ಮಾಡಲಿದೆ. ಲೋಕಸಭೆ ಚುಮಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು. 
ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಬೆರಳೆಣಿಕೆಯಷ್ಟು ಕ್ಷೇತ್ರದಲ್ಲಿ ಗೆದ್ದು, ಏನು ಮಾಡಲಿದೆ ಎಂದು ಪ್ರಶ್ನಿಸಿದರು.‌
Post a Comment

Post a Comment