-->
Bookmark

Gajendragad : ಯಂಗ್ ಆಫೀಸರ್ ಮಹೇಶ್ ರಾಠೋಡ ನೇತೃತ್ವದಲ್ಲಿ ದಾಳಿ : ಎರಡು ಪ್ರತ್ಯೇಕ ಪ್ರಕರಣದಲ್ಲಿ ನಗದು, ಬೆಳ್ಳಿ ವಶ

Gajendragad : ಯಂಗ್ ಆಫೀಸರ್ ಮಹೇಶ್ ರಾಠೋಡ ನೇತೃತ್ವದಲ್ಲಿ ದಾಳಿ : ಎರಡು ಪ್ರತ್ಯೇಕ ಪ್ರಕರಣದಲ್ಲಿ ನಗದು, ಬೆಳ್ಳಿ ವಶ 
ಗಜೇಂದ್ರಗಡ : (Mar_19_2024)
ಎಫ್.ಎಸ್.ಟಿ ಆಫೀಸರ್ ಮಹೇಶ್ ರಾಠೋಡ್ ನೇತೃತ್ವದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಮತ್ತು ೨ಕೆಜಿ ಬೆಳ್ಳಿ ಸಾಮಾನುಗಳು ವಶಕ್ಕೆ ಪಡೆಯಲಾಗಿದೆ. ಗದಗ ನಗರದ ಗುರುನಂದನ್ ಪವಾಸ್ಕರ್ ಎಂಬುವವರು ಬಂಗಾರದ ವ್ಯಾಪಾರಿಯಾಗಿದ್ದು, ವ್ಯಾಪಾರ ಮುಗಿಸಿ ಮರಳಿ ಗದಗ ನಗರಕ್ಕೆ ತೆರಳುವಾಗ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿದ್ದಾರೆ ಎಂದು ಎಫ್.ಎಸ್.ಟಿ ಮಹೇಶ್ ರಾಠೋಡ ಕಿರಾ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಇವರ ಬಳಿ ಎರಡು ಕೇಜಿ ಬೆಳ್ಳಿ ಸಾಮಾನುಗಳು ಸಿಕ್ಕಿವೆ. 

ಇನ್ನೂ, ಮತ್ತೊಂದು ಪ್ರಕರಣದಲ್ಲಿ ಹುಬ್ಬಳ್ಳಿಯ ಮೊಹಮ್ಮದ್ ಸಲೀಂ ಎಂಬುವವರು ಟಾಟಾ ಏಸ್ ವಾಹನದಲ್ಲಿ ಅಲ್ಮೇರಾಗಳನ್ನ ಮಾರಿ ಒಂದು ಲಕ್ಷ ಮೂತ್ತೆರಡು ಸಾವಿರ ನಗದಿನೊಂದಿಗೆ ಮರಳಿ ಹುಬ್ಬಳ್ಳಿಗೆ ತೆರಳುವಾಗ ಸಿಕ್ಕಿದ್ದಾರೆ ಎಂದು ತಿಳಿಸಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಎಫ್.ಎಸ್.ಟಿ ಆಫೀಸರ್ Young  & energetic ಮಹೇಶ್ ರಾಠೋಡ ಅವರಿಗೆ ಪೊಲೀಸರು ಸಾತ್ ನೀಡಿದ್ದಾರೆ. ಇನ್ನೂ, ಗಜೇಂದ್ರಗಡ ತಹಶಿಲ್ದಾರರ್ ಕಿರಣ ಕುಮಾರ್ ಕುಲಕರ್ಣಿ ಅವರು ಜೊತೆಗಿದ್ದರು. ಲೋಕ ಸಮರಕ್ಕೆ ದಿನಾಂಕ ನಿಗದಿಯಾಗಿದ್ದು, ನೀತಿ ಸಂಹಿ ಜಾರಿಯಲ್ಲಿದೆ. ಹೀಗಾಗಿ ಗಜೇಂದ್ರಗಡದಲ್ಲಿ ಚೆಕ್ ಪೋಸ್ಟ್ ಹಾಕಲಾಗಿದ್ದು, ಎಲ್ಲೆಡೆ ಸರ್ಪಗಾವಲು ಹಡಕಲಾಗಿದೆ. ಪಟ್ಟಣಕ್ಕೆ ಪ್ರವೇಶ ಮಾಡುವ ಪ್ರತಿಯೊಂದು ವಾಹನವನ್ನ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.
Post a Comment

Post a Comment