-->
Bookmark

Yaragatti : ಗಡಿ ಮೀರಿದ ಕನಸು ಸೇವಾ ಫೌಂಡೇಶನ್ - ಪುನೀತ್ ಹುಟ್ಟುಹಬ್ಬದಂದೆ ಯರಗಟ್ಟಿಯಲ್ಲಿ ನೂತನ‌ ಕ್ಲಾಸ್

Yaragatti : ಗಡಿ ಮೀರಿದ ಕನಸು ಸೇವಾ ಫೌಂಡೇಶನ್ - ಪುನೀತ್ ಹುಟ್ಟುಹಬ್ಬದಂದೆ ಯರಗಟ್ಟಿಯಲ್ಲಿ ನೂತನ‌ ಕ್ಲಾಸ್ 
ಯರಗಟ್ಟಿ : (Mar_18_2024)
ಕನಸಿಗೆ ಗಡಿಯ ಮಿತಿ ಇಲ್ಲ. ಇದಕ್ಕೆ ಅತ್ತ್ಯುತ್ತಮ ಉದಾಹರಣೆ ಎಂದರೆ ಕನಸು ಸೇವಾ ಫೌಂಡೇಶನ್. ಗಜೇಂದ್ರಗಡದಲ್ಲಿ ಪ್ರಾರಂಭವಾದ ಎನ್.ಜಿ.ಒ ಈಗ ಗದಗ ಜಿಲ್ಲೆಯ ಗಡಿ ದಾಟಿ ಬೆಳೆಯುತ್ತಿದೆ. ಈಗ ಕನಸೂ ಸೇವಾ ಸಂಸ್ಥೆ ಬೆಳಗಾವಿ ಜಿಲ್ಲೆಯಲ್ಲಿ ತರಬೇತಿ ನೀಡುತ್ತಿದೆ. 
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮ ದಿನದಂದೆ, ಬೆಳಗಾವಿಯ ಯರಗಟ್ಟಿಯಲ್ಲಿ ಆರಿ ವರ್ಕ್ ಕ್ಲಾಸಸ್ ಆರಂಭವಾಗಿದೆ. ಪುನೀತ್ ರಾಜಕುಮಾರ್ ಅವರು, ಕರುನಾಡು ಇನ ಕಣ್ಮಣಿಯಾಗಿದವರು, ಅವರಂತೆ ನಾವು ಸಾಮಾಜಿಕ ಕಲಸ ಮಾಡಬೇಕು. ಒಬ್ಬರು ಮತ್ತೊಬ್ಬರಿಗಾಗಿ ಕೆಲಸ ಕಾರ್ಯಗಳನ್ನ ಮಾಡಬೇಕು ಅಂದಾಗ ಸಮಾಜ ಸುಧಾರಿಸಲಿದೆ. ನಮಗೆಲ್ಲರಿಗೂ ಪುನೀತರಾಜಕುಮಾರ್ ಅವರ ಆದರ್ಶವೇ ಪ್ರೇರಣೆ ಎಂದು ಕನಸು ಸೇವಾ ಫೌಂಡೇಶನ್ ಅಧ್ಯಕ್ಷರಾದ ರೇಣುಕಾ ಏವೂರ್ ಹೇಳಿದರು. 
ಯರಗಟ್ಟಿಯಲ್ಲಿ ನೂತನ ಕ್ಲಾಸ್ ಆರಂಭಿಸಿದರು.‌ ಅಲ್ಲಿನ ಮಹಿಳಾ ಮಣಿಗಳು ಸೇರಿ ಕನಸು ಸೇವಾ ಫೌಂಡೇಶನ್ ವತಿಯಿಂದ ತರಬೇತಿ ಪಡೆಯುತ್ತಿದ್ದು, ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ತರಬೇತಿ ನಿರತರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ರೇಣುಕಾ ಏವೂರ್, ಗೀತಾ ರವಿ ಹಂಜಿ, ವಿನೂತಾ ಉಪ್ಪಿನ್, ಲತಾ ಸಂತೋಷ್ ಮಲ್ಲಾವರಡಿ, ಜ್ಯೋತಿ ದೇವರಡ್ಡಿ, ಅನುಶ್ರೀ ರಾಜಶೇಖರ್ ಬಿರಾದಾರ್, ರೇವತಿ ಪ್ರದೀಪ್ ಹೆಗಲಿ, ಸುನೀತಾ ರಾಜಕುಮಾರ್ ಉಪೇಧ್ಯೆ, ಬಸಮ್ಮ ಬಸವರಾಜ್ ಪಾಟೀಲ್, ಸೃಷ್ಟಿ ಪಟ್ಟಣಶೆಟ್ಟಿ, ಸುಮಾ ಹುಣಶ್ಯಾಳ್, ತನುಜಾ ಲಕ್ಷ್ಮಣ ತುಪ್ಪದ್, ಸವಿತಾ ಬೆನಕಟ್ಟಿ, ಕಲಾವತಿ ಇಟ್ನಾಳ್, ಸುನೀತಾ ಉಪ್ಪಿನ್, ಲಕ್ಷ್ಮೀ ಉಪ್ಪಿನ್, ಮಂಜುಳಾ ರಂಗಣ್ಣವರ್, ಶೋಭಾ ಬಿರಾದಾರ್ ಪಾಟೀಲ್, ಶಿಲ್ಪ ಹಾದಿಮನಿ, ಜ್ಯೋತಿ ಪಾಟೀಲ್, ರೇಖಾ ದೇವರಡ್ಡಿ, ಗೀತಾ ಪಾಟೀಲ್ ಭಾಗವಹಿಸಿದ್ರು...
Post a Comment

Post a Comment