-->
Bookmark

Bengaluru : ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಮೋದಿ ರಾಜೀನಾಮೆ ನೀಡಿದ್ದರಾ?: ಸಿದ್ದರಾಮಯ್ಯ

Bengaluru : ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಮೋದಿ ರಾಜೀನಾಮೆ ನೀಡಿದ್ದರಾ?: ಸಿದ್ದರಾಮಯ್ಯ

ಬೆಂಗಳೂರು: (Sept_26_09_2024)

'ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಿದ್ದರಾ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, 'ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೂ ಆರೋಪಗಳಿವೆ. ಅವರೂ ಜಾಮೀನಿನ ಮೇಲೆ ಇದ್ದಾರೆ. ರಾಜೀನಾಮೆ ನೀಡಿದ್ದಾರೆಯೇ? ನನ್ನ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ, ಜೆಡಿಎಸ್‌ಗೆ ಇಲ್ಲ' ಎಂದರು.

ಸಮಾಜಕಲ್ಯಾಣ ಸಚಿವ ಹೆಚ್‌.ಸಿ. ಮಹದೇವಪ್ಪ ಮಾತನಾಡಿ, 'ಬಡಜನರ ಪರವಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದ್ವೇಷ ಸಾಧಿಸುತ್ತಿದೆ. ಮೊದಲು ಜಾಮೀನಿನ ಮೇಲೆ ಇರುವ ಬಿಜೆಪಿ, ಜೆಡಿಎಸ್‌ ಎಲ್ಲರೂ ರಾಜೀನಾಮೆ ನೀಡಲಿ, ನಂತರ ನೈತಿಕತೆ ಬಗ್ಗೆ ಮಾತನಾಡಲಿ' ಎಂದು ಹೇಳಿದರು.
Post a Comment

Post a Comment