Gajendragad : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ : ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಅನಿರ್ಧಿಷ್ಟಾವಧಿ ಮುಷ್ಕರ
ಗಜೇಂದ್ರಗಡ ತಹಶಿಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಗ್ರಾಮಾಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಮುಷ್ಕರ ನಡೆಯುತ್ತಿದೆ. ಮುಖ್ಯವಾಗಿ ಗ್ರಾಮಾಡಳಿತ ಅಧಿಕಾರಿಗಳ ಹುದ್ದೆಯನ್ನ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿ ಪಡಿಸಿ, ಆದೇಶ ನಢುವುದು. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರನ್ನ ಜೀತದಾರರ ಹಾಗೆ ದುಡಿಕೊಳ್ಳುವ ಕ್ರಮವನ್ನ ಪ್ರತಿಭಟನಾಕಾರರು ವಿರೋಧಿಸಿದ್ದಾರೆ. ಕೆಲಸ ಮಾಡುವ ಪೂರಕ ವಾತಾವರಣ ಇಲ್ಲ. ಸೌಲಭ್ಯಗಳಿಲ್ಲ ಎಂದು ಹೇಳುತ್ತಾ, ನಮ್ಮ ಬೇಡಿಕೆ ಈಡೇರುವವರೆಗೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಪ್ರತಿಭಟನಾಕಾರರು ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು.
ತಾಲೂಕಾಧ್ಯಕ್ಷ ಉಮೇಶ್ ಅರಳಿ ಗಿಡದ್ ಸಂಗಮೇಶ್ ಕಡಗದ್, ಮಲ್ಲಿಕಾರ್ಜುನ್ ಹಾದ್ಯಾಳ್, ದಯಾನಂದ್ ಜಂಬಗಿ, ಎಂ.ಎಸ್. ಹೊಸಮನಿ, ಕೆ.ಎ ಮುಲ್ಲಾ, ಶರಣುಗೌಡರ್, ಮಾರುತಿ ವಕ್ಕರ್, ವೈಭವಿ ಚೌಧರಿ, ಶಾಹಿನ್ ಗುರಿಕಾರ್, ಜೆ.ಎಂ ಪೂಜಾರ್, ಎಸ್.ಜಿ ನಿಶಾನದಾರ್, ಪಿ.ಬಿ ಗರೇಬಾಳ್ ಸೇರಿದಂತೆ ಅನೇಕರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
Post a Comment