ಬಾಗಲಕೋಟೆ : (Nov_13_2024)
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಬಾಗಲಕೋಟೆಯ ಜಿಲ್ಲಾ ಶಾಖೆಗೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಶ್ರೀ ಶೇಖರ್ ಕೋಲ್ಕಾರ್ ಅವರು. ಕೋಲ್ಕಾರ್ ಅವರು ಸರಳ ಸಜ್ಜನ ವ್ಯಕ್ತಿಯಾಗಿದ್ದು, ನೌಕರರ ಸಂಘಕ್ಕೆ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದೆ ರೋಚಕವಾಗಿದೆ.
ತಾವು ಮಾಡುವ ಕೆಲಸದಲ್ಕಿ ಸಮಾಜ ಸೇವೆ ಮಾಡುವ ಕೋಲ್ಕಾರ್ ಅವರಿಗೆ ತಮ್ಮ ಸಹೋದ್ಯೋಗಿಗಳು, ಹಿತೈಷಿಗಳು ಒಮ್ಮತದ ನಿರ್ಧಾರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಎಂಬುದು ವಿಶೇಷ.
ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ
ನರ್ಸಿಂಗ್ ಮೇಲಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಇವರು, ಕಾರ್ಯನಿರ್ವಹಿಸುವ ಸಿಸ್ಟರ್ಸ್ ಗಳಿಗೆ, ಬ್ರದರ್ಸ್ ಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್, ಮಹಾನ್ ಸಂತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹಾದಿ ಅಂದ್ರೆ, ಕೆಲಸದ ವೇಳೆ ತಪ್ಪಾಗಿದ್ದಲ್ಲಿ ತಮ್ಮ ಮೇಲೆ ಹಾಕಿಕೊಂಡು, ಯಶಸ್ವಿಯಾದ ಕೆಲಸವನ್ನ ಉಳಿದವರು ಮಾಡಿದ್ದಾರೆ ಎಂದು ಜೊತೆಗೆ ಕೆಲಸ ಮಾಡುವವರಿಗೆ ಹುರಿದುಂಬಿಸುವ ಕಾರ್ಯ ಮಾಡುತ್ತಾರೆ.
ಹೀಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ ಎಂದಾಗ, ಕೋಲಕಾರ್ ಅವರ ನಡೆ ನುಡಿ, ಸರಳತೆಗೆ ರಾಜ್ಯ ನೌಕರರ ಸಂಘದ ನಿರ್ದೇಶಕರ ಗಾದಿ ಒಲಿದು ಬಂದಿದೆ. ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಪ್ರಕಾಶ್ ಬಿರಾದಾರ್ ಅವರ ಬೆಂಬಲ ಸಹ ಕೋಲ್ಕಾರ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ನಿರ್ದೇಶಕರಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದ ಶೇಖರ್ ಕೋಲ್ಕಾರ್ ಅವರು, ಜೊತೆಗೆ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ದಿನಗಳಲ್ಲಿ ಕೆಲಸ ಕಾರ್ಯ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಕಿರಾ ನ್ಯೂಸ್ ಕನ್ನಡ ಸಂಪಾದಕರಾದ ಕೃಷ್ಣ ರಾಠೋಡ್ ಮತ್ತು ತಂಡದಿಂದಲೂ ಶೇಖರ್ ಕೋಲ್ಕಾರ್ ಅವರಿಗೆ ಅಭಿನಂದನೆಗಳು... ಕೋಲ್ಕಾರ್ ಅವರು ಅವಿರೋಧ ಆಯ್ಕೆಯಾಗುತ್ತಿದ್ದಂತೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.
Post a Comment