ಗಜೇಂದ್ರಗಡ : (Nov_13_11_2024
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಿಐಟಿಯು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯ್ತು. ಕಟ್ಟಡ ಕಾರ್ಮಿಕರು ಹಾಗೂ ಹಮಾಲಿ ಕಾರ್ಮಿಕರಿರುವ ಹಮಾಲರ ಪ್ಲಾಟ್ ಗೆ ಶುದ್ಧ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿದರು.
ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಕಾರ್ಯಾಲಯ ಹಾಗೂ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮಾನ್ಯ ತಹಶೀಲ್ದಾರರು ಮಧ್ಯಪ್ರವೇಶಿಸಿ ನಮ್ಮಗೆ ನ್ಯಾಯ ಒದಗಿಸಬೇಕು ಹಮಾಲರ ಪ್ಲಾಟ್ ಗೆ 2012 ರಂದು ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಕಳೆದ 12 ವರ್ಷಗಳಿಂದ ಮೂಲಭೂತ ಸಮಸ್ಯೆಗಳಿಂದ ಜನರು ಪರದಾಡುತ್ತಿದ್ದಾರೆ. ಚುನಾವಣಾ ಸಂಧರ್ಭದಲ್ಲಿ ಭಾಷಣಕ್ಕೆ ಸೀಮಿತವಾಗುವ ರಾಜಕೀಯ ವ್ಯಕ್ತಿಗಳ ಆಶ್ವಾಸನೆಗಳು ಬಡವರ ಜೀವನ ಸುಧಾರಿಸುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಕುಡಿಯುವ ನೀರು ಇಲ್ಲ. ಸ್ವಚ್ಛತೆಯ ಮಾತೇ ಇಲ್ಲ. ಬೆರಳೆಣಿಕೆಯಷ್ಟು ಮನೆಗಳು ರಾಮಾಪುರ ಗ್ರಾಮ ಪಂಚಾಯತ್ ಅಡಿಯಲ್ಲಿದ್ರೆ, ಉಳಿದ ಬಹುತೇಕ ಮನೆಗಳು ಗಜೇಂದ್ರಗಡ ಪುರಸಭೆ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ನಿರ್ಲಕ್ಷ ತೋರುತ್ತಾರೆ ಎಂಬ ಆರೋಪವೂ ಕೇಳಿ ಬರುತ್ತಿವೆ. ಅದೇನೇ ಇರಲಿ, ಸ್ವತಂತ್ರ ಭಾರತದ ಕನಸು ಮಾತ್ರ ಇಡೇರದಿರುವುದು ವಿಪರ್ಯಾಸವಾಗಿದೆ. ಇನ್ನಾದರು ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ, ಸಮಸ್ಯೆ ಪರಿಹರಿಸಿ ಎಂದು ಪೀರು ರಾಠೋಡ್ ಒತ್ತಾಯಿಸಿದ್ದಾರೆ. ಅಲ್ಲದೇ, ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಶೇಖವ್ವ ವದೆಗೋಳ್ ಹಮಾಲರ ಪ್ಲಾಟ್ ಅಧ್ಯಕ್ಷರು, ಕಾರ್ಯದರ್ಶಿ ರಾಜೇಶ್ವರಿ ಬಿ, ತಾಲೂಕು ಕಾರ್ಯದರ್ಶಿ ಪೀರು ರಾಠೋಡ್, ತಾಲೂಕು ಮುಖಂಡರಾದ ಮೇಹಬೂಬ್ ಹವಾಲ್ದಾರ್, ರೇಣಪ್ಪ ರಾಠೋಡ್, ದೇವಲೆಪ್ಪ ಮಾಳೋತ್ತರ್, ಪಾರವ್ವ ಮಾಳೋತ್ತರ್, ಅಕ್ಕಮ್ಮ ಮಾಳೋತ್ತರ್, ಸೋಮವ್ವ ಮಾಳೋತ್ತರ್, ಲಲಿತಾ ಮಾರನಬಸರಿ, ಅಕ್ಕಮ್ಮ ಮಾರನಬಸರಿ, ಕರಕಮ್ಮ ಗಡಾದ್, ಶಂಕ್ರಮ್ಮ ಗಡಾದ್, ಮೀನಾಕ್ಷಿ ರಾಠೋಡ್, ರೇಣುಕಾ ಹರಪನಹಳ್ಳಿ, ರತ್ನವ್ವ ಮೂಲಿಮನಿ, ಶಕಿಲಾ ರಾಠೋಡ್, ಲಕ್ಷ್ಮವ್ವ ರಾಠೋಡ್, ಉಮಾ ಕಲಾಲ್, ರೇಣವ್ವ ವದೆಗೋಳ್, ಲಕ್ಷ್ಮವ್ವ ವಡ್ಡರ್, ಮಂಜವ್ವ ಕಲಾಲ್, ಶೇಕಮ್ಮ ವದೆಗೋಳ್, ಲಲಿತಾ ನಾಯಕ್, ರೇಣವ್ವ ಚಲವಾದಿ, ಈರವ್ವ ಕಲಾಲ್, ಕೆ. ವಲಗೇರಿ, ಕಳಕವ್ವ ಹಾದಿಮನಿ, ರೇಖಾ ಚವ್ಹಾಣ್, ಲಕ್ಷ್ಮವ್ವ ಕಲಾಲ್, ಶರಣವ್ವ ರಾಠೋಡ್ ಸೇರಿದಂತೆ ಅನೇಕರು ಹಾಜರಿದ್ದರು.
Post a Comment