-->
Bookmark

Gajendragad : ಸಿಡಿಲಿಗೆ 4 ಕುರಿ, 6 ಆಡು ಬಲಿ : ಕುರಿಗಾಹಿಯ ಕಣ್ಣೀರು

Gajendragad : ಸಿಡಿಲಿಗೆ 4 ಕುರಿ, 6 ಆಡು ಬಲಿ : ಕುರಿಗಾಹಿಯ ಕಣ್ಣೀರು 

ಗಜೇಂದ್ರಗಡ : (Apr_ 26_2025) ತಾಲೂಕಿನಾದ್ಯಂತ ನೆನ್ನೆ ಸಂಜೆ (ಶುಕ್ರವಾರ 25_04_2025)ರಂದು ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ 4 ಕುರಿ, 8 ಆಡುಗಳು ಸಿಡಿಲಿಗೆ ಬಲಿಯಾಗಿವೆ. ಸಂಜೆ ವೇಳೆ ಕುರಿ ಮೇಯಿಸಿ ಹಟ್ಟಿಗೆ ವಾಪಸ್ಸಾಗುತ್ತಿದ್ದಾಗ ಮಳೆ ಆರಂಭವಾಗಿದೆ. ಆಶ್ರಯಕ್ಕಾಗಿ ಇಟಗಿ ಗ್ರಾಮದ ಶೇಖವ್ವ ತಿಮ್ಮಪ್ಪ ಪಲ್ಲೆದ್ ಇವರ ಹೊಲದಲ್ಲಿನ ಬನ್ನಿ ಗಿಡದ ಕೆಳಗೆ ಕುರಿ, ಆಡುಗಳನ್ನ ನಿಲ್ಲಿಸಿದ್ದಾರೆ. ಈ ವೇಳೆ ಮಳೆಯೊಂದಿಗೆ ಸಿಡುಲು ಬಡಿದು ಕುರಿ, ಆಡು ಸಾವನ್ನಪ್ಪಿವೆ ಎಂದು ಮಾಲೀಕ ಯಲ್ಲಪ್ಪ ಕಳಕಪ್ಪ ಕುರಿ ( ಕಟ್ಟಿಮನಿ ) ಹೇಳಿದ್ದಾರೆ. ಇನ್ನೂ, ಮೂರು ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮಕ್ಕಳನ್ನ ಬೆಳೆಸಿದ ಹಾಗೆ ಬೆಳೆಸಿದ್ದ ಕುರಿ, ಆಡುಗಳು ಸಿಡಿಲಿಗೆ ಬಲಿಯಾಗಿರುವುದು ನೋವುಂಟು ಮಾಡಿದೆ ಎಂದು ಕುರಿಗಾಹಿ ಯಲ್ಲಪ್ಪ ಕಣ್ಣೀರು ಹಾಕಿರುವುದು ಹೃದಯ ಕಲುಕುವ ದೃಶ್ಯ ಕಂಡು ಬಂತು. 

ಇತ್ತ, ಕುರಿಗಾಹಿಗಳು ಸುರಕ್ಷಿತವಾಗಿದ್ದು, ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Post a Comment

Post a Comment