ಗಜೇಂದ್ರಗಡ : (Apr_28_2025)
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಮಾಪೂರ ಗ್ರಾಮ ಪಂಚಾಯತ್ ನಲ್ಲಿ ನರೇಗಾ ಯೋಜನೆ ಕೆಲಸ ನಡೆದೆ ಇಲ್ಲ. ಕಳೆದ ಮಾರ್ಚ್ 2024 ರಿಂದ ಮಾರ್ಚ್ 2025 ರ ವರೆಗೆ ನರೇಗಾ ಯೋಜನೆಯ ಕೆಲಸ ಕಾಮಗಾರಿಗಳು ನಡೆದಿಲ್ಲ ಎಂದು ಪರಸಪ್ಪ ಪವಾಡೆಪ್ಪ ಗುಡದೂರ್ ಹೇಳಿದ್ದಾರೆ.
ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ರಾಮಾಪೂರ, ಹೊಸ ರಾಮಾಪೂರ, ಹಿರೇಕೊಪ್ಪ, ಚಿಲ್ ಝರಿ, ವೀರಾಪೂರ್
ಕೊಡಗಾನೂರ, ಪುರ್ತಗೇರಿ ಗ್ರಾಮಗಳು ರಾಮಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತವೆ. ಆದ್ರೆ, ಈ ಬಗ್ಗೆ ಪಿಡಿಓ ಇಟಗಿಮಠ ಅವರು ಗಮನ ಹರಿಸಿಲ್ಲ ಎಂದು ಆರೋಪಿಸಿದರು. ಗ್ರಾಮದಲ್ಲಿ ಬಿರುಬೇಸಿಹೆಯಿಂದ ಹಳ್ಳಿ ಜನರು ಕಂಗಾಲಾಗಿದ್ದಾರೆ. ಕೆಲಸ ವಿಲ್ಲದೇ, ಪರದಾಡುತ್ತಿದ್ದಾರೆ. ಆದ್ರೆ, ಬಡ ಕೂಲಿಕಾರ್ಮಿಕರಿಗೆ ಕೊಡಬೇಕಾದ ಕೆಲಸ ಕೊಟ್ಟಿಲ್ಲ ಎಂದು ಗೂಡದೂರ್ ಸ್ಪಷ್ಟಪಡಿಸಿದರು. ನರೇಗಾ ಯೋಜನೆ ಕೆಲಸ ಆರಂಭಿಸಿ ಎಂದು ಹೇಳಿದರೆ, ಕೆಲಸ ಪ್ರಾರಂಭಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
Post a Comment