-->
Bookmark

Gajendragad : ಕ್ರೀಡಾಂಗಣ ಕಾಮಗಾರಿ ಸ್ಥಳದಿಂದ ಕಾಲ್ಕಿತ್ತ ಕೆಲಸಗಾರರು : ಇದು ಕಿರಾ ನ್ಯೂಸ್ ಇಂಪ್ಯಾಕ್ಟ್...?

Gajendragad : ಕ್ರೀಡಾಂಗಣ ಕಾಮಗಾರಿ ಸ್ಥಳದಿಂದ ಕಾಲ್ಕಿತ್ತ ಕೆಲಸಗಾರರು : ಇದು ಕಿರಾ ನ್ಯೂಸ್ ಇಂಪ್ಯಾಕ್ಟ್...? 

ಗಜೇಂದ್ರಗಡ : (Apr_11_2025)
ಕೋಟೆನಾಡು ಎಂದು ಕರೆಯುವ ಗಜೇಂದ್ರಗಡ ಗುಡ್ಡದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಅಕ್ರಮವಾಗಿ ಗುಡ್ಡವನ್ನ ಅಗೆಯಲಾಗುತ್ತಿತ್ತು. ಕಳೆದ ತಿಂಗಳು ಮಾರ್ಚ್ 22 ರಂದು ಸ್ಥಳಕ್ಕೆ ಕಿರಾ ನ್ಯೂಸ್ ಕನ್ನಡದ ಸಂಪಾದಕರಾದ ಕೃಷ್ಣಾ ರಾಠೋಡ್ ತೆರಳಿದ್ದರು. ಈ ವೇಳೆ ನಾವು Royalty ಕಟ್ಟಿದ್ದೇವೆ ಎಂದು ಟಿಪ್ಪರ್ ಚಾಲಕರೊಬ್ಬರು ಮಾಹಿತಿ ನೀಡಿದ್ದರು‌. ನಾವು ಪರ್ಮಿಟ್ ಪಡೆದಿದ್ದೇವೆ ಎಂದು ಹೇಳಿ ಒಂದು ಹಾಳೆಯನ್ನ ತೋರಿಸಿದ್ದರು. ಅದರಲ್ಲಿ ಮಣ್ಣು ತುಂಬಲು ಬೆಳಗ್ಗೆ 8.47 ರಿಂದ 10.47 ಬೆಳಗ್ಗೆ ಎಂದು ನಮೂದಾಗಿತ್ತು. ಆದ್ರೆ, ಮಧ್ಯಾಹ್ನ 12 ಗಂಟೆ ನಂತರವೂ ಗುಡ್ಡದಲ್ಲಿ ಮಣ್ಣು ಅಗೆಯುವ ಕಾರ್ಯ ನಡೆದಿತ್ತು. ಈ ವೇಳೆ, ಮಾತನಾಡಿದ ಡ್ರೈವರ್ ಒಬ್ಬರು ನಮಗೆ ದಾರಿ ಮಾಡಲು ಹೇಳಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಈಗ ಎಪ್ರಿಲ್ 11 ಬರುತ್ತಿದ್ದಂತೆ ಗಂಟು ಮೂಟೆ ಕಟ್ಟಿಕೊಂಡು ಜೆಸಿಬಿ, ಟಿಪ್ಪರ್ ಸಮೇತ ಕೆಲಸಗಾರರು ಸ್ಥಳದಿಂದ ಮಾಯವಾಗಿವೆ. ಹಗಲು ರಾತ್ರಿ ಎನ್ನದೇ ಮಣ್ಣು ಅಗೆದು ರಸ್ತೆ ಮಾಡುತ್ತೇವೆ ಎನ್ನುತ್ತಿದ್ದವರು ಮಂಗಮಾಯವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 
ಇನ್ನೂ, ಫೆಬ್ರವರಿ ತಿಂಗಳಲ್ಲಿ ಗಜೇಂದ್ರಗಡ ತಹಶೀಲ್ದಾರ್ ಅವರು ಪತ್ರಿಕಾ ಹೇಳಿಯನ್ನ ನೀಡಿದ್ದರು. ಅವರು ಸ್ಥಳದಿಂದ ಕಾಲ್ಕಿತ್ತಿರುವುದಕ್ಕೆ ಮತ್ತು ಕ್ರೀಡಾಂಗಣ ಕಾಮಗಾರಿ ಕಾನೂನಾತ್ಮಕ ಎನ್ನುವುದಕ್ಕೆ ಯಾವ ಪುರಾವೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. 
ಕೆಲ ಸರ್ಕಾರಿ ಅಧಿಕಾರಿಗಳಿಗೆ ಕೇಳಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಹೇಳಿಕೆ ನೀಡುತ್ತಾರೆ ಎಂದು ಸಹ ತಿಳಿದು ಬಂದಿದೆ.‌
ಕಿರಾ ನ್ಯೂಸ್ ಕನ್ನಡ ನಿರಂತರ ಸುದ್ದಿ ಪ್ರಕಟಿಸುತ್ತಿದೆ. ಈ ಸುದ್ದಿಗೆ ಸಾರ್ವಜನಿಕರಿಂದ ವ್ಯಾಪಕ ವೆಂಬಲ ವ್ಯಕ್ತವಾಗಿತ್ತು. ಇದು ಕಿರಾ ನ್ಯೂಸ್ ಕನ್ನಡ ಪ್ರಕಟಿಸಿದ ಸುದ್ದಿಯ ಇಂಪ್ಯಾಕ್ಟ್ ಆಗಿದೆ. 
ಕ್ರೀಡಾಂಗಣ ಬೇಕಿರುವುದು ನಿಜ. ಆದ್ರೆ, ಕ್ರೀಡಾಂಗಣ ನೆಪದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನ ತಡೆಯುವುದು ಮುಖ್ಯವಾಗಿತ್ತು. ಸ್ಥಳದಿಂದ ಕಾಲ್ಕಿತ್ತಿರುವ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಈ ಬಗ್ಗೆ ಯಾವ ಸಮಜಾಯಿಸಿ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. 

ಬಿಜೆಪಿಯ ಬಹಿರಂಗ ಚರ್ಚೆ ಆಹ್ವಾನ ಸ್ವೀಕರಿಸಿದ್ದ ಕಾಂಗ್ರೆಸ್ ನ ಯಾವ ಯಾವ ಮುಖಂಡರು ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಬಹಿರಂಗ ಚರ್ಚೆಗೆ ಅಧಿಕಾರಿಗಳನ್ನ ಆಹ್ವಾನಿಸಿದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಯಾವ ಉತ್ತರ ನೀಡಲಿದೆ ಎಂದು ಜನತೆ ಕಾತುರದಿಂದ ಕಾಯುತ್ತಿದೆ.  

ಮತ್ತೊಂದೆಡೆ, ಕ್ರೀಡಾಂಗಣ ಬೇಕೆಬೇಕು. ತಾಲೂಕಾ ಕ್ರೀಡಾಂಗಣ ನಿರ್ಮಾಣಕ್ಕೆ ಸಾರ್ವಜನಿಕರಿಂದ ಒತ್ತಾಯವೂ ಕೇಳಿ ಬಂದಿದೆ. ಕಾನೂನಾತ್ಮಕ ಕ್ರೀಡಾಂಗಣ ಬೇಕಿದೆ. 
ಜೊತೆಗೆ ಬಿಜೆಪಿ ಮುಂದಿನ ನಡೆಯೂ ನಿಗೂಢವಾಗಿದೆ. 23 ನೇ ವಾರ್ಡ್ ನ ಉಣಚಗೇರಿಯಲ್ಲಿ ರೈತರಿಗೆ ನಿರಂತರ ವಿದ್ಯುತ್ ನೀಡುತ್ತಿಲ್ಲ ಎಂದು ಗಜೇಂದ್ರಗಡ ಬಂದ್ ಮಾಡಿ ಕಾಂಗ್ರೆಸ್ ಪ್ರತಿಭಟಿಸಿತ್ತು. ಈಗ ಬಿಜೆಪಿ ಅದೇ ದಾರಿ ಹಿಡಿಯಲಿದೆಯಾ...? ಅಥವಾ ಕಾನೂನು ಹೋರಾಟ ಮಾಡಲಿದೆಯಾ...? ಜನರಲ್ಲಿ ಜಾಗೃತಿ ಮೂಡಿಸಲಿದೆಯಾ...? ಮನೆ‌ಮನೆಗೆ ತೆರಳಿ ಕಾಂಗ್ರೆಸ್ ಅವ್ಯವಹಾರವನ್ನ ತಿಳಿಸುವ ಪ್ರಯತ್ನ ಮಾಡಲಿದೆಯಾ...? ಅಥವಾ ನಮ್ಮ ಕೆಲಸಕ್ಕೆ ನಾವು ಯಾಕೆ ಕೈ ಕೆಸರು ಮಾಡಿಕೊಳ್ಳೊದು ಎಂದು ಸುಮ್ಮನೆ ಕುಳಿತು ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಕುಳಿತು ಕೊಳ್ಳಲಿದೆಯಾ ಎಂಬುದು ಸಹ ಮಹತ್ವ ಪಡೆದುಕೊಂಡಿದೆ.‌

ಒಂದು ವೇಳೆ, ಗುಡ್ಡ ಅಗೆಯುವ ಕಾರ್ಯಕ್ಕೆ ತಿಲಾಂಜಲಿ ಬಿದ್ದಿದ್ದೆ ಯಾದ್ರೆ, ಇದು ಕಿರಾ ನ್ಯೂಸ್ ಕನ್ನಡ ಪ್ರಕಟಿಸಿದ ಸ್ಟೋರಿ ಬಿಗ್ ಇಂಪ್ಯಾಕ್ಟ್ ಎಂದು ಪರಿಗಣಿಸಲಾಗುವುದು. 

ವರದಿ : 
ಕೃಷ್ಣಾ ರಾಠೋಡ್ 
ಸಂಪಾದಕರು, 
ಕಿರಡ ನ್ಯೂಸ್ ಕನ್ನಡ

ಮೊ : 8197474996
Post a Comment

Post a Comment