ಪುರಸಭೆ ದುರಾಡಳಿತಕ್ಕೆ ಮತ್ತೊಂದು ನಿದರ್ಶನ....?
ಗಜೇಂದ್ರಗಡ : (Aprl_13_2025)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕಸ ವಿಕೇವಾರಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿಗಳ ಪ್ರಕಾರ ಎಪ್ರಿಲ್ 13 ರ ಮಧ್ಯಾಹ್ನವೇ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ರಾತ್ರಿ 10 ಗಂಟೆಗೆ ಕರೆ ಬಂದಾಗ ಸಂಪಾದಕರಾದ ಕೃಷ್ಣಾ ರಾಠೋಡ್ ಕುಷ್ಟಗಿ ರಸ್ತೆಯಲ್ಲಿರುವ ಕಸ ವಿಲೇವಾರಿ ಕೇಂದ್ರಕ್ಕೆ ಭೇಟಿ ನೀಡಿದಾಗ ಕಂಡ ದೃಶ್ಯ ಭಯಾನಕವಾಗಿತ್ತು.
ಕಸ ವಿಲೇವಾರಿ ಕೇಂದ್ರದಲ್ಲಿನ ಬೆಂಕಿಯಿಂದ ಗಜೇಂದ್ರಗಡ ಸಂಪೂರ್ಣ ಹೊಗೆಯಿಂದ ಆವರಿಸಿದೆ.
ಪುರಸಭೆ ಸ್ಯಾನಿಟರಿ ಸೂಪರ್ವೈಸರ್ ಪಿ.ಎನ್ ದೊಡ್ಡಮನಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿ, ಸಂಜೆ ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿತ್ತು ಎಂದು ಹೇಳಿದರು. ಅಗ್ನಿ ಶಾಮಕ ದಳದವರೂ, ಬೆಂಕಿ ನಂದಿಸುವ ಕಾರ್ಯ ಬಿಟ್ಟು ಬೇರೆ ಕಡೆ ಹೋಗಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ಅಂದ್ರೆ, ಅಗ್ನಿ ಶಾಮಕ ಸಿಬ್ಬಂದಿಗಳು ಅರ್ಧಕ್ಕೆ ಬಿಟ್ಟು ಹೋಗಿದ್ದಕ್ಕೆ ಕಾರಣ ತಿಳಿಸಿಲ್ಲ. ಇದು ಪುರಸಭೆ ಆಡಳಿತ ದುರಾಡಳಿತದಿಂದ ಕೂಡಿರುವುದಕ್ಕೆ ನಿರ್ದಶನವೇ...? ಇಲ್ಲ ಗಜೇಂದ್ರಗಡ ಪುತಸಭೆಗೆ ಕಸ ವಿಲೇವಾರಿ ಕೇಂದ್ರ ಬೇಡವಾದ ಕೂಸಾಗಿದ್ಯಾ ಎಂಬುದು ಸ್ಪಷ್ಟತೆ ತಿಳಿಯಬೇಕಿದೆ.
ವರದಿ :
ಕೃಷ್ಣಾ ರಾಠೋಡ್,
ಸಂಪಾದಕರು,
ಕಿರಾ ನ್ಯೂಸ್ ಕನ್ನಡ
Post a Comment