-->
Bookmark

Gajendragad : ವಿಲೇವಾರಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ : ಜನರ ಜೀವ ಹಿಂಡುವ ಹೊಗೆ : ಪ್ರತಿಪಕ್ಷ ನಾಯಕ ಮುಕಪ್ಪ ನಿಡಗುಂದಿ

Gajendragad : ವಿಲೇವಾರಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ : ಜನರ ಜೀವ ಹಿಂಡುವ ಹೊಗೆ : ಪ್ರತಿಪಕ್ಷ ನಾಯಕ ಮುಕಪ್ಪ ನಿಡಗುಂದಿ 

ಗಜೇಂದ್ರಗಡ : (Apr_14_2025)
ಅಂಬೇಡ್ಕರ್ ಜಯಂತಿ ಮುನ್ನಾ ದಿನ ಗಜೇಂದ್ರಗಡ ಪಟ್ಟಣದ ಕಸ ವಿಲೇವಾರಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ‌ ಘಟನೆ ಬೇಸರ ತಂದಿದೆ ಎಂದು ಪುರಸಭೆ ಪ್ರತಿಪಕ್ಷ ನಾಯಕ ಮೂಕಪ್ಪ  ನಿಡಗುಂದಿ ಹೇಳಿದ್ದಾರೆ. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ಈ ಘಟನೆ ಸಹಿಸಲಾಗದು, ಅಗ್ನಿ ಶಾಮಕ ದಳದಿಂದ ವಾಹನ ಬಂದು ಬೆಂಕಿ ನಂದಿಸದೇ ಮರಳಿ ಹೋಗಿರುವುದು ದುರದೃಷ್ಟಕರ ಎಂದು ಹೇಳಿದರು. 


ಬಿರು ಬೇಸಿಗೆಯಿಂದ ತತ್ತರಿಸಿರುವ ಜನತೆ ಆಸ್ಪತ್ರೆಗಳ ಮುಂದೆ ಸರತಿ ಸಾಲಿನಲ್ಲಿ ಪಾಳೆ ಹಚ್ಚಿದ್ದಾರೆ. ಈ ಮಧ್ಯೆ, ಉಸಿರಾಡುತ್ತಿರುವ ಗಾಳಿಯೂ ಕಲುಷಿತವಾಗಿ ಇನ್ನೆಷ್ಟು ಜನರ ಪ್ರಣ ತೆಗೆಯಲಿದ್ದಾರೆ ಎನ್ನುವುದನ್ನ ಅಧ್ಯಕ್ಷರು ಉತ್ತರಿಸಬೇಕೆಂದು ಹೇಳಿದರು. 

ಜನರ ಜೀವನದ ಜೊತೆ ಚೆಲ್ಲಾಟವಾಡುವುದನ್ನ ಕಾಂಗ್ರೆಸ್ ಬಿಡಬೇಕು. ಇಲ್ಲದಿದ್ದರೇ, ಮುಂಬರುವ ದಿನಗಳಲ್ಲಿ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮುಕಪ್ಪ ನಿಡಗುಂದಿ ಹೇಳಿದರು.
Post a Comment

Post a Comment