Gajendragad : ಕಸ ವಿಲೇವಾರಿ ಕೇಂದ್ರದಲ್ಲಿ ಬೆಂಕಿ : ಪುರಸಭೆ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್
ಗಜೇಂದ್ರಗಡ : (Apr_14_2025)
ಅಂಬೇಡ್ಕರ್ ರಚಿತ ಸಂವಿಧಾನ ಹಿಡಿದು ರಾಹುಲ್ ಗಾಂಧಿ ಅವರು ದೇಶದಾದ್ಯಂತ ಸಂಚರಿಸುತ್ತಾರೆ. ಆದ್ರೆ, ಅಂಬೇಡ್ಕರ್ ಜಯಂತಿ ದಿನವೇ ಗಜೇಂದ್ರಗಡ ಪಟ್ಟಣದ ಕಸ ವಿಲೇವಾರಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಪುರಸಭೆ ಆಡಳಿತ ಹದಗೆಟ್ಟಿರುವುದು ಕಂಡು ಬರುತ್ತದೆ. ಜನರ ಜೀವದೊಂದಿಗೆ ಕಾಂಗ್ರೆಸ್ ಚಲ್ಲಾಟವಾಡುತ್ತಿದೆ. ಘಟನೆಯ ಹೊಣೆ ಹೊತ್ತು ಪುರಸಭೆ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಒತ್ತಾಯಿಸಿದರು. ಈ ಘಟನೆಯ ಸಂಪೂರ್ಣ ಹೊಣೆಯನ್ನ ಅಧ್ಯಕ್ಷರೆ ಹೊರಬೇಕೆಂದು ಹೇಳಿದರು.
ಈ ಹಿಂದೆ ಜನರಿಗೆ ಕೊಡಬೇಕಾದ ಉತಾರ್ ಗೆ ಹಣ ತೆಗೆದುಕೊಂಡು ಕೊಟ್ಟಿದ್ದಾರೆ. ಫಲಾನುಭವಿಗಳಿಗೆ ಪುರಸಭೆ ಅನ್ಯಾಯ ಮಾಡಿತ್ತು. ಈಗ ಕಸ ವಿಲೇವಾರಿ ಕೇಂದ್ರದಲ್ಲಿ ತಗುಲಿದ ಬೆಂಕಿ ಜನರ ಜೀವ ಹಿಂಡುತ್ತಿದೆ. ಈ ಬಗ್ಗೆ ಪುರಸಭೆಯ ಉತ್ತರ ಕಾದು ನೋಡಬೇಕಿದೆ. ಇದು ಆಕಸ್ಮಿಕವಾಗಿ ತಗುಲಿದ ಬೆಂಕಿಯೋ ಅಥವಾ ಕಸ ಹೆಚ್ಚಾಗಿದ್ದಕ್ಕಾಗಿ ಪುರಸಭೆ ಸಿಬ್ಬಂದಿಗಳೇ ಬೆಂಕಿ ಹಚ್ಚಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ವಿಶೇಷ ತನಿಖಾ
ತಂಡ ರಚಿಸಬೇಕು ಮತ್ತು ತನಿಖೆ ಯಾಗಬೇಕೆಂದು ಜೆಡಿಎಸ್ ಮುಖಂಡ ಮಕ್ತುಮಸಾಬ್ ಮುಧೋಳ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು.
Post a Comment