-->
Bookmark

Gajendragad : ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವ ದಿನಗಳು ದೂರ ವಿಲ್ಲ : ಪೀರು ರಾಠೋಡ್

Gajendragad : ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವ ದಿನಗಳು ದೂರ ವಿಲ್ಲ : ಪೀರು ರಾಠೋಡ್ 

ಗಜೇಂದ್ರಗಡ : (Apr_14_2025)
ಕಸ ವಿಲೇವಾರಿ ಕೇಂದ್ರದಲ್ಲಿ ಬೆಂಕಿ‌ ಕಾಣಿಸಿಕೊಂಡು ಜನರ ಜೀವ ಹಿಂಡುತ್ತಿರುವ ಪ್ರಕರಣ ಜನಪ್ರತಿನಿಧಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಪುರಸಭೆ ಆಡಳಿತ ಹದಗೆಟ್ಟು ಹೋಗಿದೆ. ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗಿದೆ. ಪಟ್ಟಣದಲ್ಲಿ ಕ್ರಾಂತಿಯಾಗಬೇಕು. ಜನರು ಬೀದಿಗಿಳಿದು ಪ್ರಶ್ನೆ ಮಾಡಬೇಕು. ಬೀದಿಗಿಳಿದು ಹೋರಾಟ ಮಾಡಬೇಕು‌ ಅಂದಾಗ ಮಾತ್ರ ಜನಪ್ರತಿನಿಧಿಗಳು ಸುಧಾರಿಸುತ್ತಾರೆ. ಅಧಿಕಾರ ದಾಹದಿಂದ‌ ಮೆರೆಯುತ್ತಿರುವವರಿಗೆ ತಕ್ಕ ಪಾಠ ಕಲಿಸುವ ದಿನಗಳು ದೂರ ವಿಲ್ಲ‌ ಎಂದು ವಕೀಲರು, ಹೋರಾಟಗಾರಾದ ಪೀರು ರಾಠೋಡ್ ಹೇಳಿದ್ದಾರೆ.
Post a Comment

Post a Comment