Gajendragad : ರಿಕ್ಕಿ ರೈ ದಾಳಿ ಖಂಡಿಸಿ ಮನವಿ : ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಕೊಡಿ : ತಾಲೂಕಾಧ್ಯಕ್ಷ ಮಹಮ್ಮದ್ ಗೌಸ್ ಅಕ್ಕಿ
ಗಜೇಂದ್ರಗಡ : (Apr_23_2025)
ಮುತ್ತಪ್ಪ ರೈ ಅವರ ಕಿರ ಮಗ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯನ್ನ ಜಯ ಕರ್ನಾಟಕ ಸಂಘಟನೆ ಖಂಡಿಸಿ, ಗಜೇಂದ್ರಗಡದಲ್ಲಿ ತಹಶೀಲ್ದಾರ್ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ, ಮಾತನಾಡಿದ ಜಯ ಕರ್ನಾಟಕ ಸಂಘಟನೆ ಗಜೇಂದ್ರಗಡ ಮತ್ತು ರೋಣ ತಾಲೂಕಾಧ್ಯಕ್ಷ ಮಹಮ್ಮದಗೌಸ ಅಕ್ಕಿ, ದುಷ್ಕರ್ಮಿಗಳನ್ನ ಕೂಡಲೇ ಬಂಧಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ರಿಕ್ಕಿ ಅವರಿಗೆ ಕನ್ನಡ ನಾಡಿನ ಸೇವೆ ಮಾಡಲು ಅನುಕೂಲವಾಗುವಂತೆ ಸರ್ಕಾರದಿಂದ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.
ಇನ್ನೂ, ಗೃಹ ಸಚಿವರು ರಿಕ್ಕಿ ಅವರಿಗೆ ಭದ್ರತೆ ಕಲ್ಪಿಸಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು. ಇಲ್ಲದಿದ್ದರೇ, ಮುಂಬರುವ ದಿನಗಳಲ್ಲಿ ಜಯ ಕರ್ನಾಟಕ ಸಂಘಟನೆ ರಾಜ್ಯಾದ್ಯಂತ ಬೀದಿಗಿದು ಹೋರಾಟ ಮಾಡಲಿದೆ ಎಂದು ಮಹಮ್ಮದಗೌಸ್ ಅಕ್ಕಿ ಎಚ್ಚರಿಸಿದರು.
ಮನವಿ ಸಲ್ಲಿಸುವ ವೇಳೆ, ತಾಲೂಕಾಧ್ಯಕ್ಷ ಮಹಮ್ಮದ್ ಗೌಸ್ ಅಕ್ಕಿ, ತಾಲೂಕಾ ಸಂಚಾಲಕ ಶರಣು ಎಂ. ಹಲಗಿ, ದಾವಲಸಾಬ್ ಮಳಗಾವಿ, ಕರಿಯಪ್ಪ ಮಾದರ್, ಮಾಬುಸಾಬ್ ಡಾಲಾಯತ್, ರಮೇಶ್ ತಳವಾರ್, ಸಾದಿಕ್ ಮೊಮೀನ್, ಶರಣಪ್ಪ ಮುಗಳಿ, ಮೆಹಬೂಬ್ ಅತ್ತಾರ್, ವಿನೋದ್ ಮಾದರ್, ಮುತ್ತಯ್ಯ ಬಿನ್ನಾಳಮಠ, ಖಾಜೇಸಾಬ್ ಡಾಲಾಯತ್, ನವೀನಕುಮಾರ್ ಮಾದರ್, ಮಂಜುನಾಥ್ ಮಾದರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment