ಗಜೇಂದ್ರಗಡ : (29_09_2025)
ಪಟ್ಟಣದಲ್ಲಿ ನಿರಂತರ ಸುರಿದ ಮಳೆಗೆ 18ನೇ ವಾರ್ಡ್ ನ ಬೂದಿಹಾಳ್ ಓಣಿಯ ಹನಮಂತಪ್ಪ ವೀರಪ್ಪ ಹೂಗಾರ್ ಅವರ ಮನೆ ಗೋಡೆ ಕುಸಿದಿದೆ. ನಿರಂತರವಾಗಿ ಸುರಿದ ಮಳೆಗೆ ಮೆನೆಗೆ ಹಾನಿಯಾಗಿದೆ. ಮಣ್ಣಿನ ಗೋಡಯಾದ್ದರಿಂದ ಗೋಡೆ ಕುಸಿದಿದೆ. ಶನಿವಾರ ಸಂಜೆ ಗೋಡೆ ಕುಸಿದಿದೆ.
ಅಡುಗೆ ಕೋಣೆ ಇದಾಗಿದ್ದು, ಇನ್ನೇನು ಮನೆಯ ಮಹಿಳೆಯರು ಅಡುಗೆ ಮಾಡಬೇಕು ಎನ್ನುವಾಗಲೇ ಗೋಡೆ ಕುಸಿದಿದೆ. ಮನೆಯಲ್ಲಿ ನೀರು ಸೋರಿಕೆಯಾಗುತ್ತಿದೆ. ಮತ್ತೊಂದು ಜೊರಾದ ಮಳೆ ಸುರಿದ್ರೆ, ನಮ್ಮ ಅಡುಗೆ ಮನೆ ಸಂಪೂರ್ಣವಾಗಿ ಬಿಳತ್ತೆ ಎಂದು ಹನಮಂತಪ್ಪ ಹೂಗಾರ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು.
Post a Comment