ಗಜೇಂದ್ರಗಡ : (Oct_01_2025)
ಕೃಷ್ಣಾಪುರ-ಕಣವಿಯಲ್ಲಿ ಶ್ರೀ ತುಳಜಾ ಭವಾನಿ ಶಕ್ತಿಪೀಠ ಜಿಗೇರಿ ತಾಂಡಾ ದೇವಸ್ಥಾನದಲ್ಲಿ ಕಳಸಾರೋಹಣ ನಡೆಯಿತು. ಬೆಳಗ್ಗೆ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬೆಳಗ್ಗೆಯಿಂದಲೇ, ಪೂಜಾ ಕೈಂಕರ್ಯಗಳು ನಡೆದ್ವು. ಕಳೆದ ಒಂದು ವಾರದಿಂದಕೇ, ಕೃಷ್ಣಾಪೂರ-ಕಣವಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಈ ಭಾಗದಲ್ಲಿ ಶ್ರೀ ತುಳಜಾಭವಾನಿಯ ದೇವಸ್ಥಾನ ಬೆರಳೆಣಿಕೆಯಷ್ಟಿವೆ. ಬಡವರಿಗೆ ದೇವಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುವುದು, ಕಷ್ಟ ಎಂದರಿತು. ಎಲ್ಲರಿಗೂ ದೇವರ ದರ್ಶನ ಭಾಗ್ಯ ದೊರೆಯಲಿ ಎಂದು ಶ್ರೀ ಸೋಮಪ್ಪ ರಾಠೋಡ್ ಅವರು, ಈ ದೇವಸ್ಥಾನ ನಿರ್ಮಿಸಿದ್ದಾರೆ. ಇನ್ನೂ, ಇಂದು ನಡೆದ ಕಳಸಾರೋಹಣವನ್ನ ಪತ್ರಕರ್ತ ಹಾಗೂ ವಕೀಲರಾದ ಮಂಜುನಾಥ್ ರಾಠೋಡ್ ಹೊತ್ತಿದ್ದು, ವಿಶೇಷವಾಗಿತ್ತು.
ಕಾಲಕಾಲೇಶ್ವರ ದೇವಸ್ಥಾನದ ಅರ್ಚಕರಾದ ಡಾ. ರಾಜನಾರಾಯಣ ಕಲ್ಲಿನಾಥ್ ಭಟ್ ಕಳಸಾರೋಹಣದ ಪೂಜಾ ಕಾರ್ಯಕ್ಕೆ ಸಾಕ್ಷಿಯಾದ್ರು.
ಇತ್ತ, ಶಶಿಧರ್ ಹೂಗಾರ್, ರಾಜೇಂದ್ರಸ್ವಾಮಿ ಹಿರೇಮಠ ಮತ್ತು ಕಾಲಕಾಲೇಶ್ವರದ ಗ್ರಾಮಸ್ಥರು, ಸೇರಿದಂತೆ ಬಂಜಾರ ಸಮುದಾಯದ ಹಲವು ಮುಖಂಡರು ಭಾಗವಹಿಸಿದ್ದರು.
Post a Comment