ಗಜೇಂದ್ರಗಡ : (Oct_07_2025)
ಗದಗ ಜಿಲ್ಲಾ ಪೊಲೀಸ್ ಗಜೇಂದ್ರಗಡ ಪೊಲೀಸ್ ಠಾಣೆಯಿಂದ ಮನೆ ಮನೆ ಪೊಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹೊಲಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಅದರಂತೆ ಕಾಲಕಾಲೇಶ್ವರ ವ್ಯಾಪ್ತಿಯ ಗಂಗಾನಗರದಲ್ಲಿ ರೈತರ ಜಮೀನುಗಳಿಗೆ ಗಜೇಂದ್ರಗಡ ಠಾಣೆಯ ಮುಖ್ಯ ಪೇದೆಗಳಾದ ಜೆ.ಪಿಪೂಜಾರ್, ಮಂಜುಳಾ ಕೌಜಗೇರಿ ಅವರು ಮನೆ_ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಕಾಲಕಾಲೇಶ್ವರ ವ್ಯಾಪ್ತಿಯ ಗಂಗಾ ನಗರಕ್ಕೆ ಭೆಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಕೇಬಲ್ ಕಳ್ಳತನ, ಕೊಳಿ, ಕುರಿ ಸೇರಿದಂತೆ ಜಾನುವಾರುಗಳ ಕಳ್ಳತನ ವಾಗದಂತೆ ರೈತರು ಜಾಗೃತೆ ವಹಿಸಬೇಕೆಂದು ಮನವಿ ಮಾಡಿದರು. ಈ ಮಧ್ಯೆ, ಯಾವುದೇ ತುರ್ತುಪರಿಸ್ಥಿತಿ ಇರಲಿ ಪೊಲೀಸ್, ಅಗ್ನಿಶಾಮಕ, ಆಂಬ್ಯುಲೇನ್ಸ್ ಗೆ 112 ಡಯಲ್ ಮಾಡಿ ಎಂದು ಮನವಿ ಮಾಡಿದರು. ಇತ್ತ, ಸೈಬರ್ ಹಣಕಾಸಿಗೆ 1930 ಕರೆ ಮಾಡಿ, ಚೈಲ್ಡ್ ಲೈನ್ ಗಾಗಿ 1098 ಮತ್ತು ಮಾದಕ ವಸ್ತು ಕಳ್ಳಸಾಗಾಣಿಕೆ ಕುರಿತ ಮಾಹಿತಿಯನ್ನು 1933 ಗೆ ಕರೆ ಮಾಡಲು ತಿಳಿಸಿದರು. ಅತಿ ಮುಖ್ಯವಾಗಿ ಥರ್ಡ್ ಐ ( ವಾಹನ ಸವಾರರಿಗೆ ) ಲೈಸನ್ಸ್ ಮತ್ತು ಇತರೆ ಮಾಹಿತಿ ಕಡ್ಡಾಯವಾಗಿರಲಿ ಎಂದು ಜಾಗೃತಿ ಮೂಡಿಸಿದರು.
ಅದೇನೇ ಇರಲಿ ಸಾರ್ವಜನಿಕರಿಗೆ ಪೊಲೀಸ್ ಠಾಣೆ ಹತ್ತಿರವಾಗುತ್ತಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Post a Comment