ಗಜೇಂದ್ರಗಡ : (Oct_08_2025)
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರದಲ್ಲಿ ಬಾಲಕಿ ಮೇಲೆ ಅತ್ಯಾಚಾರದ ಹೃದಯ ವಿದ್ರಾವಕ ಘಟನೆ ನಡೆದಿದೆ. 32 ವರ್ಷದ ಪುರುಷ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದ ಬಗ್ಗೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದಲ್ಲಿ ನಡೆಯುತ್ತವೆ ಎಂದು ಆಗಾಗಾ ಕೇಳುತ್ತಿದ್ವಿ. ಆದ್ರೀಗ, ನಮ್ಮ ಸುತ್ತಮುತ್ತ ಇಂತಹ ಅಘಾತಕಾರಿ ಪ್ರಕರಣಗಳು ನಡೆಯುತ್ತಿದ್ದು ಶೋಚನೀಯವಾಗಿದೆ. ಏನು ಅರಿಯದ ಕಂದಮ್ಮನ ಮೇಲೆ ಇಂತಹ ಘಟನೆ ನಡೆಯಬಾರದಿತ್ತು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿತನು ಕುರಿಗಾಹಿಯಾಗಿದ್ದಾನೆ. ಅತ್ಯಾಚಾರ ನಡೆಸಿದ ವ್ಯಕ್ತಿ ಸೈಕೋ ಎಂದು ಸ್ಥಳಿಯರು ಹೇಳುತ್ತಾರೆ. ಇದು ಅತ್ಯಂತ ಘನಘೋರ ಕೃತ್ಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ
Post a Comment