ಗಜೇಂದ್ರಗಡ : (Oct_13_2025)
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುಂಚೂಣಿಯಲ್ಲಿದೆ. ಅದರಂತೆ ರೋಣ ತಾಲೂಕಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಕೊನೆಯ ಎಲೆಕ್ಷನ್ ಎಂದು ಮತದಾರರ ಬಳಿಗೆಹೋಗಿ ಮತ ಕೇಳಿದ್ರು ಶಾಸಕರಾದ ಜಿ.ಎಸ್. ಪಾಟೀಲ್. ಜೊತೆಗೆ ಕ್ಷೇತ್ರದಲ್ಲಿ ಜನ ಸಮಾನ್ಯರು ಸಹ ಶಾಸಕರಾದ ಜಿ.ಎಸ್. ಪಾಟೀಲ್ ಅವರು ಸಚಿವರಾದ್ರೆ, ಕ್ಷೇತ್ರದಲ್ಲಿ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಕ್ಷೇತ್ರದ ಜನ ನಂಬಿಕೆ ಇಟ್ಟಿದ್ದಾರೆ.
ಇತ್ತ, ಕ್ಷೇತ್ರದಲ್ಲಿ ಮಾಜಿ ಸಚಿವರಾದ ಕಳಕಪ್ಪ ಬಂಡಿ ಅವರಿಗೆ ಬಿಜೆಪಿಯಲ್ಲಿ ಸಚಿವ ಸ್ಥಾನ ಕೊಟ್ಟು ರತ್ನಗಂಬಳಿ ಹಾಸಿ, ರೋಣ ಕ್ಷೇತ್ರಕ್ಕೆ ಮೊದಲ ಮಂತ್ರಿಯಾಗಿ ಮಾಡಿದ್ದು, ಕ್ಷೇತ್ರದ ಜನರು ನೆನೆಯುವಂತೆ ಮಾಡಿದ್ದರು.
ಗಜೇಂದ್ರಗಡ ಪಟ್ಟಣ ವ್ಯಾಪಾರ ವ್ಯವಹಾರಕ್ಕೆ ಎಲ್ಲರೂ ಇಲ್ಲೆ ಆಶ್ರಯ ಕಂಡುಕೊಳ್ಳುವಂತೆ ಮಾಡಿದರು. ಪಟ್ಟಣ ಶರವೇಗದಲ್ಲಿ ಬೆಳೆಯಲು, ರಾಜ್ಯ ರಾಜಕಾರಣದಲ್ಲಿ ಕ್ಷೇತ್ರದ ಗಮನ ಸೆಳೆಯುವಂತೆ ಮಾಡಿದ್ದು, ಕಳಕಪ್ಪ ಬಂಡಿ ಅವರು...
ಈಗ ರಾಜಕೀಯ ಪರಿಸ್ಥಿತಿಗಳು ಬದಲಾಗಿದೆ. ಪಟ್ಟಣ ಪಂಚಾಯತ್ ಚುನಾವಣೆ ಎದುರಾಗಿದೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದ ಹಿರಿಯ ಮತ್ಸದ್ದಿ, ರೋಣ ಕ್ಷೇತ್ರದ ಮುಂದಿನ ಕಾಂಗ್ರೆಸ್ ನಾಯಕ ಎಂದೆ ಹೆಸರಾಗಿರುವ ಸಿದ್ದಪ್ಪ ಬಂಡಿ ಅವರ ಹೆಗಲ ಮೇಲೆ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಇದೆ. ಅಣ್ಣ ಮಾಡಿದ ಛಾಪನ್ನ ತಮ್ಮ ಮುಂದುವರೆಸಲಿದ್ದಾರೆ ಎಂದು ಅವರ ಆಪ್ತರು, ಅಭಿಮಾನಿಗಳು ಹೇಳುತ್ತಾರೆ.
ಇದೆಲ್ಲ ದೃಷ್ಟಿಕೋನದಿಂದ ರೋಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಅಲೆ ಎದುರಾಗಿದೆ. ಪಂಚ ಗ್ಯಾರಂಟಿ ತಂದ ಮೇಲೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಜಿ.ಎಸ್.ಪಾಟೀಲ್ ಅವ್ರು, ಸಚಿವರಾದ್ರೆ, ಕ್ಷೇತ್ರದಕ್ಕೆ ಹೆಚ್ಚಿನ ಅನುದಾನ ಬರಲಿದೆ ಎಂದು ಕ್ಷೇತ್ರದ ಮತದಾರ ಕಾದುಕುಳಿತಿದ್ದಾನೆ...
ಜಿ.ಎಸ್ ಪಾಟೀಲ್ ಅವರ ಬಹುದಿನಗಳ ಕನಸು ಈಡೇರತ್ತಾ...? ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗಲಿದೆಯಾ...? ಅಭಿವೃದ್ಧಿಯಾಗಲಿದೆಯಾ...? ಹೊಸ ಸಂಪುಟ ರಚನೆಯೋ, ಸಂಪುಟ ಪುನರ್ರಚನೆಯೋ ಕಾದು ನೋಡಬೇಕಿದೆ....
ಕೃಷ್ಣ ರಾಠೋಡ್,
ಸಂಪಾದಕರು, ಕಿರಾ ನ್ಯೂಸ್ ಕನ್ನಡ.
8197474996
Post a Comment