ರೋಣ :
ಕರ್ನಾಟಕ ಪ್ರಾಂತ ರೈತ ಸಂಘಟನೆ ನೇತೃತ್ವದಲ್ಲಿ ಗಜೇಂದ್ರಗಡ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಹಿಂದೆ ಸುಮಾರು ಮೂರು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಹೋರಾಟದ ಸ್ಥಳಕ್ಕೆ ಮಾನ್ಯ ತಹಶೀಲ್ದಾರರು ಭೇಟಿ ನೀಡಿ ಹದಿನೈದು ದಿನಗಳ ಒಳಗೆ ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆ ಕರೆದು ನಿಮಗೆ ನ್ಯಾಯ ಒದಗಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು. ಆದ ನಂತರ ಹೋರಾಟ ಹಿಂತೆಗೆದುಕೊಳ್ಳಲಾಗಿತ್ತು.
ದಿನಾಂಕ:- 08/10/2025 ರಂದು ಮಾನ್ಯ ತಹಶೀಲ್ದಾರರು ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆ ಕರೆದು ಸಂಘಟನೆಯ ಪದಾಧಿಕಾರಿಗಳನ್ನ ಒಳಗೊಂಡು ಸಭೆ ಸಭೆ ಕರೆದಿದ್ದರು. ಸಭೆಯಲ್ಲಿ ಸಮಗ್ರವಾಗಿ ಚರ್ಚೆಯಾಯಿತು. ತದನಂತರದಲ್ಲಿ ಸಮಿತಿಯ ಅಧ್ಯಕ್ಷರು ಶಾಸಕರಾದ ಶ್ರೀ ಜಿ ಎಸ್ ಪಾಟೀಲ್ ಮಾತನಾಡಿ, ಬಕರಾಬ್ ಲ್ಯಾಂಡ್ ಗಳನ್ನು ಕೋಡಲಾಗದು. ಆತರಹ ಸರ್ಕಾರದ ಕಾನೂನಿನಲ್ಲಿ ಅವಕಾಶ ಇಲ್ಲ ಅಂತ ಹೇಳಿ ವಾದಿಸಿದರು. ತದನಂತರದಲ್ಲಿ ಹೋರಾಟಗಾರರು ಕೆಲವು ಮಾಹಿತಿ, ಲಿಖಿತ ದಾಖಲೆಗಳನ್ನು ತೋರಿಸಿ ಕೆಲವು ಸರ್ಕಾರದ ಚೌಕಟ್ಟಿನಲ್ಲಿ ಮಾಡಬಹುದು ಅಂತ ಉದಾಹರಣೆ ದಾಖಲೆಗಳನ್ನು ತೋರಿಸಿದ ಮೇಲೆ ಸಮಿತಿ ಅಧ್ಯಕ್ಷರು ಆಗಬಹುದು. ಸರ್ಕಾರದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮದ ಸಭೆಯಲ್ಲಿ ಇದನ್ನು ವಿಶೇಷ ಪ್ರಕರಣವಾಗಿ ಚರ್ಚಿಸಿ ಸರ್ಕಾರದ ಕೆಲಸಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಜಿ ಎಸ್ ಪಾಟೀಲ್, ಸದಸ್ಯರಾದ ಕೀರಣಕುಮಾರ್ ಕುಲಕರ್ಣಿ, ಶಾರದಾ ರಾಠೋಡ್, ಶಶಿ ಹೂಗಾರ್, ಹೋಸಮನಿ, ಹಾಗೂ ರೋಣ ತಹಶಿಲ್ದಾರರು, ರೈತ ಸಂಘಟನೆಯ ಮುಖಂಡರಾದ ಜಿ ನಾಗರಾಜ್,ಬಾಲು ರಾಠೋಡ್, ಎಂ ಎಸ್ ಹಡಪದ್, ರೂಪಲೇಶ್ ಮಾಳೋತ್ತರ್, ಪೀರು ರಾಠೋಡ್, ಚನ್ನಪ್ಪ ಗುಗಳೋತ್ತರ್, ವೀರೇಶ್ ರಾಠೋಡ್, ಕುಬೇರ್ ರಾಠೋಡ್, ಚಂದ್ರು ರಾಠೋಡ್ ಇದ್ದರು.
Post a Comment