Bengaluru : ಶೋಭಾ ಎಂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಮಹಿಳಾಧ್ಯಕ್ಷೆಯಾಗಲಿ : ಶೋಭಾ ಆಪ್ತರು, ಬೆಂಬಲಿಗರು, ಕುಟುಂಬದಸ್ಥರ ಆಗ್ರಹ
ಬೆಂಗಳೂರು : (Oct_13_2025)
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಮಹಿಳಾ ಅಧ್ಯಕ್ಷರನ್ನಾಗಿ ಶೋಭಾ ಎಂ ಅವರನ್ನ ಆಯ್ಕೆ ಮಾಡಿ ಎಂಬ ಆಗ್ರಹ ಕೇಳಿ ಬಂದಿದೆ. ಬೆಂಗಳೂರಿನ ಶಿವಾಜಿನಗರದ ಬಂಬೂಬಜಾರ್ ನಲ್ಲಿ ನಡೆದ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗಜೇಂದ್ರಗಡ ಮೂಲದವರಾದ ಶೋಭಾ ಎಂ ಭಾಗವಹಿಸಿದ್ದರು.
ಇವರು, ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಹುಟ್ಟು ಹೋರಾಟಗಾರರಾಗಿರುವ ಶೋಭಾ ಅವರು, ಹಲವು ಮಹಿಳೆಯರಿಗೆ, ದೇವದಾಸೊಯರಿಗೆ, ವಿಧವೆಯರಿಗೆ, ಮಾಶಾಸನ ಬರುವಂತೆ ಮಾಡಿದ್ದಾರೆ. ಜೊತೆಗೆ ಸಾಮಾಜಿ ಕಾರ್ಯಕ್ರಮದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಇದೆಲ್ಲ ದೃಷ್ಟಿಯಿಂದ ಶೋಭಾ ಅವರಿಗೆ ರಾಜ್ಯ ಮಹಿಳಾಧ್ಯಕ್ಷರನ್ನಾಗಿ ಮಾಡಬೇಕೆಂದು ಆಪ್ತರು, ಬೆಂಬಲಿಗರು, ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇವರ ಸೇವೆ ಗಜೇಂದ್ರಗಡಕ್ಕೆ ಮಾತ್ರ ಸೀಮಿತವಾಗದೇ, ರಾಜ್ಯದ ಉದ್ದಗಲಕ್ಕೂ ಮಹಿಳೆಯರಿಗೆ ಹಲವು ಅನುಕೂಲ ಮಾಡಿಕೊಟ್ಟಿದ್ದಾರೆ. ಇವರ ಸೇವೆ ಗುರುತಿಸಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ಅಧ್ಯಕ್ಷರಿಗೆ ಇರುವ ಎಲ್ಲ ಅರ್ಹತೆಯೂ ಇವರಲ್ಲುದೆ. ಸಮಾಜ ಸೇವೆ ಮಾಡಿದರೂ, ಎಲೆಮರೆಕಾಯಿಯಂತಿರುವ ಇವರನ್ನ ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು ಇವರು ಯಾವ ಕೆಲಸ ಇದ್ದರು, ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ಮತ್ತು ಎದೆಗಾರುಕೆಯಿಂದ ಮಾಡುವ ಮಹಿಳೆಯಾಗಿದ್ದಾರೆ. ಇವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತೆ ಎಂಬ ಮಾತಿಗೆ ಈಗ ರಾಜ್ಯ ಸಾಕ್ಷಿಯಾಗಲಿದೆ.
ಇವರ ಭವಿಷ್ಯ ಉತ್ತಮವಾಗಿರಲಿ ಎಂದು ಅಭಿಮಾನಿಗಳು, ಆಪ್ತರು, ಸ್ನೇಹಿತರು, ಕುಟುಂಬಸ್ಥರು ಶುಭ ಹಾರೈಸಿದ್ದಾರೆ...
Post a Comment