-->
Bookmark

Dharwad : ಚಲನಚಿತ್ರೋತ್ಸವ ಯಶಸ್ವಿಗೊಳಿಸಿ-ಡಾ.ಕಲ್ಮೇಶ ಹಾವೇರಿಪೇಠ

Dharwad : ಚಲನಚಿತ್ರೋತ್ಸವ ಯಶಸ್ವಿಗೊಳಿಸಿ-ಡಾ.ಕಲ್ಮೇಶ ಹಾವೇರಿಪೇಠ

ಧಾರವಾಡ : (Jul_28_2026)
  ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ)ಯಿಂದ ಅಗಷ್ಟ ೨೨ ಮತ್ತು ೨೩ ರಂದು   ನಡೆಯಲಿರುವ  ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-೨೦೨೬ರಲ್ಲಿ ನಮ್ಮ ಮಂಡಳಿಯ ನಿರ್ಮಾಪಕರು, ನಿರ್ದೇಶಕರು, ಚಲನಚಿತ್ರದ ಕಲಾವಿದರು, ತಂತ್ರಜ್ಞರು ಆಸಕ್ತಿಯಿಂದ ಭಾಗವಹಿಸುವ ಮೂಲಕ ಚಲನಚಿತ್ರೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಉ.ಕ.ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಕಲ್ಮೇಶ ಹಾವೇರಿಪೇಠ ಹೇಳಿದರು.
    ಅವರು ಉ.ಕ.ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಗಳ ರಚನೆ, ಜವಾಬ್ದಾರಿಗಳ ಹಂಚಿಕೆ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷ ಮಂಜುನಾಥ ಹಗೇದಾರ ಮಾತನಾಡಿ ಮಂಡಳಿ ಕ್ರಿಯಾಶೀಲವಾಗಿ ಇರಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಬರಿ ಪದಾಧಿಕಾರಿಗಳಿಂದ ಕಾರ್ಯ ಮಾಡಲಾಗದು. ನಾಲ್ಕನೂರಕ್ಕೂ ಹೆಚ್ಚು ನಿರ್ಮಾಪಕರು ನಮ್ಮ ಸಂಘದಲ್ಲಿದ್ದು ಅವರು ಚಿತ್ರ ನಿರ್ಮಾಣ ಮಾಡಲು ನಮ್ಮ ಮಂಡಳಿ ಎಲ್ಲ ರೀತಿಯ ಸಹಕಾರ ನೀಡಲಿದೆ. ಈಗಾಗಲೇ ಕೆಲವರು ಚಿತ್ರ ನಿರ್ಮಾಣದಲ್ಲೂ ತೊಡಗಿದ್ದಾರೆ. ನಮ್ಮ ಸಂಘದ ನೊಂದಾಯಿತ ಸದಸ್ಯರಿಗೆ ಚಿತ್ರಗಳಲ್ಲಿ  ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂದರು. ಚಲನಚಿತ್ರ ಸಹನಿರ್ದೇಶಕ ದೀಪಕ, ಇಂಡಿಯ ನಿರ್ದೇಶಕ ಶಾಂತಕುಮಾರ ಪಾಟೀಲ,  ಕಲಾವಿದ ಜ್ಯೂ.ರಾಜಕುಮಾರ ಪ್ರಕಾಶ ರಾಜಕುಮಾರ ಬಡ್ನಿ, ದ್ಯಾಪೂರ ಸರ್, ರಾಜೀವಸಿಂಗ್ ಹಲವಾಯಿ, ಪ್ರೇಮಾ ನಡುವಿನಮನಿ, ವಿಕ್ರಮ್ ಕುಮಠಾ, ಜ್ಯೂ ಉಪೇಂದ್ರ ಬಾಬು ಮತ್ತು ವಿಜಯಪೂರ, ಬಾಗಲಕೋಟ, ಬೆಳಗಾವಿ, ಇಂಡಿ ಮೊದಲಾದ ಕಡೆಯಿಂದ ಆಗಮಿಸಿದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ತಮ್ಮ ಸಲಹೆ ನೀಡಿ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಂಡಳಿಯಿಂದ ಏನೆಲ್ಲ ಸೌಲಭ್ಯ ಒದಗಿಸಲಾಗುತ್ತದೆ ಎಂಬುದನ್ನು ಕುರಿತು ಪ್ರಧಾನಕಾರ್ಯದರ್ಶಿ ರಾಹುಲ್ ದತ್ತಪ್ರಸಾದ ಹೇಳಿದರು. 
      ಇದೇ ಸಂದರ್ಭದಲ್ಲಿ ಅವರ ಹುಟ್ಟುಹಬ್ಬವನ್ನು ಮಂಡಳಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಶುಭ ಕೋರಲಾಯಿತು. ಸಲಹಾ ಮಂಡಳಿ ಸದಸ್ಯರಾದ ಅನಿಶ್ ಭರೂದವಾಲೆ, ಮಮ್ಮಿಗಟ್ಟಿ , ಡಾ.ಪ್ರಭು ಗಂಜಿಹಾಳ , ಚಿತ್ರೋತ್ಸವ ಕುರಿತು  ಮಾತನಾಡಿದರು. ವೇದಿಕೆಯಲ್ಲಿ ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಉಪಾಧ್ಯಕ್ಷ ಪ್ರಭು ಹಂಚಿನಾಳ ಪ್ರಾಸ್ತವಿಕ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಚಲನಚಿತ್ರ ನಿರ್ದೇಶಕ ಅರವಿಂದ ಮುಳಗುಂದ ವಂದಿಸಿದರು.
**
-ಡಾ.ಪ್ರಭು ಗಂಜಿಹಾಳ
 ಮೊ:೯೪೪೮೭೭೫೩೪೬
Post a Comment

Post a Comment