ಮೈಸೂರು : (Jul_18_2026)
ಜೆ.ಕೆ.ಪ್ರೊಡಕ್ಷನ್ ಮೈಸೂರ ಅವರ ‘ನಾನು’ ಎಂಬ ನೂತನ ವೆಬ್ ಸರಣಿಯ ಚಿತ್ರೀಕರಣ ಮುಹೂರ್ತ ಸಮಾರಂಭ ಮೈಸೂರಿನ ಬಂಬು ಬಜಾರ ರೋಡಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ಛಾಯಾಗ್ರಾಹಕ ಸದಾಶಿವ ಹಿರೇಮಠ ಆಗಮಿಸಿ ಯಶಸ್ವಿ ವೆಬ್ ಸರಣಿಯನ್ನು ತಂಡ ನೀಡಿ ಮನೆಮಾತಾಗಲಿ ಎಂದು ಚಿತ್ರ ತಂಡಕ್ಕೆ ಶುಭ ಕೋರಿದರು. ನಿರ್ದೇಶಕ ಕಲಿ ಮಾತನಾಡಿ ಈ ಹಿಂದೆಯೇ ಪ್ರೀತಿ-ಪ್ರೇಮ ಪುಸ್ತಕದ ಬದನೇಕಾಯಿ ಎಂದು. ಉಪೇಂದ್ರ ಹೇಳಿದ್ದರು. ಇವತ್ತಿನ ಘಟನೆಗಳೆಲ್ಲ ಅದು ಸತ್ಯ ಅನ್ನೋ ರೀತಿ ನಡಿತಾ ಇವೆ. ಪ್ರಸ್ತುತ ಸನ್ನಿವೇಶಗಳನ್ನಿಟ್ಟುಕೊಂಡು ಯುವ ಪೀಳಿಗೆಯ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ಅದರಿಂದ ಏನಾಗುತ್ತಿದೆ, ಯುವ ಜನತೆ ಎತ್ತ ಸಾಗುತ್ತಿದೆ ಎಂಬುದನ್ನು ಈ ಸರಣಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಮ್ಮ ತಂಡ ಮಾಡುತ್ತೇವೆ. ಇದೆ ತಿಂಗಳು ಜು.೧೯ರಿಂದ ಮೈಸೂರು ಸುತ್ತಮುತ್ತ ಚಿತ್ರೀಕರಣ ಆರಂಭಿಸಲಾಗುತ್ತಿದೆ ಎಂದರು.
ಪಾತ್ರವರ್ಗದಲ್ಲಿ ಕಲಿ, ದಿಶಾ, ಪ್ರಿಯಾಂಕಾ, ಮಹೇಶ್, ರೋಹಿತ್, ಸಿದ್ದು, ರವಿ ಮೊದಲಾದ ಕಲಾವಿದರು ಅಭಿನಯಿಸುತ್ತಿದ್ದು ಛಾಯಾಗ್ರಹಣ ನಿರೀಕ್ಷಿತ್ ಟೀಮ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಕಥೆ-ಚಿತ್ರಕಥೆ -ಸಂಭಾಷಣೆ ನಿರ್ದೇಶನ ಜವಾಬ್ದಾರಿ ಕಲಿ ಹೊತ್ತಿದ್ದು ನಿರ್ಮಾಪಕರು ಜಯಮ್ಮ ಕಾಂತರಾಜ್ ಆಗಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬



Post a Comment