ಗಜೇಂದ್ರಗಡ : (Jul_18_2026)
ಬಡವರ ಬಂಧು, ಯುವಕರ ಕಣ್ಮಣಿ, ಕನ್ನಡಾಂಬೆಯ ಕುವರ...! ಹುಟ್ಟು ಹೋರಾಟಗಾರ ಗದಗ ಜಿಲ್ಲೆಯ ಗಜೇಂದ್ರಗಡದ ಕೀರ್ತಿಯನ್ನ ಹೋರಾಟದೊಂದಿಗೆ ರಾಜ್ಯಮಟ್ಟದಲ್ಲೂ ಹಾರಿಸಿದ ನಾಯಕ ಹೆಚ್. ಎಸ್. ಸೋಂಪೂರ್...
ಇದೇ ಜುಲೈ 20 2026 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಯುವಕರು, ಹೋರಾಟಗಾರು, ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಬರುವವರಿಗೆ ಆದರ್ಶ ವ್ಯಕ್ತಿಯೂ ಹೌದು.
ಇಂದಿನ ಯುಗದಲ್ಲಿ ಆದರ್ಶಗಳನ್ನಿಟ್ಟುಕೊಂಡು ಬದುಕು ಕಟ್ಟಿಕೊಂಡವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತವರ ಸಾಲಿನಲ್ಲಿ ನೋಡುವ ಮೇರು ವ್ಯಕ್ತಿತ್ವದ ವ್ಯಕ್ತಿಯೂ ಹೌದು.
ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಹಿತ್ಯ, ಹೋರಾಟ, ರೈತ ಹೀಗೆ ಎಲ್ಲವನ್ನ ಚಿಕ್ಕವರಿದ್ದಾಗಿನಿಂದ ಕಂಡವರು. ಹಣದ ಹಿಂದೆ ಹೊದ ವ್ಯಕ್ತಿಯಲ್ಲ. ಬದಲಾಗಿ ಜನರನ್ನ ಗಳಿಸಿದ ವ್ಯಕ್ತಿ. ಜಿಲ್ಲೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ವಕೀಲರು ಮತ್ತು ಕುರುಬ ಸಮಾಜದಲ್ಲಿ ಗುರುತಿಸಿಕೊಂಡ ರಾಜ್ಯ ಕಂಡ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಮತ್ತು ಕುರುಬ ಸಮಾಜದ ಮಹಾನ್ ನಾಯಕ ಸಿದ್ದರಾಮಯ್ಯನವರನ್ನ ಆದರ್ಶವಾಗಿಟ್ಟುಕೊಂಡು ನಡೆಯುವ ನಾಯಕ ಕೂಡ ಹೌದು... ಎಂ.ಎಲ್.ಎ ಆಗಬೇಕಿದ್ದ ಅವರು ಕೆಲ ಷಡ್ಯಂತ್ರಗಳು ಕಾಣದ ಕೈಗಳಂತೆ ಕೆಲಸ ಮಾಡಿದ್ದು ಇದೆ. ಈಗ ಮತ್ತೆ ಪಕ್ಷ ಮತ್ತು ಜನ ಬೆಂಬಲದೊಂದಿಗೆ ವಿಧಾನಸೌಧಕ್ಕೆ( MLA )ಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ವಕೀಲರು ಆಗಿರುವ ಸೋಂಪೂರ್ ಅವರು.
ಕುರುಬ ಸಮಾಜದಲ್ಲಿ ಹುಟ್ಟಿ ಬೆಳೆದ ಅಪ್ಪಟ ಸಹೃದಯಿ ಹೋರಾಟಗಾರ, ಇವರು ಹೋರಾಟಕ್ಕೆ ಬಂದ್ರೆ ಯುವ ಸಮೂಹವೆ ಜೊತೆಗಿರತ್ತೆ. 2023ರ ಚುನಾವಣೆಯಲ್ಲಿ ಯುವಕರನ್ನ ಒಂದೆಡೆ ಸೇರಿಸಿ, ಕಾಂಗ್ರೆಸ್ ಗೆಲುವನ್ನ ಸಾಧಿಸುವಲ್ಲಿ ಯಶಸ್ಸು ಕಂಡ ನಾಯಕರು ಹೌದು. ಮತ್ತೆ ಜಿ.ಎಸ್. ಪಾಟೀಲ್ ಅವರು ಸಚಿವರಾಗಬೇಕೆಂದು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಕ್ಷೇತ್ರದ ಜನರ ಗುಂಪು ಕಟ್ಟಿಕೊಂಡು ರಾಜ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನ ಬೇಟಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುವು ಮಾಡಿಕೊಡಿ ಎಂದು ಕಾಂಗ್ರೆಸ್ ನಾಯಕರ ಮನೆಗೆ ಅಲೆದಾಡಿದ್ದು ಇದೆ.
ಕೇವಲ ಕುರುಬ ಸಮಾಜ ಅಷ್ಟೆ ಅಲ್ಲ. ರೋಣ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲೂ ಮನೆ ಮನೆಗೆ ಚಿರಪರಿಚಿತ. ಎಲ್ಲ ಸಮಾಜದ ಬಾಂಧವರೊಂದಿಗೂ ಗುರುತಿಸಿಕೊಂಡು ವಕೀಲರಾಗಿ ಮೊದಲಿಗಿಂತಲೂ ಈಗ ಹೆಚ್ಚು ಬಡವರ ಸೇವೆ ಮಾಡುವೆ ಎನ್ನುವ ಹಂಬಲ ವಿದೆ. ಸಣ್ಣವರಿಗೆ ಪ್ರೀತಿ ವಾತ್ಸಲ್ಯ, ಹಿರಿಯರಿಗೆ ಗೌರವದಿಂದ ಕಾಣುವ ಇವರದ್ದು ಮೇರು ವ್ಯಕ್ತಿತ್ವ.
ಕಿರಾ ನ್ಯೂಸ್ ಕನ್ನಡ ಸಂಪಾದಕರಾದ ಕೃಷ್ಣ ರಾಠೋಡ್ ಅವರೊಂದಿಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
GFX in
GFX out
ಹೀಗೆ ಕ್ಷೇತ್ರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ... ಅವರಿಗೆ ಕಿರಾ ನ್ಯೂಸ್ ಕನ್ನಡದ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು...!! ಅವರು ಇನ್ನಷ್ಟು ಮಗದಷ್ಟು ಎತ್ತರಕ್ಕೆ ಬೆಳೆಯಲಿ...! ಜನ ನಾಯಕರಾಗಿ ಮುಂದಿನದಿನಗಳಲ್ಲಿ ಎಂ.ಎಲ್.ಎ ಆಗಿ ಕ್ಷೇತ್ರದ ಜನರ ಸೇವೆ ಮಾಡಲಿ ಎಂದು ಹಾರೈಸೋಣ...!!



Post a Comment