ಗುಳೇದಗುಡ್ಡ ( ಬಾಗಲಕೋಟೆ ) : (Jun_21_2026)
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಾನಾಪುರದ ಎಲ್ ಟಿ ( ಲಂಬಾಣಿ ತಾಂಡಾ )ದಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ತಾಂಡಾವನ್ನ ಸರಸ್ವತಿ ನಗರ ಅಂತಲೂ ಕರೆಯುವ ವಾಡಿಕೆ ಇದೆ. ಇಲ್ಲಿ ಸುಮಾರು ಎರಡು ನೂರು ಮನೆಗಳಿದ್ದು, ಪ್ರತಿಮನೆಯಲ್ಲೂ ಸರ್ಕಾರಿ ನೌಕಕರಿದ್ದಾರೆ. ಹೀಗೆ ಹಲವಾರು ಸಾಧಕರಿರುವ ಊರಿನಲ್ಲಿ ಮತ್ತಿಬ್ಬರು ವೈದ್ಯರಾಗಿದ್ದಾರೆ. ತುಕಾರಾಮ್ ಜಾಧವ್ ಮತ್ತು ತಾಯಿ ಸುಮಿತ್ರ ಜಾಧವ್ ಅವರಿಗೆ ಎರಡನೇ ಮಗುವಾಗಿ ಹುಟ್ಟಿದ ಮಹೇಶ್ ತುಕಾರಾಮ್ ಜಾಧವ್ ಎಂ.ಬಿ.ಬಿ.ಎಸ್ ಪೂರ್ಣ ಗೊಳಿಸಿ, ತಂದೆ ತಾಯಿಗೆ ಕೀರ್ತಿ ತಂದಿದ್ದಾರೆ. ಮೊದಲ ಮಗ ಸಹ ಬಿ.ಎ.ಎಂ.ಎಸ್ ಮುಗಿಸಿ ವೈದ್ಯ ವೃತ್ತಿಯನ್ನೆ ಆಯ್ಕೆ ಮಾಡಿಕೊಂಡಿದ್ದು, ಈಗ ಎರಡನೇ ಮಗ ಸಹ ಸಾಧನೆ ಮಾಡಿದ್ದು, ಕುಟುಂಬದಲ್ಲಿ ಸಂತಸ ಮೂಡಿದೆ. ಮಹೇಶ್ ಅವರ ರಿಸಲ್ಟ್ ಪ್ರಕಟವಾಗುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದರು. ತಂದೆ ತುಕಾರಾಮ್ ಅವರು ಸರ್ಕಾರಿ ಶಾಲೆ ಶಿಕ್ಷಕರಾಗಿದ್ದು, ಮಕ್ಕಳಿಗೆ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ ಬಾಲ್ಯದಲ್ಲೆ ವೈದ್ಯರಾಗಬೇಕೆಂಬ ಕನಸಿಗೆ ಹಗಲು ರಾತ್ರಿ ಶ್ರಮ ವಹಿಸಿದ್ದಾರೆ. ಹೀಗಾಗಿ, ಕಂಡ ಕನಸು ನನಲಾಗಿದೆ ಎಂದು ಮಹೇಶ್ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಸವದತ್ತಿ ತಾಲೂಕಿನ ಈನಾಮಹೊಂಗಲ್ ನಲ್ಲಿ ಒಂದರಿಂದ ಏಳನೆ ತರಗತಿಯನ್ನು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿಯಲ್ಲಿ 8 ಮತ್ತು 9 ನೇ ತರಗತಿ ಮತ್ತು 10ನೇ ತರಗತಿಯನ್ನ ಬಾದಾಮಿಯ ಜಮ್ಮನಕಟ್ಟಿಯಲ್ಲಿ ಪೂರೈಸಿದರು. ಪಿಯುಸಿಯನ್ನ ಧಾರವಾಡದ
Prism ಕಾಲೇನಿನಲ್ಲಿ ಪೂರ್ಣಗೊಳಿಸಿದರು.
ಮಹೇಶ್ ಸಾಧನೆಗೆ
ಹಿತೈಷಿಗಳು, ಆಪ್ತರು ಸೇರಿದಂತೆ ಎಲ್ಲೆಡೆಯಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಹೀಗೆ ಮಹೇಶ್ ಅವರ ಸಾಧನೆ ಹೆಚ್ಚುತ್ತ ಇರಲಿ. ಸಮಾಜದ ಕೀರ್ತಿ ಬೆಳಗುತ್ತಿರಲಿ ಎಂದಿದ್ದಾರೆ.



Post a Comment