ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಆಶ್ಲೇಷಾ ಶಿರಾಳಕರ್ ಎಂಬ 16 ವರ್ಷದ ಯುವತಿ ಕಲೆ, ಚಿತ್ರಕಲೆ, ಮೆಹಂದಿ, ಸೇರಿದಂತೆ ಅನೇಕ ಕೆಲಸ ಕಾರ್ಯಗಳನ್ನ ಮಾಡುತ್ತಾರೆ. ಈ ಚೆಲುವೆ ತಮ್ಮ ಕಲೆಯಿಂದ ಎಂತವರನ್ನು ಸಹ ಮಂತ್ರಮುಗ್ದ ರನ್ನಾಗಿಸುತ್ತದೆ.
ಫೋಟೋ ಕೊಟ್ಟರೆ ಚಿತ್ರ ಬಿಡಿಸುವುದು, ಶೆಡಿಂಗ್ ಚಿತ್ರಗಳನ್ನ ಬಿಡಿಸುವುದು ಇವರಿಗೆ ಹವ್ಯಾಸ... ಈ ಪುಟ್ಟ ಬಾಲಕಿ ಮನೆಯಲ್ಲೆ ಸ್ವ ಇಚ್ಛೆಯಿಂದ ಕಲಿತಿದ್ದು, ನಾಗೇಂದ್ರ ಶಿರಾಳಕರ್, ಜಯಲಕ್ಷ್ಮೀ ಶಿರಾಳಕರ್ ಎರಡನೆ ಮಗಳಾಗಿ ಜನಿಸಿದ್ದಾರೆ. ಆಶ್ಲೇಷಾ ಹುಟ್ಟಿದ ಬಳಿಕ ನಮಗೆ ಒಳಿತಾಗಿದೆ ಎಂದು ಹೆಣ್ಣು ಮಗುವಿನ ಬಗ್ಗೆ ತಂದೆ, ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ತಂದೆ ನಾಗೇಂದ್ರ ಅವರು ಸಾಕ್ಷಾತ್ ತಮ್ಮ ತಾಯಿಯನ್ನೆ ಕಾಣುತ್ತೇನೆ ಎಂದು ಆಶ್ಲೇಷಾ ಚಿಕ್ಕವಳಿದ್ದಾಗ ಹೇಳಿದ್ದನ್ನ ನೆರೆಹೊರೆಯವರು ನೆನೆಸಿದ್ದು ಇದೆ. ತಂದೆಗೆ ಅಷ್ಟೆ ಅಲ್ಲ ಮನೆಯಲ್ಲಿ ಎಲ್ಲರೂ ಇಷ್ಟ ಪಡುವ ಮುದ್ದಿನ ಮಗಳಾಗಿದ್ದಾಳೆ.
ಚಿಕ್ಕೋಡಿಯ ನಿವಾಸಿಗಳಿಗೆ ಸಿಹಿ ಸುದ್ದಿ ಇದೆ. ಅದೆನಂದ್ರೆ, ಆಶ್ಲೇಷಾ ಕಡಿಮೆ ವೆಚ್ಚದಲ್ಲಿ ಮೆಹಂದಿ ಹಾಕುವತ್ತಾರೆ. ಜೊತೆಗೆ ನಿಮ್ಮ ಫೋಟೋ ಕೊಟ್ಟರೇ ಅದಕ್ಕೆ ತಕ್ಕಂತೆ pencil sketch ಮಾಡುತ್ತಾರೆ. ಪೇಂಟಿಂಗ್ ಕೂಡ ಮಾಡುವ ಈ ಬಾಲೆ wedding, pre wedding, baby shower, ಸೀರಿ ಕಾರಣ, ಹುಟ್ಟುಹಬ್ಬ ಸೇರಿದಂತೆ ಕೆಲ ಹಬ್ಬಗಳಲ್ಲೂ ಮೆಹಂದಿ ಹಾಕುತ್ತಾರೆ. ಇವೆಲ್ಲವೂ ನಿಮ್ಮ ಕೈಗೆಟಕುವ ದರದಲ್ಲಿ ಮಾಡುವುದು ಆಶ್ಲೇಷಾ ಅವರ ವಿಶೇಷ. ಬಡನತದಲ್ಲಿ ಬೆಳೆದ ಪ್ರತಿಭೆಯಾಗಿದ್ದು, ಕಲೆಗೆ ಮನೆಯಲ್ಲಿ ಎಲ್ಲರೂ ಸಹಲರಿಸುತ್ತಾರೆ ಅಂತಾ ಅಂತಾ ಕುಮಾರಿ ಆಶ್ಲೇಷಾ. ಅವರ ಬದುಕು ಹಸನಾಗಲಿ, ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ ಅವರ ಹಿತೈಷಿಗಳು ಮತ್ತು ಕುಟುಂಬದವರು...!!



Post a Comment