ಬಾಗಲಕೋಟೆ : ( Jun_25_2026)
ಗುಲಾಬ್ ಜಾಮೂನು ಹುಟ್ಟುಹಬ್ಬ ಆಚರಿಸಿಕೊಂಡಿತು. ಬಾಗಲಕೋಟೆ ನಗರದ ಹೆರಂಜಲ್ ಮಕ್ಕಳ ಮತ್ತು ಪ್ರಸೂತಿ ತೊಟ್ಟಿಲು ಎಂಬಲ್ಲಿ ಗುಲಾಬ್ ಜಾಮೂನಿನ ಎಲ್ಲ ಸ್ನೇಹಿತರು ಒಂದೆಡೆ ಸೇರಿ ಕೆಟ್ ಕತ್ತರಿಸಿ, ಗುಲಾಬ್ ಜಾಮೂನಿಗೆ ಹುಟ್ಟುಹಬ್ಬದ ಶುಭ ಕೋರಿದರು.
ಗುಲಾಬ್ ಜಾಮೂನಿನ ಸ್ನೇಹಿತರಾದ ಮೈಸೂರ್ ಪಾಕ್, ಕರದಂಟು, ರಸಗುಲ್ಲಾ, ಬೇಸನ್ ಲಾಡು, ಕಾಜು ಬರ್ಫಿ ಸೇರಿದಂತೆ ಎಲ್ಲ ಸಿಹಿ ಸ್ನೇಹಿತೆಯರು ಗುಲಾಬ್ ಜಾಮೂನಿನ ಹುಟ್ಟುಹಬ್ಬಕ್ಕೆ ಶುಭ ಕೋರಿದರು...
ನೂರಾರು ವರ್ಷ ಜಾಮೂನಾಗಿಯೇ ಇರು. ಜಾಮೂನು ಎಲ್ಲರಿಗೂ ಬೇಕು. ಹೆಚ್ಚಾದರೆ ಸಕ್ಕರೆ ಖಾಯಿಲೆ ಖಚಿತ ಎಂದು ಕಂಜುಸ್ ಸಂಘದ ರಾಜ್ಯಾಧ್ಯಕ್ಷರಾದ ಮೈಸೂರ್ ಪಾಕ್ ಹೇಳಿತು. ಈ ಮಾತುಗಳನ್ನ ಕೇಳಿದ ಗುಲಾಬ್ ಜಾಮೂನಿನ ಸಂತಸಕ್ಕೆ ಪಾರವೇ ಇರಲಿಲ್ಲ...
ಇದೇ ವೇಳೆ, ಮಾತನಾಡಿದ ಗುಲಾಬ್ ಜಾಮೂನಿನ ಆಪ್ತ ಸ್ನೇಹಿತೆಯಾದ ರಸಗುಲ್ಲಾ, ನನಗೆ ಸ್ನೇಹ, ಪ್ರೀತಿ, ಕಾಳಜಿ ತೋರುವ ಗುಲಾಬ್ ಜಾಮೂನು ನಂಗೆ ಇಷ್ಟ. ಅದನ್ನೆ ನಾನು ತಿನ್ನಲು ಬಯಸುತ್ತೇನೆ ಎಂದು ರಸಗುಲ್ಲಾ ಹೇಳಿತು.
ಕೇಕ್ ಗೆ ಮರಣ ದಂಡನೆ ವಿಧಿಸಲು ಅನುವು ಮಾಡಿಕೊಟ್ಟ ಮೈಸೂರ್ ಪಾಕ್, ಕರದಂಟು, ರಸಗುಲ್ಲಾ, ಬೇಸನ್ ಲಾಡು, ಕಾಜು ಬರ್ಫಿಗೆ ಗುಲಾಬ್ ಜಾಮೂನು ಧನ್ಯವಾದ ತಿಳಿಸಿತು.
ವರದಿ :
ಶೆಂಗಾ ಹೊಳಿಗೆ, & ಹೂರಣ ಹೊಳಿಗೆ
ಸಂಪರ್ಕ : ಸಾವಯವ ಬೆಲ್ಲ
ಊರು : ಸಕ್ಕರೆ ಪಾಕ



Post a Comment