-->
Bookmark

Bagalakote : ಬಾಗಲಕೋಟೆಯ ಸರ್ಕಾರಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ಧರ್ಮ‌ಪ್ರಚಾರ..?

Bagalakote : ಬಾಗಲಕೋಟೆಯ ಸರ್ಕಾರಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ಧರ್ಮ‌ಪ್ರಚಾರ..? 
ಬಾಗಲಕೋಟೆ : (Sept_09_2026)
ಸರ್ಕಾರಿ ಅರೆ ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆ ಬಾಗಲಕೋಟೆಯಲ್ಲಿ ಧರ್ಮ ಪ್ರಚಾರ ಹೆಚ್ಚಾದಂತೆ ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇತ್ತೀಚೆಗೆ ಅರೆ ವೈದ್ಯಕೀಯ ಕಾಲೇಜಿಗೆ ಹೊಸ ಕೋ_ಆರ್ಡಿನೇಟರ್ ‌ಬಂದ ಮೇಲೆ ಇಂತಹ ಆರೋಪಗಳು ಹೆಚ್ಚಾಗಿವೆ. ವಿದ್ಯಾರ್ಥಿ/ವಿದ್ಯಾರ್ಥಿನಿರಿಗೆ ಬೆಳಗ್ಗೆ ತರಗತಿಗಳು ಆರಂಭಕ್ಕೂ ಮುನ್ನ  ಭಕ್ತಿಗೀತೆಗಳನ್ನ ಹೇಳಲೇಬೇಕು ಎಂಬ ಕಾನೂನು ಮಾಡಿದ್ದಾರೆ ಎನ್ನಲಾಗಿದೆ. ಹಾಗೇಯೇ WhatsApp ಗ್ರೂಪ್ ಮಾಡಿ ಅದರಲ್ಲಿ ಕೆಲ ಭಕ್ತಿ ಗೀತೆಗಳನ್ನ ಹಾಕಿ ಕಂಠ ಪಾಠ ಮಾಡಬೇಕು ಎಂಬ ಸಂದೇಶಗಳು ರವಾನೆಯಾಗುತ್ತಿವೆ. ಎಲ್ಲ ಜಾತಿ ಜನಾಂಗದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಲಿಕೆಗಾಗಿ ಬರುತ್ತಾರೆ. ಅವರಿಗೆಲ್ಲ ನೀವೂ ಈ ರೀತಿಯ ದೇವರ ಗೀತೆಗಳನ್ನ (ಒಂದೇ ಸಮುದಾಯಕ್ಕೆ ಸೀಮಿತವಾದ ಹಾಡುಗಳು )  ಹೇಳಿಕೊಡುವುದರಿಂದ ಕೇವಲ ಒಂದು ಸಮೂಹಕ್ಕೆ ಸೀಮಿತವಾದ ಹಾಡುಗಳನ್ನ ಹಾಡಿಸುವುದು ಎಷ್ಟು ಸರಿ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. 
ಇನ್ನೂ, ಅನ್ಯ ಧರ್ಮದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಧಕ್ಕೆಯಾಗುವಂತಹ ನಡವಳಿಕೆ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಕಲಿಕಾ ಕೇಂದ್ರವನ್ನ ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬ ಚರ್ಚೆಯೂ ಜೋರಾಗಿದೆ. ರಾಜಕೀಯಕ್ಕೆ ಬಹಳ ವೇದಿಕೆಗಳು ಇರುವಾಗ ಅರೆ ವೈದ್ಯಕೀಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಜಾತಿ ನೋಡಿ ಟ್ರಿಟ್ಮೆಂಟ್ ಕೊಡಿ ಎನ್ನುವ ದಿನಗಳು ದೂರ ವಿಲ್ಲ. ಇಂತಹ ಜಾತಿ ಧೋರಣೆಯನ್ನ ಕೈ ಬಿಡಬೇಕು. ಇಲ್ಲದಿದ್ದರೆ ಇಂತಹ ಮನಸ್ಥಿತಿಯನ್ನ ವಿರೋಧಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಹೋರಾಟಗಾರರು, ಚಿಂತಕರು, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Post a Comment

Post a Comment