-->
Bookmark

Bagalakote : ಸಮಾಜದಲ್ಲಿ ಮಹಿಳೆಯರು, ಯುವ ಸಮೂಹಕ್ಕೆ ಉದ್ಯೋಗ ಸಿಗಬೇಕು : ಶ್ರೀಮತಿ ಸವಿತಾ ಜಾಧವ್

Bagalakote : ಸಮಾಜದಲ್ಲಿ ಮಹಿಳೆಯರು, ಯುವ ಸಮೂಹಕ್ಕೆ ಉದ್ಯೋಗ ಸಿಗಬೇಕು : ಶ್ರೀಮತಿ ಸವಿತಾ ಜಾಧವ್ 

ಬಾಗಲಕೋಟೆ : (Sept_27_2026)

ಶ್ರೀಮತಿ ಸವಿತಾ ಸಂದೀಪ್ ಜಾಧವ್ ಮರಾಠಾ ಸಮಾಜದ ಬಡ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಕನಸು ಕಂಡಿದ್ದಾರೆ. 
ಬಾಗಲಕೋಟೆಯ ನವನಗರದಲ್ಲಿ ನೆಲೆಸಿರುವ ಜಾಧವ್ ದಂಪತಿಗಳು ಎಲ್ಲ‌ ಸಮಾಜದವರೊಂದಿಗೆ ಗುರುತಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಇರುವ ಮರಾಠಾ ಸಮಾಜದ ಬಡ ಮಹಿಳೆಯರು, ಯುವಕರು,  ನಿರುದ್ಯೋಗಿಗಳ ಪರ ಧ್ವನಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. 


ಬಡ ಕುಟುಂಬದವರಾದ್ರೂ ಸಂದೀಪ್ ಜಾಧವ್ ಮತ್ತು ಶ್ರೀಮತಿ ಸವಿತಾ ಜಾಧವ್ ತಮ್ಮ ಓಣಿಯಲ್ಲಿ ಹಲವು ಜಯಂತಿಯಂದು ಅನ್ನ ಸಂರ್ಪಣೆ ಮಾಡುವ ಕಾಯಕ ಕೂಡ ಮಾಡುತ್ತಾರೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಮತಿ ಸವಿತಾ ಜಾಧವ್ ಸಮಾಜದ ಮಹಿಳೆಯರು ಸ್ವಾವಲಂಬಿ ಜೀವನ‌ ನಡೆಸಬೇಕು. ಅದರೊಂದಿಗೆ ಬದುಕನ್ನ ಕಟ್ಟಿಕೊಳ್ಳಬೇಕು. ಸಮಾಜದ ಕೊನೆಯ ವ್ಯಕ್ತಿಗೂ ಸೌಲಭ್ಯಸಿಗುವಂತಾಗಬೇಕು ಎನ್ನುತ್ತಾರೆ. 

ಮರಾಠಾ ಸಮಾಜದಲ್ಲಿ ಶ್ರಮ ಪಟ್ಟು ಕೆಲಸ ಮಾಡುವವರು ಅನೇಕರಿದ್ದಾರೆ. ಅವರಿಗೆ ಸರಿಯಾದ ವೇದಿಕೆ ಸಿಗಬೇಕು ಅಂದಾಗ ಮಾತ್ರ ಸಮಾಜ ಬೆಳೆಯಲು ಸಾಧ್ಯ ಎಂದರು.‌ ಜೊತೆಗೆ ಸವಿತಾ ಅವರ ಪತಿ ಸಂದೀಪ್ ಜಾಧವ್ ಸಹ, ಸಮಾಜದಲ್ಲಿನ ಹಲವಾರು ತೊಡಕುಗಳಿದಾವೆ. ಅವೆಲ್ಲವನ್ನ ದಾಟಿ ನಡೆಯಬೇಕು. ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು. ಕೇವಲ ಮರಾಠಾ ಸಮುದಾಯಕ್ಕೆ ಸಮಾಜ ಸೇವೆ ಸೀಮಿತ ಇಲ್ಲ. ‌ಬದಲಾಗಿ ಎಲ್ಲ ಸಮೂದಾಯವನ್ನು ಜೊತೆಗೆ ಕೊಂಡೆಯ್ಯುತ್ತೇವೆ ಎಂದಿದ್ದಾರೆ. 

ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್, ಕಂಪ್ಯೂಟರ್ ತರಬೇತಿ ಕೊಡಿಸುವ ಕನಸನ್ನು ಕಂಡಿದ್ದಾರೆ. ಶ್ರೀಮತಿ ಸವಿತಾ ಜಾಧವ್ ಅವರ ಕನಸುಗಳು ಈಡೇರಲಿ, ಇನ್ನಷ್ಟು, ಮಗದಷ್ಟು ಸಮಾಜ ಸೇವೆ ಮಾಡಲಿ ಎಂದು ಆಶಿಸೋಣ...!!
Post a Comment

Post a Comment