Gajendragad : ಗಜೇಂದ್ರಗಡ & ಸುಮತ್ತಮುತ್ತಲಿನ ಗ್ರಾಮಗಳ್ಲಿ ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವೆರೆಗೆ ವಿದ್ಯುತ್ ವ್ಯತ್ಯಯ
ಗಜೇಂದ್ರಗಡ : (Sept_26_2026)
ನಾಳೆ ಸೆಪ್ಟೆಂಬರ್ 27 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವೆರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಗಜೇಂದ್ರಗಡ ಮತ್ತು ರೋಣ ತಾಲೂಕಿನ AEE ವಿರೇಶ್ ರಾಜೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
110/33/11 ಕೆವಿ ಗಜೇಂದ್ರಗಡ, ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ತುರ್ತು ಕಾರ್ಯವನ್ನು ನಿರ್ವಹಿಸುವ ಸಲುವಾಗಿ ದಿನಾಂಕ 27/09/2026 ರಂದು ಬೆಳಿಗ್ಗೆ 10.00 ಘಂಟೆಯಿಂದ ಮದ್ಯಾಹ್ನ 02:00 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಮೇಲ್ಕಂಡ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಗಜೇಂದ್ರಗಡ & ಉಣಚಗೇರಿ ಪಟ್ಟಣ, ಕುಂಟೋಜಿ, ವೀರಾಪೂರ, ಮ್ಯಾಕಲಝರಿ, ಬೆಣಸಮಟ್ಟಿ, ರಾಂಪೂರ, ರಾಜೂರು, ಜಿಗೇರಿ, ಭೈರಾಪೂರ, ವದೇಗೋಳ, ದಿಂಡೂರು, ಪುರ್ತಗೇರಿ, ಗೌಡಗೇರಿ, ಗೋಗೇರಿ. ಕಾಲಕಾಲೇಶ್ವರ, ನಾಗರಸಿಕೊಪ್ಪ, ಮಾಟರಂಗಿ, ಚಿಲಝರಿ, ಕೊಡಗನೂರು, ಹಿರೇಕೊಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕಾರಣ ಸಾರ್ವಜನಿಕರು ಸದರಿ ಪ್ರಕಟಣೆ ಗಮನಿಸಿ ಕಂಪನಿಯೊಂದಿಗೆ ಸಹಕರಿಸಬೇಕಾಗಿ ವಿನಂತಿ ಮಾಡಲಾಗಿದೆ.
ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ್ (ವಿ) ಕಾರ್ಯ ಮತ್ತು ಪಾಲನೆ ವಿಭಾಗ, ಹುವಿಸಕಂನಿ, ಗಜೇಂದ್ರಗಡ, ರೋಣ ಗದಗ ಉಪ ಕೇಂದ್ರದಿಂದ ಪ್ರಕಟಣೆ ಹೊರಡಿಸಲಾಗಿದೆ.



Post a Comment