-->
Bookmark

Gajendragad : ಕಾನೂನು ಬಾಹಿರ ಅಲೆಮಾರಿ ಜನರ ವೈಯಕ್ತಿಕ ದಾಖಲೆ ಸಂಗ್ರಹ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೀರು ರಾಠೋಡ್ ಒತ್ತಾಯ, ಮನವಿ

Gajendragad : ಕಾನೂನು ಬಾಹಿರ ಅಲೆಮಾರಿ ಜನರ ವೈಯಕ್ತಿಕ ದಾಖಲೆ ಸಂಗ್ರಹ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೀರು ರಾಠೋಡ್ ಒತ್ತಾಯ, ಮನವಿ 

ಗಜೇಂದ್ರಗಡ : (Sept_29_2026)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಅಲೆಮಾರಿ ಮತ್ತು ಬುಡಕಟ್ಟು ಸಮನ್ವಯ ಸಮಿತಿ ಗಜೇಂದ್ರಗಡ ತಾಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ನೆಲೆಸಿರುವ ಅಲೆಮಾರಿ ಸಮುದಾಯದವರ ಮೇಲೆ ಅನಧಿಕೃತವಾಗಿ ಒಬ್ಬ ವ್ಯಕ್ತಿ  ದಿನಾಂಕ :-27/09/2026  ರವಿವಾರದಂದು ಅವರ ಸ್ಥಳಕ್ಕೆ ಹೋಗಿ ಅವರ ಮೇಲೆ ದೌರ್ಜನ್ಯವೆಸಗಿ ಅವರ ಮೂಲ ದಾಖಲೆಗಳನ್ನು, ಹಾಗೂ ಪುರಾವೆಗಳಾದ ಆಧಾರ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಕೋಡಿ ನಿವು ಯಾವ ದೇಶದವರು ಅಂತ ಹೇಳಿ ದೌರ್ಜನ್ಯವೆಸಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ ಕಾನೂನು ಬಾಹಿರವಾಗಿ ಅಲೇಮಾರಿ ಜನರನ್ನ ಒಕ್ಕಲೆಬ್ಬಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗಜೇಂದ್ರಗಡ ಠಾಣೆಯ ಪಿಎಸ್ಐ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯ್ತು. ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಗಜೇಂದ್ರಗಡ ಸೌಹಾರ್ದತೆ ಉಳಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಮುಖಂಡರಾದ ಪೀರು ರಾಠೋಡ, ಚನ್ನಪ್ಪ ಗುಗಲೋತ್ತರ, ಚಂದ್ರು ರಾಠೋಡ, ಗಣೇಶ ರಾಠೋಡ, ಅನೀಲ್ ರಾಠೋಡ್, ರೂಪಲೇಶ್ , ಶರಣಪ್ಪ, ಗೌತಮ್ ಇದ್ದರು.
Post a Comment

Post a Comment