ವರವಿ : (Step_08_2026)
ಇಷ್ಟಾರ್ಥ ಸಿದ್ಧಿ, ವರಾ ಬೇಕಾದ್ರೆ, ವರವಿಗೆ ಬನ್ನಿ ಎಂಬ ಮಾತಿದೆ ಎಂದು ಕುಶಲ ಕರ್ಮಿಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಮೌನೇಶ್ ಅಕ್ಕಸಾಲಿಗರ್ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿಯ ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿದ್ದರು. ಜಾತ್ರಾ ಮಹೋತ್ಸವವೂ ಎಲ್ಲ ಸಂಬಂಧಗಳ ಬಾಂಧವ್ಯ ಬೆಲೆಯುವ ಹಬ್ಬ. ಇದು ಜಾತ್ರಾ ಮಹೋತ್ಸ ಅಷ್ಟೆ ಅಲ್ಲ. ಇಲ್ಲಿ ಬಂದು ಎಲ್ಲರು ಒಂದಾಗುತ್ತೇವೆ ಎಂದು ತಿಳಿಸಿದರು.
ಮನಸ್ಸಿಗೆ ಶಾಂತಿ, ನೆಮ್ಮದಿಯೂ ಸಿಗುತ್ತದೆ. ಜೀವನ ಸ್ಪೂರ್ತಿ ಹೆಚ್ಚಾಗುತ್ತದೆ. ಶ್ರೀ ಮೌಮೇಶ್ವರನಲ್ಲಿ ಪ್ರಾರ್ಥಿಸಿದರೇ, ಜಗತ್ತಿಗೆ ಒಳಿತಾಗುವುದು ಎಂದು ಮೌನೇಶ್ವರ ಅಕ್ಕಸಾಲಿಗರ್ ತಮ್ಮ ಅಭಿಪ್ರಾಯ ತಿಳಿಸಿದರು.
ಗಜೇಂದ್ರಗಡದಿಂದ ಕುಶಲ ಕರ್ಮಿಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಮೌನೇಶ್ವರ್ ಅಕ್ಕಸಾಲಿಗರ್, ಮುತ್ತಣ್ಣ ಅಕ್ಕಸಾಲಿಗರ್, ಎಸ್.ಎನ್ ಬಡಿಗೇರ್, ಕುಮಾರ್ ಬಡಿಗೇರ್, ನಾಗಲಿಂಗಪ್ಪ ಪತ್ತಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರವಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿದ್ದು, ಮೊದಲ ದಿನ ರಥೋತ್ಸವ ಅದ್ದೂರಿಯಾಗಿ ಜರುಗಿತು.



Post a Comment