-->
Bookmark

Gajendragad : ಶಾಲೆ ಪಕ್ಕದಲ್ಲೆ ಬಾರ್ & ರೆಸ್ಟೋರೆಂಟ್ : ಅಬಕಾರಿ ಇಲಾಖೆ ಅಧಿಕಾರಿಗಳು & ಶಿಕ್ಷಣ ಇಲಾಖೆ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

Gajendragad : ಶಾಲೆ ಪಕ್ಕದಲ್ಲೆ ಬಾರ್ & ರೆಸ್ಟೋರೆಂಟ್ : ಅಬಕಾರಿ ಇಲಾಖೆ ಅಧಿಕಾರಿಗಳು & ಶಿಕ್ಷಣ ಇಲಾಖೆ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ 
ಗಜೇಂದ್ರಗಡ : 
(May_28_2026)
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಶಾಲೆ ಪಕ್ಕವೇ ಬಾರ್ ತಲೆ ಎತ್ತಿದೆ. ವಿ. ಆರ್ ಬಾರ್ & ರೆಸ್ಟೋರೆಂಟ್ ಶಾಲೆ ಕಾಂಪೌಂಡ್ ನಿಂದ ಕೇಲವೆ ಹೆಜ್ಜೆಗಳ ಅಂತರದಲ್ಲಿದೆ. ಗದಗ ಜಿಲ್ಲೆ ಶಿಕ್ಷಣದಲ್ಲಿ ಬಹಳಷ್ಟು ಹಿಂದುಳಿದಿದೆ. ಶಿಕ್ಷಣ ಕ್ಷೇತ್ರ ಸುಧಾರಣೆಗೆ ಕೆಲ ಸಂಘಟನೆಗಳು, ಸಂಘಗಳು, ಎನ್.ಜಿ.ಒ ಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ಮಟ್ಟದಲ್ಲೂ ಕೆಲ ಕಾರ್ಯಗಳು ನಡೆಯುತ್ತಿವೆ. ಆದ್ರೆ, ಗಜೇಂದ್ರಗಡದಲ್ಲಿ ಅಶಿಕ್ಷಿತರಾದ ಹಿರಿಯರಾದ ಲಾಲಪ್ಪ ರಾಠೋಡ್ ಅವರು ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂಬ ಉದ್ದೇಸದಿಂದ ಶಿಕ್ಷಣ ಸಂಸ್ಥೆ ತೆರೆದಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಬಡವರಿಗೆ ಶಿಕ್ಷಣ ನೀಡುತ್ತಿದ್ದಾರೆ‌  ಆದ್ರೆ, ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಗೆ ಹೊಂದಿಕೊಂಡೆ ವಿ. ಆರ್. ಬಾರ್ & ರೆಸ್ಟೋರೆಂಟ್ ತಲೆ ಎತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 
ಅಬಕಾರಿ ಇಲಾಖೆಯ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇನ್ನೂ, ಕೂಗಳತೆ ಅಂತರದಲ್ಲಿರುವ ಬಾರ್ & ರೆಸ್ಟೋರೆಂಟ್ ಅನ್ನು ಸ್ಥಳಾಂತರಿಸಬೇಕು. ಇಲ್ಲದಿದ್ದರೇ, ಮಕ್ಕಳಿಗೆ ಶಾಲೆಗೆ ಕಳುಹಿಸುವುದಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. 
ಈಗ ಶಾಲಾ ಆರಂಭದ ದಿನವಾಗಿರುವುದರಿಂದ ಎಸ್.ಸಿ ಸಮುದಾಯದ ಶಿಕ್ಷಣ ಸಂಸ್ಥೆಯನ್ನ ಮುಚ್ಚಲು ಎಲ್ಲರೂ ಪಣ ತೊಟ್ಟಂತಿದೆ. ಒಂದು ವೇಳೆ ಪಾಲಕರು ತಮ್ಮ ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂಜರಿದರೆ, ಶಾಲೆಯ ಉನ್ನತಿಗೆ ಹಿನ್ನಡೆಯಾಗಲಿದೆ. 
ಹೀಗಾಗಿ, ನಮ್ಮ ಮಕ್ಕಳನ್ನ ಬಾರ್ & ರೆಸ್ಟೋರೆಂಟ್ ಪಕ್ಕದಲ್ಲಿರುವ ಶಾಲೆಗೆ ಕಳುಹಿಸುವುದಿಲ್ಲ. ಒಂದು ಶಾಲೆ ಇರಲಿ ಇಲ್ಲ. ಬಾರ್ & ರೆಸ್ಟೋರೆಂಟ್ ಇರಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲ ಸಂಘಟನೆಗಳು ಸಹ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.  
ಲೈಸೆನ್ಸ್ ಕೊಡುವಾಗ ಪರಿಶೀಲನೆ ನಡೆಸಬೇಕಾದ ಅಬಕಾರಿ ಇಲಾಖೆ ಕಣ್ಮುಚ್ಚಿರುವುದು ಹಲವು ಅನುಮಾನಗಳು ಕಾಡತೊಡಗಿದೆ.
ಶ್ರೀ ತಿಳಜಾ ಭವಾನಿ ಶಿಕ್ಷಣ ಸಂಸ್ಥೆ ಪಕ್ಕದಲ್ಲೇ ವಿ. ಆರ್ ಬಾರ್ & ರೆಸ್ಟೋರೆಂಟ್ ತೆರೆಯಲು ಅನುಮತಿಸಿದ ಅಬಕಾರಿ ಇಲಾಖೆಯ ಎಲ್ಲ ಅಧಿಕಾರಿಗಳನ್ನ ಕೂಡಲೇ ಅಮಾನತು ಮಾಡಬೇಕು.  ಮತ್ತು ಇಷ್ಟು ದಿನ ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಹ ಅಮಾನತು ಮಾಡಬೇಕೆಂಬ ಆರೋಪಗಳು ಕೇಳಿ ಬಂದಿವೆ. 
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣವನ್ನ ಶಿಕ್ಷಣದ ಹಬ್ ಎಂದು ಕರೆಯುವಾಗ ಇಂತಹ ಘಟನೆ ಪಟ್ಟಣದ ಘನತೆಗೆ ಶಿಕ್ಷಣ ಇಲಾಖೆಗೆ ಚ್ಯುತಿ ಬರುವಂತಹ ಕೆಲಸ ಸಹಿಸಲಾಗದು...!! 

ಮುಂಬರುವ ದಿನಗಳಲ್ಲಿ ಚಿಂತಕರು, ಸಾಹಿತಿಗಳು, ಶಿಕ್ಷಿತರು, ಶಾಲಾ ಮಕ್ಕಳು ಮತ್ತು ಪೋಷಕರು, ಸಂಘಟನೆಗಳು, ಎನ್.ಜಿ.ಒ ಗಳು ಬೀದಿಗಿಳಿದು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. 

ಈ ಮಧ್ಯೆ, ಅಬಕಾರಿ ಇಲಾಖೆ ಹಗರಣದ ಗೂಡಾಗಿದೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹಣ ಕೊಟ್ಟರೆ ಎಲ್ಲಿ ಬೇಕಾದರೂ ಲೈಸನ್ಸ್ ಮಂಜೂರು ಮಾಡುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ರಾಜ್ಯದಲ್ಲಿ ಇದು ಒಂದೆ ಘಟನೆಯಲ್ಲ. ಹಲವಾರು ಘಟನೆಗಳಿವೆ. ಇದೆಲ್ಲದಕ್ಕೂ ಕೊನೆಯಾಗಬೇಕಿದೆ. 

ವರದಿ : 
ಕೃಷ್ಣ ರಾಠೋಡ್
ಸಂಪಾದಕರು 
ಕಿರಾ ನ್ಯೂಸ್ ಕನ್ನಡ
ಸಂಪರ್ಕ : 8197474996
Post a Comment

Post a Comment