Gajendragad : ಶಾಲೆ ಪಕ್ಕದಲ್ಲೆ ಬಾರ್ & ರೆಸ್ಟೋರೆಂಟ್ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಕರ್ನಾಟಕ ಜನಪರ ಸೇವಾ ಸಮಿತಿಯ ಅಧ್ಯಕ್ಷ ಗಣೇಶ್ ಗುಗಲೋತ್ತರ್
ಗಜೇಂದ್ರಗಡ :
(May_28_2026)
ಗಣ ಕರ್ನಾಟಕ ಪತ್ರಿಕೆ ಸಮಾಜ ಸುಧಾರಣೆಗೆ ಮುಂದಾಗಿದೆ. ಈಗ ತಾನೆ ಕರ್ನಾಟಕ ಜನಪರ ಸೇವಾ ಸಮಿತಿಯ ದಶಮಾನೋತ್ಸವ ಆಚರಿಸಿ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿದ ಕಾಳಿ ದೇವಿಯ ಪುತ್ರ ಗಣೇಶ ಗುಗಲೋತ್ತರ್ ಪತ್ರಿಕೋದ್ಯಮದಲ್ಲೂ ತಮ್ಮ ಛಾಪನ್ನ ಮೂಡಿಸಲಿದ್ದಾರೆ.
ಇದಕ್ಕೆ ಮೊದಲ ಸುದ್ದಿ ಎಂಬಂತೆ ಗಜೇಂದ್ರಗಡ ಪಟ್ಟಣದಲ್ಲಿ ಶಾಲೆ ಪಕ್ಕದಲ್ಲೆ ಬಾರ್ & ರೆಸ್ಟೋರೆಂಟ್ ನಡೆಯುತ್ತಿದೆ. ಶಾಲೆ ಪಕ್ಕದಲ್ಲೆ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದು, ತಪ್ಪು ಎಂಬುದು ಸಣ್ಣ ಮಕ್ಕಳಿಗು ತಿಳಿದಿರುವ ವಿಷಯವಾಗಿದೆ. ರಾಜ್ಯ ಸರ್ಕಾರ ಅಬಕಾರಿ ನೀತಿಗಳು ಕೇಲವ ಹಣ ಸಂಗ್ರಹಿಸಲು ಮಾಡುವ ಕೆಲಸ ಎಂದು ಗೋಚರವಾಗುತ್ತಿದೆ. ಶಾಲೆ ಪಕ್ಕದಲ್ಲಿ ಅನುಮತಿಸಬೇಕಾದ್ರೆ ಪಾಲೀಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಸುಪ್ರೀಂ ಕೋರ್ಟ್ ಹೇಳುವ ಕಾನೂನನ್ನೆ ಗಾಳಿಗೆ ತೂರಿ ಬಾರ್ & ರೆಸ್ಟೋರೆಂಟ್ ಗೆ ಅನುಮತಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಜೇಂದ್ರಗಡ ಪಟ್ಟಣದಲ್ಲಿ ಶಿಕ್ಷಣ ಕ್ರಾಂತಿಯಾಗುತ್ತಿದೆ. ಈಧ್ಯೆ, ಅದೇ ಪಟ್ಟಣದಲ್ಲಿ ಶಿಕ್ಷಣದ ಕಗ್ಗೊಲೆ ಮಾಡಲು ಮುಂದಾಗುತ್ತಿರುವುದನ್ನ ಕಂಡು ಕಾಣದಂತಿರಲು ಸಾಧ್ಯವಿಲ್ಲ. ಬಾರ್ & ರೆಸ್ಟೋರೆಂಟ್ ಗೆ ಅನುಮತಿ ನೀಡಿದ ಸಂಭಂಧ ಪಟ್ಟ ಇಲಾಖೆ ಅಧಿಕಾರಿಗಳನ್ನ ಕೂಡಲೆ ಅಮಾನತು ಮಾಡಬೇಕೆಂದು ಕರ್ನಾಟಕ ಜನಪರ ವೇದಿಕೆ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಗಣ ಕರ್ನಾಟಕ ಪತ್ರಿಕೆ ಮುಖ್ಯಸ್ಥರು ಆದ ಗಣೇಶ್ ಗುಗಲೋತ್ತರ್ ಆಗ್ರಹಿಸಿದ್ದಾರೆ.
ತಮ್ಮ ತಮ್ಮ ಲಾಭಕ್ಕಾಗಿ ಅಬಕಾರಿ ಇಲಾಖೆ ನಿಯಮವನ್ನೆ ಗಾಳಿಗೆ ತೂರಿದ್ದು ಸಹಿಸಲಾಗದು. ಮುಂಬರುವ ದಿನಗಳಲ್ಲಿ ಅಬಕಾರಿ ಇಲಾಖೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಗಣೇಶ್ ಗುಗಲೋತ್ತರ್ ಹೇಳಿದ್ದಾರೆ.



Post a Comment