-->
Bookmark

Gajendragad : ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ಆಧಾರ್ ತಿದ್ದುಪಡಿ : ಮಹಾಂತೇಶ್ ಕಾರ್ಯಕ್ಕೆ ಗ್ರಾಹಕರ ಮೆಚ್ಚುಗೆ

Gajendragad : ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ಆಧಾರ್ ತಿದ್ದುಪಡಿ : ಮಹಾಂತೇಶ್ ಕಾರ್ಯಕ್ಕೆ ಗ್ರಾಹಕರ ಮೆಚ್ಚುಗೆ 

ಗಜೇಂದ್ರಗಡ : (May_31_2026)
ನಾನು ಬೇರೆಡೆ ಹೋಗಿ ಆಧಾರ್ ತಿದ್ದುಪಡಿ ಮಾಡಿ ಅಂದಾಗ ಮಾಡಿಲ್ಲ. ಆದ್ರೆ, ಬಿ.ಎಸ್.ಎನ್.ಎಲ್ ನಲ್ಲಿರುವ ಮಹಾಂತೇಶ್ ಬಂಡಿ ಅವರು ನಮಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಟ್ಟಿದ್ದಾರೆ ಎಂದು ರಾಘವೇಂದ್ರ ಹೂಗಾರ್ ಹೇಳಿದ್ದಾರೆ. ಪಟ್ಟಣದ ಇತರೆಡೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲ್ಲ ಅಂದಿದ್ರು. ಆದ್ರೀಗ ಬಿ.ಎಸ್.ಎನ್.ಎಲ್ ನಲ್ಲಿ ನಮ್ಮ ಕಾರ್ಡ್ ತಿದ್ದುಪಡಿ ಮಾಡಿಕೊಟ್ಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಬಿ.ಎಸ್.ಎನ್.ಎಲ್ ಆವರಣದಲ್ಲಿ ಬಹಳಷ್ಟು ಜನರು ಬರುತ್ತಾರೆ. ಆಧಾರ್ ಕಾರ್ಡ್ ತಿದ್ದುಪಡಿ, ಹೊಸ ಕಾರ್ಡ್ ಮಾಡುವವರು ಬಿ.ಎಸ್.ಎನ್.ಎಲ್ ಕಚೇರಿಗೆ ಬನ್ನಿ ನಿಮ್ಮ ಕಾರ್ಡ್ ಸರಿಪಡಿಸಿಕೊಳ್ಳಿ. ಹೊಸ ಕಾರ್ಡ್ ಇದ್ದಲ್ಲಿ ಕೂಡ ನಮ್ಮ ಇತಿಮಿಯಿಯಲ್ಲೆ ಮಾಡಿಕೊಡುತ್ತಾರೆ ಎಂದು ಹೂಗಾರ್ ಹೇಳಿದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವರಾದ ಸುಜಾತಾ ಎಂಬುವವರು ಹೆಸರು ತಿದ್ದುಪಡಿ ಮಾಡಿಸಿಕೊಂಡು  ಹೋಗಿದ್ದಾರೆ. ಬ್ಯಾಂಕ್ ನಲ್ಲಿ ಸಲ್ಲಿಸಲು ಬೇಕಾಗಿತ್ತು. ಹೀಗಾಗಿ ನಮಗೆ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ ಮಹಾಂತೇಶ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ. 

ಇನ್ನೂ, ಮಕ್ಕಳ ಆಧಾರ್ ಕಾರ್ಡ್ ಕೂಡ ಮಾಡಿ ಕೊಡಲ್ಲ ಎಂಬ ಆರೋಪ ವಿತ್ತು. ಆದ್ರೆ, ಮಕ್ಕಳ ಆಧಾರ್ ಕಾರ್ಡ್ ಕೂಡ ಮಾಡಿಕೊಟ್ಟಿದ್ದಾರೆ ಎಂದು ರಾಮಚಂದ್ರಪ್ಪ ರಾಠೋಡ್ ಹೇಳಿದ್ದಾರೆ. ಹೀಗೆ ಪಟ್ಟಣದಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ. 

ಈ ಮಧ್ಯೆ, ಮಹಾಂತೇಶ್ ಬಂಡಿ ಮಾತನಾಡಿ, ನಾವು ಎಲ್ಲರಿಗೂ ಸಮಾನವಾಗಿ ನೋಡುತ್ತೇವೆ. ಗ್ರಾಹಕರು ಬಂದರೆ ವಾಪಸ್ ಕಳಿಸುವುದಿಲ್ಲ‌. ಸುಲಭವಾಗಿ ಮಾಡುವ ಆಧಾರ್ ಕಾರ್ಡ್ ಮಾಡುವವರು ಇದ್ದಾರೆ. ಆದ್ರೆ, ನಾವು ದಾಖಲಾತಿ ಮೇರೆಗೆ ಎಲ್ಲರಿಗೂ ಆಧಾರ್ ಕಾರ್ಡ್ ಮಾಡಿ ಕೊಡುತ್ತೇವೆ ಎಂದು ಮಹಾಂತೇಶ್ ಬಂಡಿ ಮಾಹಿತಿ ನೀಡಿದ್ದಾರೆ. 

ಇದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಿ.ಎಸ್.ಎನ್.ಎಲ್ ನಲ್ಲಿನ ಆಧಾರ್ ತಿದ್ದುಪಡಿ ಕೇಂದ್ರವಾಗಿದೆ.
Post a Comment

Post a Comment