-->
Bookmark

Karwar : ಕಾರವಾರದಲ್ಲಿ ಅಪರೂಪದ ಹಸಿರು ಕಡಲಾಮೆ ಶವ ಪತ್ತೆ


Karwar : 

ಕಾರವಾರದಲ್ಲಿ ಅಪರೂಪದ ಹಸಿರು ಕಡಲಾಮೆ ಶವ ಪತ್ತೆ

ಕಾರವಾರದ ರವೀಂದ್ರನಾಥ ಠಾಗೋರ ಕಡಲ ತೀರದಲ್ಲಿ ಕಡಲಾಮೆಯ ಮೃತ ಶರೀರ ಶುಕ್ರವಾರ ಕಂಡು ಬಂದಿದೆ. ಇದನ್ನು ಹಸಿರು ಸಮುದ್ರ ಆಮೆ (ಗ್ರೀನ್ ಸೀ, ಟರ್ಟಲ್) ಎಂದು ಕಡಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿಜ್ಞಾನಿ  ಜಗನ್ನಾಥ ರಾಠೋಡ ಗುರುತಿಸಿದ್ದಾರೆ.

ಸಾಮಾನ್ಯವಾಗಿ ಕರ್ನಾಟಕದ ಕಡಲ ತೀರದಲ್ಲಿ ಆಲಿವರ್ ರೀಡ್ಲೆ ಜಾತಿಯ ಕಡಲಾಮೆಗಳು ಕಂಡು ಬರುತ್ತವೆ. ಆದರೆ ಗ್ರೀನ್ ಸೀ ಟರ್ಟಲ್ ಕಂಡು ಬರುವುದು ತೀರಾ ಅಪರೂಪ ಎಂದು ಡಾ. ಜಗನ್ನಾಥ್ ರಾಠೋಡ್ ತಿಳಿಸಿದ್ದಾರೆ. 
ಚೆಲೋನಿಯಾ ಮೈಡಾಸ್ ಎನ್ನುವುದು ಇದರ ವೈಜ್ಞಾನಿಕ ಹೆಸರು. ಗ್ರೀನ್ ಸೀ, ಟರ್ಟಲ್ ಈ ಭಾಗದಲ್ಲಿ ಕಾಣ ಸಿಗುವುದು ಅಪರೂಪ. ಮೂರು ತಿಂಗಳ ಹಿಂದೆ ಒಮ್ಮೆ ಗ್ರೀನ್ ಸೀ: ಟರ್ಟಲ್ ಮೃತ ದೇಹ ಕಂಡು ಬಂದಿದ್ದು, ಇದನ್ನು ಕಡಲ ಜೀವಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಸಂರಕ್ಷಿಸಿ ಇರಿಸಲಾಗಿದೆ. 

ಇದು ತಿಳಿ ಹಸಿರು ಬಣ್ಣದ ಕಡಲಾಮೆ, ಸದ್ಯಕ್ಕೆ ಮೀನುಗಾರಿಕೆ ನಡೆಯದ ಕಾರಣಕ್ಕೆ ಮೀನು ಬಲೆಗೆ ಬಿದ್ದ ಸಾಧ್ಯತೆ ಇಲ್ಲ. ಸಮುದ್ರದ ಅಲೆಗೆ ಸಿಲುಕಿ ಯಾವುದಾದರೂ ಬಂಡೆ ಕಲ್ಲಿಗೆ ಅಪ್ಪಳಿಸಿ ಈ ಆಮೆ ಗಾಯಗೊಂಡಿರುವ ಸಾಧ್ಯತೆ ಇದೆ. ಸುಮಾರು 3 ದಿನಗಳ ಹಿಂದೆ ಈ ಆಮೆ ಮೃತಪಟ್ಟಿರಬಹುದು ಎಂದು ವಿವರಿಸಿದ್ದಾರೆ. ಈ ಆಮೆಯ ದೇಹದ ಮೇಲೆ ಬಿಳಿ ಬಣ್ಣದ ಬಟನ್ ಆಕಾರದ ಪರಾವಲಂಬಿ ಜೀವಿಗಳು ಇರುವುದು ಕೂಡ ಕಂಡು ಬಂದಿದೆ ಎಂದು ಕಿರಾ ನ್ಯೂಸ್ ಗೆ ಡಾ. ಜಗನ್ನಾಥ್ ರಾಠೋಡ್ ಮಾಹಿತಿ ನೀಡಿದ್ದಾರೆ.
Post a Comment

Post a Comment